ಮನೆ ಸಾಹಿತ್ಯ ಸಹನೆ ಎಂಬ ಸದ್ಗುಣವನ್ನು ಬೆಳೆಸಿಕೊಳ್ಳಿ

ಸಹನೆ ಎಂಬ ಸದ್ಗುಣವನ್ನು ಬೆಳೆಸಿಕೊಳ್ಳಿ

0

  ಸರ್ ಐಸಾಕ್ ನ್ಯೂಟನ್ ನಾಯಿಯೊಂದನ್ನು ಸಾಕಿದ್ದರು. ಅದನ್ನು ಬಹಳ ಪ್ರೀತಿಸುತ್ತಿದ್ದರು. ಆದರೆ ಅದು ಬಹಳ ತುಂಟ ಪ್ರಾಣಿ. ಅದರ ಹೆಸರು ಡೈಮಂಡ್. ಒಮ್ಮೆ ರಾತ್ರಿ ನ್ಯೂಟನ್ ಮನೆಯಲ್ಲಿ ಇಲ್ಲದಿದ್ದಾಗ ಡೈಮಂಡ್ ಉರಿಯುತ್ತಿದ್ದ ಮೇಣದ ಬತ್ತಿಯನ್ನು ತಳ್ಳಿ ಹಾಕಿತು. ಆಗ ಮೇಜಿನ ಮೇಲಿದ್ದ ಅವರ ಪುಸ್ತಕ ಸುಟ್ಟುಹೋಯಿತು ಅದು ಅವರ ಎಂಟು ವರ್ಷಗಳ ಕಾಲದ ಕಠಿಣ ಪರಿಶ್ರಮದ ಪ್ರತಿಫಲವಾಯಿತು. ನ್ಯೂಟನ್  ಮನೆಗೆ ವಾಪಸ್ಸಾದಾಗ ಆ ದುರಂತವನ್ನು ನೋಡಿದರು. ಅಪಘಾತಕ್ಕೆ ಅವರ ಪ್ರತಿಕ್ರಿಯೆ ಹೇಗಿತ್ತು

 ★ಪ್ರಶ್ನೆಗಳು

1.ನ್ಯೂಟನ್ ಪ್ರತಿಕ್ರಿಯೆ ಏನಾಗಿತ್ತು?

  2.ಈ ಕಥೆಯ ನೀತಿ ಏನು?

★ ಉತ್ತರಗಳು

1.ಸರ್ ಐಸಕ್ ನ್ಯೂಟನ್ ನಾಯಿ ಡೈಮಂಡ್ ಅನ್ನು ತಮ್ಮ ಹತ್ತಿರ ಕರೆದು “ಡೈಮಂಡ್.ನಿನ್ನ ಮಾಲೀಕನು ಕೊಟ್ಟಿರುವ ತೊಂದರೆ ಹಾಗೂ ಪರಿಶ್ರಮದ ಬಗ್ಗೆ ನಿನಗೆ ಸ್ವಲ್ಪವೂ ಗೊತ್ತಿಲ್ಲ” ಎಂದು ಹೇಳಿದರು.ಬಹಳಷ್ಟು ಜನರು ಭಾವಿಸುವಂತೆ ಅವರು ತಮ್ಮ ಮಹತ್ತರವಾದ ಕೆಲಸದ ನಷ್ಟ ಎಂದು ಭಾವಿಸಲಿಲ್ಲ. ಮತ್ತೆ ಸಮಾಧಾನವಾಗಿ ಎಲ್ಲವನ್ನು ಆರಂಭಿಸಿದರು.

 2.ತಾಳ್ಮೆಯು ಯಶಸ್ಸಿನ ಕೀಲಿ. ಭಾವನಾತ್ಮಕವಾಗಿ ಅತಂಕ್ಕೊಳಗಾಗುವ  ವ್ಯಕ್ತಿಗಳು ಸರಿಯಾದ ದೃಷ್ಟಿಯಲ್ಲಿ ವಿಷಯವನ್ನು ಅರಿಯಲು ವಿಫಲರಾಗುತ್ತಾರೆ. ಗಟ್ಟಿ  ವ್ಯಕ್ತಿತ್ವದ ವ್ಯಕ್ತಿಯು ತನ್ನ ಭಾವನೆಗಳನ್ನು ನಿಯಂತ್ರಿಸಲು ಸಮರ್ಥನಾಗಿರುತ್ತಾನೆ. ತನ್ನ ಬುದ್ಧಿಯನ್ನು ಪೂರ್ಣ ಸಾಮರ್ಥ್ಯದಲ್ಲಿ ಬಳಸಲು ಸಾಮರ್ಥ್ಯವಾಗುತ್ತಾನೆ. ಇಂತಹ ವ್ಯಕ್ತಿಗಳು ಸಂಕಷ್ಟದ ಸಮಯದಲ್ಲೂ ಶಾಂತರಾಗಿರುತ್ತಾರೆ. ಎಂದೂ ಸುಲಭವಾಗಿ ಉದ್ರಿಕ್ತರಾಗುವುದಿಲ್ಲ. ಹೀಗಾಗಿ ವಾಸ್ತವದೊಂದಿಗೆ ತಮ್ಮ ಆದರ್ಶಗಳನ್ನು ಸೂಕ್ತವಾಗಿ ಹೊಂದಿಸಲು ಸಮರ್ಥರಾಗಿರುತ್ತಾರೆ.