ಮನೆ ರಾಜ್ಯ ದೇವನೂರು ಮಹಾದೇವ ಅವರ ಮನವಿ ಕುರಿತು ಸರ್ಕಾರ ನಿರ್ಧರಿಸಲಿದೆ: ರೋಹಿತ್ ಚಕ್ರತೀರ್ಥ

ದೇವನೂರು ಮಹಾದೇವ ಅವರ ಮನವಿ ಕುರಿತು ಸರ್ಕಾರ ನಿರ್ಧರಿಸಲಿದೆ: ರೋಹಿತ್ ಚಕ್ರತೀರ್ಥ

0

ತುಮಕೂರು (Tumkur)- ಖ್ಯಾತ ಸಾಹಿತಿ ದೇವನೂರು ಮಹಾದೇವ ಅವರ ಮನವಿ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಎಂದು ಕರ್ನಾಟಕ ಸರಕಾರದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸ್ಪಷ್ಟಪಡಿಸಿದ್ದಾರೆ.

ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, 10ನೇ ತರಗತಿ ಕನ್ನಡ ಪಠ್ಯ ಪುಸ್ತಕದಲ್ಲಿ ಸೇರ್ಪಡೆಗೊಂಡಿರುವ ತಮ್ಮ ಕೃತಿಗಳನ್ನು ತೆಗೆದುಹಾಕುವಂತೆ ದೇವನೂರು ಮಹಾದೇವ ಅವರ ಮನವಿ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.

ಸಮಿತಿಯು ತನ್ನ ಕೆಲಸವನ್ನು ಮಾಡಿದೆ ಮತ್ತು ಪರಿಷ್ಕೃತ ಪುಸ್ತಕಗಳು ಈಗಾಗಲೇ ವಿದ್ಯಾರ್ಥಿಗಳಿಗೆ ಲಭ್ಯವಿದೆ ಎಂದು ಹೇಳಿದ್ದಾರೆ. 

ಪಠ್ಯಪುಸ್ತಕದಲ್ಲಿ ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರ ಭಾಷಣ ಸೇರ್ಪಡೆಗೊಳಿಸಿದ್ದರ ಕುರಿತು ಮಾತನಾಡಿ, ಆರ್‌ಎಸ್‌ಎಸ್ ಸಂಸ್ಥಾಪಕರು ಬಂಗಾಳ ಪ್ರಾಂತ್ಯದ ಅನುಶೀಲನಾ ಸಮಿತಿಯ ಸದಸ್ಯರಾಗಿ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಅವರು ಸ್ವಾತಂತ್ರ್ಯ ಹೋರಾಟಗಾರ ಎಂದು ಸಮರ್ಥಿಸಿಕೊಂಡರು.

ಸ್ವಾತಂತ್ರ್ಯದ ಮೊದಲು ಅವರು ಕಾಂಗ್ರೆಸ್‌ನಲ್ಲಿದ್ದರು ಮತ್ತು 1921 ರಲ್ಲಿ ಪಕ್ಷದ ಸಂಘಟನೆಗಾಗಿ ನಾಗ್ಪುರದಲ್ಲಿ ಅಧಿವೇಶನವನ್ನು ನಡೆಸಿದ್ದರು ಎಂದು ಎಷ್ಟು ಜನರಿಗೆ ಗೊತ್ತು?. ಅವರು ಸಾಯುವವರೆಗೂ ಯಾವುದೇ ರಾಜಕೀಯ ಪಕ್ಷದ ಪರವಾಗಿ ನಿಲ್ಲಲಿಲ್ಲ. ಮಹಾತ್ಮ ಗಾಂಧಿಯವರು ಅಸಹಕಾರ ಚಳವಳಿಯನ್ನು ಮಧ್ಯದಲ್ಲಿ ಕೈಬಿಟ್ಟಾಗ, ಹೆಡ್ಗೆವಾರ್ ಗಾಂಧಿಯಿಂದ ಬೇರ್ಪಟ್ಟರು ಎಂದು ತಿಳಿಸಿದರು. ಇದೇ ವೇಳೆ ಲೇಖಕ ಚಕ್ರವರ್ತಿ ಸೂಲಿಬೆಲೆಯವರನ್ನು ಸಮರ್ಥಿಸಿಕೊಂಡರು.