ಮನೆ ಯೋಗಾಸನ ಯೋಗಾಸನ

ಯೋಗಾಸನ

0

ವಿರಂಚಿ ಎಂಬುದು ತ್ರಿಮೂರ್ತಿಗಳಲ್ಲೊಬ್ಬನಾದ ಚತುರ್ಮುಖ ಬ್ರಹ್ಮನ ಹೆಸರುಗಳಲ್ಲೊಂದು ಪ್ರಪಂಚದ ಸೃಷ್ಟಿಕರ್ಮದ ಹೊಣೆ ಈತನದು.

Join Our Whatsapp Group

ಅಭ್ಯಾಸ ಕ್ರಮ

1. ಮೊದಲು, ನೆಲದ ಮೇಲೆ ಕುಳಿತು, ಕಾಲುಗಳನ್ನು ಮುಂಗಡಿಗೆ ನೇರವಾಗಿ ಚಾಚಿಡಬೇಕು.

2. ಬಳಿಕ ಬಲಮಂಡಿಯನ್ನು ಬಗ್ಗಿಸಿ,ಬಲ ಪಾದವನ್ನು ಎಡತೊಡೆಯ ಮೂಲಕ್ಕೆ ಸೇರಿಸಿ ಅರ್ಧಪದ್ಮಾಸನದಲ್ಲಿಡಬೇಕು.

3. ಆಮೇಲೆ,ಎಡಮಂಡಿಯನ್ನು ಬಗ್ಗಿಸಿ, ಬಲಪಾದವನ್ನು ಮುಂಡದ ಬಳಿಗೆ ತಂದು,ಎಡಗಾಲಗಿಣನ್ನು ಎರಡೂ ಕೈಗಳಿಂದ ಹಿಡಿದುಕೊಳ್ಳಬೇಕು.ಬಳಿಕ ಉಸಿರನ್ನು ಹೊರಕ್ಕೆಬಿಟ್ಟು ಎಡತೊಡೆಯನ್ನು ಮೇಲ ಕ್ಕೆಳೆದು, ಬೆನ್ನಿನ ಹಿಂಬದಿಗೆ  ಸೇರಿಸಬೇಕು.ಆಗ ಎಡಗಾಲ ಗಿಣ್ಣಿನ ಮೇಲ್ಭಾಗದ ಹೊರಬದಿಯು ಕತ್ತಿನ ಹಿಂಬದಿಗೆ ಒತ್ತಿಕೊಂಡಿರುವಂತೆ ಅಳವಡಿಸಬೇಕು.

4. ಅನಂತರ, ತಲೆ ಕತ್ತುಗಳನ್ನು ಮೇಲೆತ್ತಿ,ಬೆನ್ನನ್ನು ನೇರವಾಗಿ ನಿಲ್ಲಿಸಿ, ಎಡಗಾಲಗಿಣ್ಣಿನ ಮೇಲಿನ ಹಿಡಿತವನ್ನು ಬಿಡಿಸಬೇಕು.

5. ಆಮೇಲೆ, ಎಡ ತೋಳನ್ನು ಮೇಲಕ್ಕೆ ನೇರವಾಗಿ ಎತ್ತಿ,ಮೊಣಕೈಯಲ್ಲಿ ಬಗ್ಗಿಸಿ, ಅದನ್ನು ಕತ್ತಿನ ಹಿಂಬದಿಗೆ ತಂದಿರಿಸಿದ್ದ ಎಡಗಾಲಿನ ಮೇಲಿರಬೇಕು. ಬಳಿಕ ಬಳ ತೋಳನ್ನು ತಗ್ಗಿಸಿ, ಮೊಣ ಕೈಯಲ್ಲಿ ಬಾಗಿಸಿ,ಬಲಗೈ ಮುಂದೋಳನ್ನು ಬೆನ್ನಿನ ಹಿಂದೆ ಮೇಲೆತ್ತುತ್ತ, ಅದನ್ನು ಬಲಗೈಯ ಮತ್ತು ಹೆಗಲೆಲುಬುಗಳ ಮಟ್ಟಕ್ಕೆ ತಂದು, ಅವುಗಳ ನಡುತಾನದಲ್ಲಿರಬೇಕು. ಆ ಬಳಿಕ ಕೈಗಳೆರಡನ್ನೂ ಬೆನ್ನಿನ ಹಿಂದೆ ಒಂದಕ್ಕೊಂದು ಹೆಣೆದು, ಭುಜಗಳ ಮಧ್ಯಭಾಗದಲ್ಲಿ ಅವ ನ್ನಿರಿಸಬೇಕು.

6. ಈ ಭಂಗಿಯಲ್ಲಿ ಸಾಮಾನ್ಯ ರೀತಿಯಿಂದ ಉಸಿರಾಟ ನಡೆಸುತ್ತ ಸುಮಾರು ಹತ್ತು ಇಪ್ಪತ್ತು ಸೆಕೆಂಡುಗಳಕಾಲ ನೆಲೆಸಬೇಕು. ಬಳಿಕ ಕೈ ಹೆಣೆತವನ್ನು ಸಡಿಲಿಸಿ, ಎಡಗಾಲನ್ನು ಕೆಳಕ್ಕಿಳಿಸಿ,ಬಲಗಾಲನ್ನು ನೇರ ಮಾಡಿ, ಒಂದನೆಯ ಪ ಹಂತಕ್ಕೆ ಮತ್ತೆ ಬರಬೇಕು.

7. ಈ ಭಂಗಿಯನ್ನು ಇನ್ನೊಂದು ಕಡೆಯೂ ಪುನರಾವರ್ತಿಸಿ,ಅದರಲ್ಲಿ ಅಷ್ಟೇ ಕಾಲ ನೆಲೆಸಬೇಕು.ಇದರಲ್ಲಿ ‘ಎಡ ‘ ‘ಬಲ’ಪದಗಳ ಎರಡೆಯಲ್ಲಿ ’ಬಲ’, ‘ಎಡ’ ಪದಗಳನ್ನು ಅಳವಡಿಸಿ ಇದರಂತೆ ಅಭ್ಯಾಸ ಮಾಡಬೇಕು.

 ವಿರಿಂಚ್ಯಾಸನ 2:-

1. ಮೊದಲು, ನೆಲದಮೇಲೆ ಕುಳಿತು, ಮುಂಗಡೆಗೆ ನೆರವಾಗಿ ಕಾಲುಗಳನ್ನು ಚಾಚಿಡಬೇಕು.

2. ಆ ಬಳಿಕ ಎಡಗಾಲನ್ನು ಮಂಡಿಯಲ್ಲಿ ಮಂಡಿಸಿ, ಅದನ್ನು ಹಿಂದಕ್ಕೆ ಸಡಿಲಿಸಬೇಕು. ಆಮೇಲೆ ಎಡಪಾದವನ್ನು ಟೊಂಕದ ಕೀಲಬಳಿಯಿಟ್ಟು ಕಾಲ್ಬೆರಳುಗಳನ್ನು  ಹಿಂಭಾಗಕ್ಕೆ ತುದಿಗಾಣಿಸಿ, ನೆಲದ ಮೇಲೆ ಅದನ್ನು ಒರಗಿಸಿಡಬೇಕು. ಎಡಗಾಲು ಈಗ ‘ವೀರಾಸನ’ದಲ್ಲಿರುತ್ತದೆ.

3. ಇದಾದಮೇಲೆ, ‘ವಿರಿಂಚ್ಯಾಸನ 1ರಲ್ಲಿಯ ಅಭ್ಯಾಸ ಕ್ರಮವನ್ನು ಅನುಸರಿಸಬೇಕು.

ಪರಿಣಾಮಗಳು

    ಈ ಎರಡು ಬಗೆಯ ಆಸನ ಭಂಗಿಗಳು ಬೆನ್ನು ಮತ್ತು ಕತ್ತುಗಳಿಗೆ ಬಲಕೊಟ್ಟು. ಭುಜಗಳ ಚಲನವಲನಗಳನ್ನು ಸುಗಮಗೊಳಿಸುತ್ತವೆ. ಅಲ್ಲದೇ ತೊಡೆಗಳ ಮತ್ತು ಜಾನುರಜ್ಜುವಿನ ಮಾಂಸಖಂಡಗಳು ಸಂಕುಚಿಸಿ, ಆ ಮೂಲಕ ಜೀರ್ಣಶಕ್ತಿಯನ್ನು ಹೆಚ್ಚಿಸುವಂತೆ ಮಾಡಲು ಈ ಭಂಗಿಗಳು ನೆರವಾಗುತ್ತವೆ.