ಮನೆ ಆರೋಗ್ಯ ದಿನಕ್ಕೆ ಎಷ್ಟು ಮೊಟ್ಟೆ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು?: ವೈದ್ಯರ ಸಲಹೆ ಎನು ಗೊತ್ತಾ ?

ದಿನಕ್ಕೆ ಎಷ್ಟು ಮೊಟ್ಟೆ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು?: ವೈದ್ಯರ ಸಲಹೆ ಎನು ಗೊತ್ತಾ ?

0

ಕಡಿಮೆ ವೆಚ್ಚದಲ್ಲಿ ಹೆಚ್ಚು ಪೋಷಕಾಂಶಗಳನ್ನು ಒದಗಿಸುವ ಆಹಾರವೊಂದಿದ್ದರೆ ಅದು ಮೊಟ್ಟೆ. ವೆಜಟೇರಿಯನ್, ನಾನ್ ವೆಜಟೇರಿಯನ್, ಈಗ ಎಗ್ಟೇರಿಯನ್ ಪದ ಬಳಕೆಗೆ ಬಂದಿದೆ. ಪ್ರತಿದಿನ ಒಂದೊಂದು ಎಗ್​ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞ ವೈದ್ಯರು ಹೇಳುತ್ತಾರೆ.  

ತಜ್ಞರು ಹೇಳುವಂತೆ ಮೊಟ್ಟೆಯು ನಮಗೆ ಅಗತ್ಯವಾದ ಪ್ರೊಟೀನ್‌ಗಳನ್ನು ಒದಗಿಸುವುದಲ್ಲದೆ, ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಆರೋಗ್ಯವಂತ ವ್ಯಕ್ತಿಯು ಪ್ರತಿದಿನ ಒಂದು ಸಂಪೂರ್ಣ ಮೊಟ್ಟೆಯನ್ನು ಸೇವಿಸಬಹುದು. ಪೌಷ್ಟಿಕತಜ್ಞರು ವಾರಕ್ಕೆ 7 ರಿಂದ 10 ಮೊಟ್ಟೆಗಳನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ವ್ಯಾಯಾಮ ಮಾಡುವವರಿಗೆ ಮತ್ತು ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋಟೀನ್ ಅಗತ್ಯವಿರುತ್ತದೆ. ಅಂತಹವರು ದಿನಕ್ಕೆ ನಾಲ್ಕೈದು ಮೊಟ್ಟೆಗಳನ್ನು ತಿನ್ನಬಹುದು ಎಂದು ವೈದ್ಯರು ಸೂಚಿಸುತ್ತಾರೆ. ಇದು ಉತ್ತಮ ಕೊಲೆಸ್ಟ್ರಾಲ್ ಅನ್ನು ಉತ್ತೇಜಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಆದರೆ, ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ವೈದ್ಯರ ಸಲಹೆಯಂತೆ ಮೊಟ್ಟೆ ತಿನ್ನಬೇಕು. ಮೊಟ್ಟೆ ತಿಂದರೆ ಕೊಲೆಸ್ಟ್ರಾಲ್ ಹೆಚ್ಚುತ್ತದೆ ಎಂಬುದು ಕಟ್ಟುಕಥೆ ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ಇಡೀ ಮೊಟ್ಟೆಯು 13 ಗ್ರಾಂ ಪ್ರೋಟೀನ್ ಅನ್ನು ಒದಗಿಸುತ್ತದೆ. ನೀವು ಅದೇ ಮೊಟ್ಟೆಯ ಬಿಳಿಭಾಗವನ್ನು ತೆಗೆದುಕೊಂಡರೆ, ನೀವು 6 ಗ್ರಾಂ ಪ್ರೋಟೀನ್​ಗಳನ್ನು ಪಡೆಯುತ್ತೀರಿ. ಮೊಟ್ಟೆಯ ಮೇಲೆ ಬೆಣ್ಣೆ ಹಾಕದೆ ಅದನ್ನು ಸಾಮಾನ್ಯವಾಗಿ ತೆಗೆದುಕೊಳ್ಳಲು ಸೂಚಿಸಲಾಗುತ್ತದೆ.

ಚರ್ಮ, ಕೂದಲು ಮತ್ತು ಉಗುರುಗಳಂತಹ ದೇಹದ ಭಾಗಗಳ ಆರೋಗ್ಯದಲ್ಲಿ ಕೋಳಿ ಮೊಟ್ಟೆಗಳು ಪ್ರಮುಖ ಪಾತ್ರವಹಿಸುತ್ತವೆ. ಕಣ್ಣಿನ ದೃಷ್ಟಿ ಹಾಗೂ ಜ್ಞಾಪಕ ಶಕ್ತಿ ವೃದ್ಧಿಗೆ ಮೊಟ್ಟೆ ತುಂಬಾ ಸಹಕಾರಿಯಾಗಿದೆ. ಮೊಟ್ಟೆಯು ಮೂಳೆಗಳಿಗೆ ಬಲವನ್ನು ನೀಡುತ್ತದೆ. ಮತ್ತು ಹೃದಯದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಆದ್ರೆ, ಅಧಿಕ ರಕ್ತದೊತ್ತಡ ಹೊಂದಿರುವ ಜನರು ಮೊಟ್ಟೆಗಳನ್ನು ಸೇವಿಸಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ.

ಅಗತ್ಯವಿದ್ದರೆ, ಮೊಟ್ಟಿಯಲ್ಲಿರುವ ಹಳದಿ ಭಾಗವನ್ನು ತೆಗೆದುಕೊಳ್ಳಬಾರದು, ಬಿಳಿ ಭಾಗವನ್ನು ಮಾತ್ರ ತಿನ್ನಬೇಕು ಎಂದು ಹೇಳಲಾಗುತ್ತದೆ. ಹಳದಿ ಲೋಳೆಯಲ್ಲಿ ಕೊಬ್ಬಿನ ಶೇಕಡಾವಾರು ಪ್ರಮಾಣ ಸ್ವಲ್ಪ ಹೆಚ್ಚಾಗಿರುತ್ತದೆ. ಬಿಳಿ ಲೋಳೆಯು ಕಡಿಮೆ ಹಾನಿಕಾರಕವಾಗಿದೆ. ಮಧುಮೇಹ ಇರುವವರು ತಮ್ಮ ಆಹಾರದಲ್ಲಿ ಮೊಟ್ಟೆಯನ್ನು ತೆಗೆದುಕೊಳ್ಳುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಲಾಗುತ್ತದೆ. ವಾರಕ್ಕೆ ಎರಡು ಅಥವಾ ಮೂರು ಮೊಟ್ಟೆಗಳನ್ನು ಸೇವಿಸುವುದರಿಂದ ಯಾವುದೇ ಅಪಾಯವಿಲ್ಲ ಎಂದು ಖ್ಯಾತ ವೈದ್ಯೆ ಶ್ರೀಲತಾ ಸಲಹೆ ನೀಡುತ್ತಾರೆ. ಕಿಡ್ನಿ ವೈಫಲ್ಯ ಇರುವವರು ಮೊಟ್ಟೆ ಸೇವಿಸಬೇಕು. ಮತ್ತು ಮೊಟ್ಟೆಯ ಸೇವನೆಯು ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.