ಮನೆ ದೇವಸ್ಥಾನ ಕಳಸ ಕಡತದಲ್ಲಿ ಹೊರನಾಡು ದೇವಾಲಯಕ್ಕೆ ನೀಡಿದ ದಾನದ ಉಲ್ಲೇಖಗಳು

ಕಳಸ ಕಡತದಲ್ಲಿ ಹೊರನಾಡು ದೇವಾಲಯಕ್ಕೆ ನೀಡಿದ ದಾನದ ಉಲ್ಲೇಖಗಳು

0

 ದಾಖಲೆ ಎರಡು.

      ರಉದ್ರಿಸಂ |ಕಾರ್ತಿಕ |ಶು15ಲು | ಅರಮನೆಯಿಂದ ಉಡುಗರೆ  ಕಳು ಹಿದಕ್ಕೆ ಬಿಳಿಗಿ ಗಿರಿಯಂಣ ತಂದ ಕಾಗದ ಬಿಂನವತ್ತಳೆ |ಪ್ರತ್ತಿ| ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ್ಯ ಪದವಾಕ್ಯಪ್ರಮಾಣ ಪಾರಾವಾರಪಾರಿಣ ಯಮನಿಯಮದ್ಯಾಷ್ಟಾಂಗ ಯೋಗನಿರುತರಾದ ಶ್ರಿಂಗೆರ್ರಿ ಶ್ರೀಸಚ್ಚಿದಾನಂದ ಭಾರತ್ತಿ ಸ್ವಾಮಿ|ಗಳವರಿಗೆ | ಕೆಳದಿ ಬಸಪ್ಪ ನಾಯಕರೂ ಮಾಡುವ ಬಿಂನಹಾ ಸಾಂಪ್ರತ್ತ| ಕೆಳದಿರಾಮೇಶ್ವರ| ಯಿಕ್ಕೇರಿ ಅಘೋರೇಶ್ವರ | ಬಿದನೂರ ನೀಲಕಂಠೇಶ್ವರ | ಭುವನಗಿರಿ ಕಾಶಿ ವಿಶ್ವನಾಥ | ಶೃಂಗೇರಿ ಶಾರದಾ ಅಮ್ಮನವರು| ಕೊಲ್ಲೂರು ಮೂಕಾಂಬಿಕೆ| ವೀರಭದ್ರ| ಹೊರನಾಡು ಅನ್ನಪೂರ್ಣ | ಸುಬ್ರಮಣ್ಯ ಮುಂತಾಗಿ ದೇವರ ಸನ್ನಿಧಾನದಲ್ಲಿ ಕಾರ್ತಿಕ ಮಾಸದಲ್ಲಿ ಹಿರಿಯರು ವರ್ಷಂ ಪ್ರತಿ ನಡೆಸಿ ಬರುತ್ತಿದ್ದಂತೆ ದೀಪಾರಾಧನೆಗೆ ನಡೆಸಲು ಮಠ ಪಾರುಪತ್ಯಗಾರ ವೆಂಕಟಜೊಯಿಸನು ಹೇಳಿಕೊಂಡು ಸಂಬಂಧ ಸೂರಾಪಂಡಿತನ ಹಸ್ತೆ ಶಾರದಾ ಅಮ್ಮನವರ ದೀಪಾರಾಧನೆಗೆ ಕಾಣಿಕೆಯನ್ನು ಪೂಜ್ಯರಿಗೆ ಕಾಣಿಕೆ ಉಡುಗೊರೆ ಕಳುಹಿಸಿದೆ |ತ್ತೆಗದಗೊಂಬೆ |ಹಾಗೆ ಮಾಡುವುದು |ನಿಉ ಮಹಾನುಭಾವರು ತಪೋನಿಷ್ಟ ರಾಗಿಹಿಯಲ್ಲಿ ವಿಶೇಷ ಬರಸುವಂಥಾದೆನದೆಯಾಗಿ| ಯಂದು| ಬಿಂನಹವೆಂದುಬರದ ಬಿಂನವತ್ತಳೆ.

Join Our Whatsapp Group

 ವಿವರಣೆ : ಕೆಳದಿ ಬಸಪ್ಪನಾಯಕ ಕ್ರಿ. ಶ. (1740-1755) ಕಾಲದ್ದಾಗಿರುವ ಇಂದು ಶೃಂಗೇರಿ  ಎರಡನೇ ಸಚ್ಚಿದಾನಂದ ಭಾರತಿ ಸ್ವಾಮಿಗಳವರಿಗೆ ಬರೆದದ್ದಾಗಿದೆ. ಕಾರ್ತಿಕ  ಮಾಸದಲ್ಲಿ ಕೆಳದಿ, ಇಕ್ಕೇರಿ, ಬಿದನೂರು, ಭುವನಗಿರಿ ದುರ್ಗಾ, ಶೃಂಗೇರಿ,ಕೊಲ್ಲೂರು, ಹೊರನಾಡು,ಸುಬ್ರಹ್ಮಣ್ಯ, ಮೊದಲಾದ ಕಡೆಗಳಲ್ಲಿ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವವನ್ನು ನಡೆಸುತ್ತಿದ್ದನ್ನು ಮಠದ ಪಾರುಪತ್ಯಗಾರ ವೆಂಕಟಜೋಯೀಸನು ತಿಳಿಸಿದ್ದರಿಂದ ಅದರಂತೆ ಕಾಣಿಕೆ ಮತ್ತು ಪೂಜ್ಯ ಗುರುಗಳಿಗೆ ಕಾಣಿಕೆ ಮತ್ತು ಉಡುಗೊರೆ ಕಳಿಸಿಕೊಟ್ಟದ್ದನ್ನು ತಿಳಿಸುತ್ತದೆ. ಹೊರನಾಡು ಅನ್ನಪೂರ್ಣೇಶ್ವರಿಯೂ ದೀಪಾರಾಧನೆ ನಡೆಯುತ್ತಿತ್ತೆಂಬು ದನ್ನು ತಿಳಿಯಲು ಇದು ತಿಳಿಸುವ ದಾಖಲೆಯಾಗಿದೆ.