ಮನೆ ಸಾಹಿತ್ಯ ನಮ್ಮ ಜೀವನದ ನಿರ್ಧಾರಕರು ನಾವೇ

ನಮ್ಮ ಜೀವನದ ನಿರ್ಧಾರಕರು ನಾವೇ

0

      ಒಂದು ಕುಟುಂಬ ಹೇಗಿರುತ್ತದೆ: ತಂದೆ ಸಾಹಿತ್ಯ, ತತ್ವಶಾಸ್ತ್ರಗಳನ್ನು ಮಕ್ಕಳೆದುರಿನಲ್ಲಿ ಓದುತ್ತಿರುತ್ತಾರೆ.ತಾಯಿ ಪ್ರತಿದಿನ ನೀತಿ ಕಥೆಗಳನ್ನು ಮಕ್ಕಳಿಗೆ ಹೇಳುತ್ತಾರೆ, ಸಂಗೀತ ಕೇಳುತ್ತಾರೆ. ಅಜ್ಜಿ ಮಕ್ಕಳಿಗೆ ಭಜನೆ ಪದ್ಯಗಳನ್ನು ಹಾಡುವುದನ್ನು ಕಲಿಸುತ್ತಾರೆ.ಅಜ್ಜ ಪ್ರತಿದಿನ ಪುರಾಣ ವಾಚನ ಮಾಡುತ್ತಾರೆ.

Join Our Whatsapp Group

     ಎರಡನೆಯ ಕುಟುಂಬದ ಪರಿಸ್ಥಿತಿ ಇದಕ್ಕಿಂತ ತೀರಾ ಭಿನ್ನವಾಗಿದೆ.ತಂದೆಗೆ ಅಕ್ಷರ ಅಭ್ಯಾಸವಿದೆ ಆದರೆ ಓದುವುದಿಲ್ಲ. ತಾಯಿ ಮತ್ತು ಹಚ್ಚ ಕೂಲಿ ಮಾಡುತ್ತಾರೆ.ಅಜ್ಜಿಗೆ ಮೊಮ್ಮಕ್ಕಳನ್ನು ಕಂಡರೆ ಆಗುವುದಿಲ್ಲ. ತಂದೆ ಪ್ರತಿದಿನ ಶರಾಬು ಕುಡಿದುಕೊಂಡು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿರುತ್ತಾರೆ. ತಾಯಿ ಆಗಾಗ ದನಿ ಎತ್ತಿ ಕಿರುಚಾಡುತ್ತಾ ತಂದೆಗೆ ಶಾಪ ಹಾಕುತ್ತಿರುತ್ತಾರೆ. ಅಜ್ಜಿ ಅಜ್ಜನಿಗೆ ಬೈದಾಡುತ್ತಿರುತ್ತಾರೆ ಅಜ್ಜ ಯಾರೇನೇ ಆಡಿದರೂ ಮೌನವಾಗಿ ಇರುತ್ತಾನೆ.

       ಈ ಎರಡು ಕುಟುಂಬಗಳಲ್ಲಿ ಯಾವ ಕುಟುಂಬದಿಂದ ಬಂದ ಮಕ್ಕಳು ಚೆನ್ನಾಗಿ ಅಭ್ಯಾಸ ಮಾಡುತ್ತಾರೆ,. ಒಳ್ಳೆಯ ತನಡವಳಿಕೆಯನ್ನು ರೂಢಿಸಿಕೊಳ್ಳುತ್ತಾರೆ ಎನ್ನುವುದು ಮೇಲ್ನೋಟಕ್ಕೇನೆ ಆಧಾರವಾಗುತ್ತದೆ.ಒಂದನೆಯ ಕುಟುಂಬದಿಂದ ಬಂದ ಮಕ್ಕಳಿಗೆ ಒಳ್ಳೆಯ ನಡವಳಿಕೆಗಳು ಕುಟುಂಬದಲ್ಲಿಯೇ ರೂಢಿ ಯಾಗಿರುತ್ತವೆ. ಓದಿನ ಆಸಕ್ತಿ ಮತ್ತು ರೂಢಿ ಎರಡೂ ಮನೆಯಲ್ಲೇ ಆಗಿರುತ್ತದೆ. ಆದ್ದರಿಂದ ಅವರು ಚೆನ್ನಾಗಿ ಅಭ್ಯಾಸವನ್ನು ಮಾಡುತ್ತಾರೆ.ಸವಾಲು ಇರುವುದು ಎರಡನೆಯ ಕುಟುಂಬದಿಂದ ಬಂದಿರುವ ಮಗುವಿಗೆ. ಒಳ್ಳೆಯ ನಡವಳಿಕೆಯನ್ನು ಬೆಳೆಸಿಕೊಳ್ಳಲು ಮತ್ತು ಚೆನ್ನಾಗಿ ಅಭ್ಯಾಸವನ್ನು ಮಾಡಲು ಪ್ರತಿಕೂಲವಾದ ಪರಿಸ್ಥಿತಿಯಲ್ಲಿ ಆ ಮಗು ಬಾಳುತ್ತಿದೆ. ಮಗುವಿನ ಅಸಭಾವಿಕವಾಗಿ ರೂಢಿಯಾಗುವ ನಡವಳಿಕೆಗಳನ್ನು ಮತ್ತು ಆಲೋಚನೆಗಳು ವಿನಾಶಾತ್ಮಕ  ಸ್ವರೂಪವಾದ್ದಾಗಿರುತ್ತದೆಯೆ ಹೊರತು  ವಿಕಾಸಾತ್ಮಕ ಸ್ವರೂಪದ್ದಾಗಿರುವುದಿಲ್ಲ ಪ್ರಬಲ ಇಚ್ಛಾ ಶಕ್ತಿಯನ್ನು ಹೊಂದಿಲ್ಲದೆ ಇದ್ದರೆ ಇಂತಹ ಕುಟುಂಬದಿಂದ ಬಂದ ಮಕ್ಕಳು ಒಂದೋ ಸಮಾಜ ಘಾತುಕರಾಗಿ ಬಿಡುತ್ತಾರೆ, ಅಥವಾ ಏನನ್ನು ಸಾಧಿಸಲು ಆಗದೆ ಇರುವ ;ಹುಟ್ಟಿದಕ್ಕೆ ಸಾಯುವವರೆಗೆ ಹೇಗಾದರೂ ಬದುಕುಳಿಯುವ ನಿಸ್ತೇಜ, ನಿಷ್ಕ್ರಿಯ ಜೀವಿಗಳಾಗುತ್ತಾರೆ.ಅಂತಹವರಿಗೆ ಒಂದು ಸ್ವತಂತ್ರ ವ್ಯಕ್ತಿತ್ವವೇ ಪ್ರಾಪ್ತವಾಗುವುದಿಲ್ಲ.

     ಆದರೆ ಎರಡನಯ ಕುಟುಂಬದಿಂದ ಬಂದ ಮಕ್ಕಳ ಕುಟುಂಬಕ್ಕೂ ಕೂಡ ಮಕ್ಕಳು ಹಾಳಾಗಲಿ ಎಂಬ ಭಾವನೆ ಇರುವುದಿಲ್ಲ ಆದರೆ ತಮ್ಮ ನಡವಳಿಕೆಗಳು ತಮ್ಮ ಮಕ್ಕಳ ವಿಕಾಸಕ್ಕೆ ವಿರುದ್ಧಾತ್ಮಕ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂಬ ಪ್ರಜ್ಞೆ ಇಟ್ಟುಕೊಂಡು ಅವರು ವರ್ತಿಸುವುದಿಲ್ಲ,ಅಥವಾ ತಮ್ಮ ವರ್ತನೆಗಳನ್ನು ತಿಳಿದುಕೊಳ್ಳಲಾರದ ನೋವು ಮತ್ತು ಸಂಕಟದ ಪರಿಸ್ಥಿತಿ ಅವರದ್ದಾಗಿರುತ್ತದೆ.ಈ ಸನ್ನಿವೇಶವನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು. ಹಾಗೆ ಅರ್ಥ ಮಾಡಿಕೊಂಡರೆ ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ಗುರುತಿಸುವ ಸಾಮರ್ಥ್ಯವು ಮಕ್ಕಳಿಗೆ ಬರುತ್ತದೆ.ನಂತರ ಸಹಜವಾಗಿ ತನ್ನಲ್ಲಿ ರೂಢಿಯಾಗುವ ವಿನಾಶಾತ್ಮಕ ಪ್ರವೃತ್ತಿಯನ್ನು ಪ್ರಜ್ಞಾಪೂರ್ವಕ ಇಚ್ಛಾಶಕ್ತಿಯಿಂದ ಪ್ರತಿರೋಧಿಸುವಕೊಂಡೇ ವಿಕಾಸಾತ್ಮಕ ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕು. ಆಗ ನಮ್ಮ ಬದುಕನ್ನು ನಾವೇ ನಿರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.