ಶ್ಲೋಕ : ಅನುರಾಧೋತ್ತರಾ ಪುಷ್ಯೇ | ರೇವತೀ ರೋಹಿಣೀ ಮೃಗೇ
ಹಸ್ತಚಿತ್ತಾಶ್ವಿಭೇಕುರ್ಯಾತ್ |ವಾಣಿಜ್ಯಂ ದಿವಸೇ ಶುಭೇ||
ಅರ್ಥ: ಅನುರಾಧ,ಉತ್ತರ,ಪುಷ್ಯ,ರೇವತಿ,ರೋಹಿಣಿ,ಮೃಗಶಿರ, ಹಸ್ತ, ಚಿತ್ತ, ಮತ್ತು ಅಶ್ವಿನಿ ಈ ನಕ್ಷತ್ರಗಳಲ್ಲಿಯೂ ಸೋಮವಾರ, ಬುಧವಾರ, ಗುರುವಾರ, ಮತ್ತು ಶುಕ್ರವಾರಗಳಲ್ಲಿಯೂ ಹೊಸದಾಗಿ ವ್ಯಾಪಾರ ಹಾಗೂ ಅಂಗಡಿ ಪ್ರಾರಂಭ ಮಾಡಿದರೆ ವಿಶೇಷ ಲಾಭವಾಗುವದುಂಟು.
ಸರ್ವ ಪದಾರ್ಥಗಳನ್ನು ಖರೀದಿ ಮಾಡಲಿಕ್ಕೆ ಶುಭವು :
ಶ್ಲೋಕ : ಶತತಾರಾಶ್ಚಿನೀ ಚಿತ್ರಾ ಶ್ರವಣ ಸ್ವಾತಿ ಭೇಷುಚ|
ರೇವತ್ಯಾಂಚ ಕ್ರಯಃ ಶ್ರೇಷ್ಠೂಃ ವಿಕ್ರಯೋನ ಕದಾಚನ||
ಅರ್ಥ : ಶತತಾರ ,ಅಶ್ವಿನಿ,ಚಿತ್ರ,ಶ್ರವಣ, ಸ್ವಾತಿ, ರೇವತಿ ಈ ಆರು ನಕ್ಷತ್ರಗಳು ಇರುವ ದಿವಸ ಯಾವುದೇ ವಸ್ತು ಖರೀದಿ ಮಾಡಿದರೂ ಮುಂದೆ ಉತ್ತಮ ಲಾಭ ದೊರೆಯುವುದು. ಈ ನಕ್ಷತ್ರಗಳಿಂದ ದಿನಗಳಲ್ಲಿ ಮಾರಬಾರದು .ಖರೀದಿ ಮಾಡುವ ಈ ಮೇಲಿನ ಶುಭ ನಕ್ಷತ್ರಗಳಲ್ಲಿ ಸೋಮವಾರ,ಶುಕ್ರವಾರ,ಬುಧವಾರ ಹಾಗೂ ಗುರುವಾರ ಇದ್ದರೆ ಹೆಚ್ಚು ಉತ್ತಮ ಲಾಭವಾಗುವುದು.
ಮಾರುತಕ್ಕೆ ಶುಭ ನಕ್ಷತ್ರಗಳು :-
ಶ್ಲೋಕ: ವಿಶಾಖಾಕೃತ್ತಿಕಾಶ್ಲೇಷಾ | ಭರಣಿ ಪೂರ್ವಿ ಕಾತ್ರಯೇ|
ವಿಕ್ರಯಃ ಸತ್ತಿಥಾನೇಷು | ಕರ್ತವ್ಯೋ ನಕ್ರಯಃ ಶುಭಃ||
ಅರ್ಥ : ವಿಶಾಖಾ, ಕೃತಿಕಾ, ಆಶ್ಲೇಷ, ಭರಣಿ, ಹುಬ್ಬ, ಪೂರ್ವಾಷಾಡ, ಪೂರ್ವ ಭಾದ್ರ ಈ ಏಳು ನಕ್ಷತ್ರಗಳಲ್ಲಿಯೂ ಶುಭ ತಿಥಿ(2-3-5-7-10-12-13-)ಗಳಲ್ಲಿಯೂ ಮಾರಿದರೆ ಉತ್ತಮ ಲಾಭವಾಗುವುದು ಈ ಮೇಲಿನ ನಕ್ಷತ್ರಗಳಲ್ಲಿ ಹಾಗೂ ತಿಥಿಯಲ್ಲಿ ಖರೀದಿ ಮಾಡಬಾರದು.