ಮನೆ ಸಾಹಿತ್ಯ ವೈಜ್ಞಾನಿಕ ಸಂಶೋಧನೆ ಕೂಡ ಒಂದು ರೀತಿಯ ಪ್ರಾರ್ಥನೆ

ವೈಜ್ಞಾನಿಕ ಸಂಶೋಧನೆ ಕೂಡ ಒಂದು ರೀತಿಯ ಪ್ರಾರ್ಥನೆ

0

    ಒಮ್ಮೆ ಮಹಾನ್ ಫ್ರೆಂಚ್ ವಿಜ್ಞಾನಿಗಳಾದ ಪಿಯರಿ ಕ್ಯೂರಿಯವರು ತಮ್ಮ ಪ್ರಯೋಗಾಲಯದಲ್ಲಿ ಸೂಕ್ಷ್ಮದರ್ಶಕದ ಮೇಲೆ ತಮ್ಮ  ತಲೆ ಇಟ್ಟು ಕುಳಿತ್ತಿದ್ದರು. ಅವರು ಪ್ರಾರ್ಥನೆ ಮಾಡುತ್ತಿದ್ದಂತೆ ಕಾಣಿಸುತ್ತಿತ್ತು ಆ ಸಮಯದಲ್ಲಿ ಅವರ ವಿದ್ಯಾರ್ಥಿಯೊಬ್ಬ ಅವರನ್ನು ಭೇಟಿಯಾಗಲು ಅಲ್ಲಿಗೆ ಬಂದ.ಅವರು ಪ್ರಾರ್ಥನೆ ಮಾಡುತಿದ್ದರೆಂದು ಭಾವಿಸಿ ವಿದ್ಯಾರ್ಥಿ ಅಲ್ಲಿಂದ ಹೊರಟಳು ಅಣಿಯಾದ. ಆಗ ಕ್ಯೂರಿ ತಮ್ಮ ತಲೆ ಎತ್ತಿದರು. ವಿದ್ಯಾರ್ಥಿಯನ್ನು ಕರೆದರು. ಆಗ ವಿದ್ಯಾರ್ಥಿಯು “ಸರ್, ನೀವು ಪ್ರಾರ್ಥನೆ ಮಾಡುತ್ತಿದ್ದರಿಂದ ನಿಮಗೆ ತೊಂದರೆ ಮಾಡಲು ನನಗೆ ಇಷ್ಟವಾಗಲಿಲ್ಲ” ಎಂದರು.

Join Our Whatsapp Group

 ಆಗ ಮಹಾನ್ ವಿಜ್ಞಾನಿ ಹೀಗೆ ಉತ್ತರಿಸಿದರು :

 ★ ಪ್ರಶ್ನೆಗಳು

1. ವಿಜ್ಞಾನಿಯ ಉತ್ತರವೇನಾಗಿತ್ತು?

2. ಈ ಕಥೆಯ ನೀತಿ ಏನು?

ಉತ್ತರಗಳು

1. “ಮಗೂ, ಕೆಲಸವೂ ಪ್ರಾರ್ಥನೆಯ ಒಂದು ರೂಪವಲ್ಲವೇ ? ಈ ಪ್ರಾರ್ಥನೆಯ ಮೂಲಕವೇ ನಾವು ಅವನಿರುವ ಪಥದಲ್ಲಿ ನಡೆಯಬಲ್ಲೆವು ಇವುಗಳ ಮೂಲಕ ಭಗವಂತನು ನನ್ನ ಆತಂಕ ಸತ್ಯಗಳನ್ನು ಪ್ರಕಟಿಸುತ್ತಾನೆ.ಶ್ರದ್ಧೆಯಿಂದ ನಾವು ನಮ್ಮ ಸಂಶೋಧನೆಗಳನ್ನು ನಡೆಸಿದರೆ ಭಗವಂತನ ಹಲವಾರು ರಹಸ್ಯಗಳನ್ನು ಹೊರಗಡೆವಬಲ್ಲೆವು.”

2. ಅದ್ಭುತಗಳು ಮತ್ತು ರಹಸ್ಯಗಳಿಂದ ವಿಶ್ವವು ಕೂಡಿದೆ.ವೈಜ್ಞಾನಿಕ ಸಂಶೋಧನೆಗಳಿಂದ ನಾವು ವಿಶ್ವದ ಹಲವಾರು ರಹಸ್ಯಗಳನ್ನು ಹೊರಗೆಡ ಬಲ್ಲೆವು ಹಾಗೂ ಮನುಕುಲವನ್ನು ಇನ್ನೂ ಒಂದು ಹೆಜ್ಜೆ ಮುನ್ನಡೆಸಬಲ್ಲೆವು.