ಮನೆ ದೇವಸ್ಥಾನ ಜಾನಪದ ಸಾಹಿತ್ಯದಲ್ಲಿ ಹೊರನಾಡು ಅನ್ನಪೂರ್ಣ

ಜಾನಪದ ಸಾಹಿತ್ಯದಲ್ಲಿ ಹೊರನಾಡು ಅನ್ನಪೂರ್ಣ

0

 ಈಶ್ವರ ವರಸುತನಂಘ್ರಿಗೆ ಎರಗಿ:

 ಈಶ್ವರನ ವರಸುತನಂಘ್ರಿಗೆ ಎರಗಿ |

 ಅಕ್ಕರದ ತಾಯ ಶ್ರೀಶರಸ್ವತಿಗೆ ನಮಿಸಿ |

 ಅಭಯ ನೀಡುವ ಅನ್ನದಾತೆ |

 ಭದ್ರತೆಯ ಬುಡದ ವಾಸನಿ |

 ಅಗಸ್ತ್ಯ ಪೂಜೆತೆ ತಾಯಿ

 ಹೊರನಾಡ ದೇವಿ ಶಂಕರಗಭಿ ವಂದಿಸಿ |

 ಕಾಶಿಗಧಿಕ ವೀರಂಭಾಪುರದ ಭೀಮೇಶ್ವನ |

 ಕಳಸದ ಕಲೇಶ್ವರನ ವಂದಿಸಿ ಬಗಿಸುವೇನು ಲೇಸು |

 ಗುರು ಹಿರಿಯರ ಚರಣಕ್ಕೆ ಏಕಚಿತ್ತದಲೀ ಅಭಿವಂದಿಸುವೆ |

 ಕಾಶಿ ಗಂಗಾ ಮಹಿಮೆಯಂತೆಯೇ ಪೇಳುವೆ ಕಿವಿಗೊಟ್ಟು ಕೇಳಿ ||

 ಜೈ ಜೈ ಮಂಗಳಾ || 1 ||

 ಮಂಗಳ ಗಂಗಾಧರನರ್ಧಾಂಗಿಗೆ

 ಮಂಗಳ ಸರ್ವರಿಗೊಲಿವ ಕೃಪಾಂಗಿಗೆ |

 ಮಂಗಳ ಬದ್ರೆಯಡಿ ನೆಲೆಸಿದ ಅಂಬಿಕೆ ಪಾರ್ವತಿಗೇ |

 ಜೈ ಜೈ ಮಂಗಳ || ಪ||

 ಹರಿಯ ನಖಾಗಾದ್ರಿ ಹುಟ್ಟಿ

 ಕಾಶಿಯಲ್ಲಿ ಹರಿಯುತಿಹ ಗಂಗೆ ಪರಿತಂದಳು |

 ಅಜನ ಕಮಂಡಲದಿಂದಾ ಬರುತಿರಲಾ |

 ಜಗದೀಶ್ವರನ ಜಡೆಯೊಳು ಸಿಲುಕಿದಳಾ |

 ಗಂಗಾ ಭಗೀರಥ ಮಾಡಿದ ತಪಸ್ಸಿಗೆ ಮೆಚ್ಚಿ

 ಸಗರನ ಕುಲಪಾವನವಾಗ ಬಂದಳು ಗಂಗಾದೇವಿ ||

 ಜೈ ಜೈ ಮಂಗಳ || 2||

 ಮಾಡಿದಿಯ ಕೊಡೆ ಈಶ್ವರ ರಿಂತೆಂದರು

 ಪೊಡವಿಯ ಮೇಲುಳ್ಳ ಜನರೆಲ್ಲರನ್ನು

 ತಡೆಯದೆ ನೀನುದ್ಧರಿಸ್ಹೋಗೆಂದರೆ  ನುಡಿದಳು ಆ ಗಂಗಾ

 ತೊಳೆದವರು ಹೊಸತಿ ರೆಂಜಲುಗಳನು

 ನರರಿದ್ಹದೆಡೆಗೆ ನಾ ವೆಲ್ಲ

 ಇಂತೆಂದರೆ ನುಡಿದರಸಿಯ ಮಾತಿಗೆ

 ಮೃಡ ಮನದಲ್ಲಿ ಮುಗುಳ್ನಗೆಯನೆ  ನಕ್ಕಾ

 ಜೈ ಜೈ ಮಂಗಳ || 3 ||

 ಮಾನಿನಿ ನಿನ್ನಾ ಮನದಲಿ ಸ್ಮರಿಸುತ್ತ

 ಭೂಮಿಯ ಮೇಲುಳ್ಳ ಖುಷಿ ತಪಸಿಗಳು |

 ಸ್ಥಾನವ ಮಾಡಲು ಮುನಿಗಳು

 ಸಿದ್ದ ನಾನಾ ಜಾತಿಗಳು |

 ಜ್ಞಾನವುಳ್ಳ ಸುಭೀಕ್ಷಿತ  ಕ್ಷೇತ್ರದಲ್ಲಿ ಹರಿದು ನೆಲಸು |

 ಪಾವನ ಮಾಡ್ಹೋಗೆಂದರೆ ಭೂಮಿಗೀಶ್ವರ

 ರಾಡಿದ ಮಾತಿಗೆ ಸನ್ಮಾನಾದಿ ಗಂಗಾ ||

 ಜೈ ಜೈ ಮಂಗಳ || 4 ||

 ಈ ಪರಿಯಲಿ ಜಗದೀಶ್ವರ ನುಡಿಯಲು |

 ಉತ್ತರದಿ ಕಾಶಿ ಮಣಿಕರ್ಣಿಕೆ ದಕ್ಷಿಣದಿ

 ತುಂಗೆ, ಭದ್ರೆ,ತುಂಗೆಭದ್ರೆಯ ರೂಪವ ತಾಳಿ

 ಹೊರಟಳು ಕಾಶಿ ಪಟ್ಟಣಕ್ಕೆ |

 ವಾಸವ ಮಾಡೆ ಗೋದಾವರಿಯಲ್ಲಿ

 ದಾಟಿ ಭೀಮರತಿಯ ಬೇಗದಲ್ಲಿ |

 ಭದ್ರೆಯರು ಹುಟ್ಟಿದ ವಾರ ನಕ್ಷತ್ರ ಬರಣಿಸಲಳವೇ |

 ಜೈ ಜೈ ಮಂಗಳ  || 5 ||