ಮನೆ ಯೋಗಾಸನ ಕಶ್ಯಪಾಸನ

ಕಶ್ಯಪಾಸನ

0

ಈ ಆಸನವು ದೇವರ್ಷಿಗಳಲ್ಲಿ ಮೊದಲಿಗನಾದ ಕಶ್ನಪನೆಂಬ ಮಹಾಮನಿಯ ಹೆಸರಿಗೆ ಮೀಸಲಾಗಿದೆ.ಈತನು ಚತುರ್ಭುಜ ಬ್ರಹ್ಮನ ಮಗನಾದ ಮರೀಚಿಮಹರ್ಷಿಯ ಪುತ್ರ ನೆಂಬುದು ಇತಿಹಾಸೋಕ್ತಿ.ಪ್ರಪಂಚದ ಸೃಷ್ಟಿ ಕಾರ್ಯದಲ್ಲಿ ಕಶ್ಯಪಮುನಿಯ ಪಾತ್ರ ಹೆಚ್ಚಿನದು.ಈ ಮುನಿಯು ದಕ್ಷಕನ್ಯೆಯರಾದ 13 ಮಂದಿಯನ್ನು ಈ ಮದುವೆಯಾಗಿ ಪ್ರಪಂಚದ ಜೀವರಾಶಿಗಳ ಉತ್ಪತ್ತಿಯನ್ನು ಅವರ ಮೂಲಕ ನೆರವೇರಿಸಿದನೆಂಬುದು ಒಂದು ಪ್ರತಿತಿ ಈತನಗಹಿರಿಯ ಹೆಂಡತಿಯಾದ ‘ಆದಿತಿದೇವಿ’ಯಲ್ಲಿ ಆದಿತೇಯರೆಂಬ ಅತಿರಂಬ ಅನ್ವರ್ಥನಾಮವುಳ್ಳ ದೇವಗುಣಗಳೂ ಎರಡನೆಯ ಹೆಂಡತಿ ಯ‘ದಿತಿದೇವಿ’ಯ ಗರ್ಭದಲ್ಲಿ ದೈತ್ಯರಂಬ ಅನ್ವರ್ಥ ನಾಮದ ದಾನವ ರಾಕ್ಷಸ ಗಣಗಳೂ ಉತ್ಪತ್ತಿಯಾಯಿತು ಅದರಂತೆಯೇ ‘ಕದ್ರೂ’ ‘ಮಿನತಾ’ ಮೊದಲಾದ ಉಳಿದ ಹೆಂಡತಿಯರಲ್ಲಿ ವಿವಿಧ ಪ್ರಾಣಿ ವರ್ಗಗಳು ಅಂದರೆ, ಹಾವುಗಳು, ಪಕ್ಷಿಗಳು,ವಿಷ ಸರ್ಪಗಳು, ಅಲ್ಲದೆ ಜರಾಯುಜ, ಸ್ವೇದಜ,ಅಂಡಜ, ಉದ್ಭಿಜವೆಂಬ ಉಳಿದ ಪ್ರಾಣಿ ಸಸ್ಯವರ್ಗಗಳು ಹುಟ್ಟಿದುದು ಮಾತ್ರವಲ್ಲದೆ ಚಂದ್ರನ ಹೆಂಡತಿಯಾದ ಅಶ್ವಿನೀ, ಭರಣೀ ಮೊದಲಾದ ತಾರಾ ಗಣಗಳೂ ಅಪ್ಸರವರ್ಗಗಳೂ ಉದಿಸಿದವು ಇವಕ್ಕೆಲ್ಲಕ್ಕಿಂತಲೂ ಹೆಚ್ಚಾಗಿ ಲೋಕಕ್ಕೆ ಚೈತನ್ಯ ನೀಡುವ ಸೂರ್ಯದೇವನಿಗೂ ಕೂಡ ಈ ಮಹರ್ಷಿ ಕಶ್ಯಪನೇ ತಂದೆ.ಜಗತ್ತಿನ ಸಮಸ್ತ ಜೀವ ವರ್ಗಕ್ಕೆಲ್ಲಾ ಮೂಲ ಕಾರಣನಾದವನು ಈತನೇ ಎಂದು ಹೇಳಿ,ಈತನನ್ನು ‘ಕಶ್ಯಪ ಪ್ರಜಾಪತಿ’ ಎಂದು ಹಿಂದೂ ಪುರಾಣ ಇತಿಹಾಸಗಳು ಒತ್ತಿ ಹೇಳಿವೆ.

Join Our Whatsapp Group

 ಅಭ್ಯಾಸ ಕ್ರಮ:

1. ಮೊದಲು ತಾಡಾಸನದಲ್ಲಿ ನಿಲ್ಲಬೇಕು.ಬಳಿಕ ಮುಂಭಾಗಿ ‘ಉತ್ತಾನಾಸನ’ದಲ್ಲಿರುವಂತೆ ಅಂಗೈಗಳನ್ನು ನೆಲದ ಮೇಲೂರಿ, ಕಾಲುಗಳನ್ನು ‘ಅಧೋಮುಖ ಶ್ವಾನಾಸನ’ದಲ್ಲಿ ಅಳಿಸಿರುವಂತೆ ಹಿಂಭಾಗಕ್ಕೆ ನಾಲ್ಕು ಐದು ಅಡಿಗಳ ದೂರಕ್ಕೆ ಸಲ್ಲಿಸಬೇಕು

2. ಆಮೇಲೆ, ಇಡೀ ದೇಹವನ್ನೇ ಬಲ ಪಕ್ಕಕ್ಕೆ ವಾಲಿಸಿ,ಬಲಪಾದ ಮತ್ತು ಬಲಗೈಗಳ ಆಧಾರದ ಮೇಲೆ ಅದನ್ನು ಸಮತೋಲನದಲ್ಲಿ ನಿಲ್ಲಿಸಬೇಕು. ಆನಂತರ ಬಲಪಾದದ  ಹೊರಬದಿಯನ್ನು ನೆಲದ ಮೇಲೆ ಊರಿಟ್ಟು ಅದರ ಮೇಲೆ ಎಡಪಾದವನ್ನಿರಿಸಬೇಕು. ಬಳಿಕ ಎಡದಂಗೈಯನ್ನು ಎಡಪೃಷ್ಠದ ಮೇಲೊರಗಿಸಿ ದೇಹವನ್ನು ನೇರವಾಗಿಸಿ ಸಮತೋಲನಸ್ಥಿತಿಯಲ್ಲಿ ನಿಲ್ಲಿಸಬೇಕು.

3. ಆ ಬಳಿಕ,ಉಸಿರನ್ನು ಹೊರಕ್ಕೆ ಬಿಟ್ಟು ಎಡಮುಂಡಿಯನ್ನು ಭಾಗಿಸಿ ಎಡಪಾದವನ್ನು ಬಲತೊಡೆಯ ಮೂಲಕ್ಕಿಟ್ಟು ‘ಅರ್ಧ ಪದ್ಮಾಸನ’ದ ಸ್ಥಿತಿಗೆ ತರಬೇಕು. ಅನಂತರ,ಎಡ ತೋಳನ್ನು ಭುಜದಿಂದ ಬೆನ್ನ ಹಿಂದೆ ಬೀಸಿ, ಎಡಗಾಲಿನುಂಗುಟವನ್ನು ಎಡಗೈಯಿಂದ ಹಿಡಿದುಕೊಳ್ಳಬೇಕು.ಇದು ಹಾಸನದ ಕೊನೆಯ ಹಂತ ಈ ಬಂಗಿಯಲ್ಲಿ ಹಾಳಾಗಿ  ಉಸಿರಾಡುತ್ತಾ ಸ್ವಲ್ಪ ಕಾಲ ನೆಲೆಸಬೇಕು.ಈ ಭಂಗಿಯಲ್ಲಿ ಇಡೀ ದೇಹದ ಭಾಗ ಮತ್ತು ನೀಳಲವಾಗಿ ಚಾಚಿಟ್ಟ ಬಲತೋಳು, ಇವು ಒಂದೇ ಸಮತಳದಲ್ಲಿರಬೇಕು.

4. ಮತ್ತೆ ಉಸಿರನ್ನು ಹೊರ ಬಿಟ್ಟು ಎಡಪಾದವನ್ನು ಸಡಿಲಿಸಿ ಅದನ್ನು ಬಲ ಪಾದದ ಮೇಲಿರಿಸಿ,ಎಡಗೈಯನ್ನು ಎಡತೊಡೆಯ ಮೇಲೆ ಒರಗಿಸಿರಬೇಕು,ಬಳಿಕ ಆಳವಾಗಿ ಕೆಲವು ಸಲ ಉಸಿರಾಡಬೇಕು.

5. ಪುನಃ ಉಸಿರನ್ನು ಹೊರಕ್ಕೆಬಿಟ್ಟು ಇಡೀ ದೇಹವನ್ನು ಎಡಪಕ್ಕಕ್ಕೆ ತಿರುಗಿಸಿ, ಎಡಗೈ ಮತ್ತು ಎಡಪಾದದ ಆಧಾರದ ಮೇಲೆ ಅದನ್ನು ಸಮತೋಲನವಾಗಿಸಿರಬೇಕು. ಈಗ ಬಲಪಾದವನ್ನು ಎಡತೊಡೆಯ ಮೂಲಕ್ಕೆ ಸೇರಿಸಿ,ಆ ಮೂಲಕ ಅರ್ಧ ‘ಪದ್ಮಸನ’ದ ಭಂಗಿಯನ್ನು ಮಂಡಿ, ಬೆನ್ನಹಿಂದೆ ಬೀಸಿಟ್ಟ ಬಲಗೈಯಿಂದ  ಬಲಗಾಲಿನುಂಗೂಟವನ್ನು ಹಿಡಿದುಕೊಳ್ಳಬೇಕು.ಈ ಭಂಗಿಯಲ್ಲಿಯೂ ಹಿಂದಿನಷ್ಟು ಕಾಲವೇ ನೆಲೆಸಬೇಕು.

6. ಮತ್ತೊಂದು ಸಲ ಉಸಿರನ್ನು ಹೊರಕ್ಕೆ ಬಲಪಾದವನ್ನು ಬಿಡಿಸಿ ಎಳಪಾದ ಮೇಲೆ ಒರಗಿಸಿಟ್ಟು ಬಲಗೈಯನ್ನು ಬಲತೊಡೆಯಮೇಲಿಡಬೇಕು.

7. ಕೊನೆಯಲ್ಲಿ ಬಲದಂಗೈಯನ್ನು ನೆಲದ ಮೇಲೆ ಉಊರಿಟ್ಟು ಮತ್ತೆ ‘ಉತ್ಸಾನಾಸನ’ದ ಸ್ಥಿತಿಗೆ ಬರಬೇಕು. ಈ ಭಂಗಿಯಲ್ಲಿರುವಾಗ, ಕೆಲವು ಸಲ ಉಸಿರಾಟ ನಡೆಸಿ ಆಮೇಲೆ ಉಸಿರನ್ನು ಹೊರಕ್ಕೆ ಬಿಡುತ್ತ ‘ತಾಡಾಸನ’ ಮತ್ತೆ ಬಂದು ನಿಲ್ಲಬೇಕು.

 ಪರಿಣಾಮಗಳು :

      ಈ ಆಸನವು ಕೈಗಳಿಗೆ ಬಲ ಕೊಡುವುದು ಮಾತ್ರವಲ್ಲದೆ ಬೆನ್ನ ಮೂಳೆಯ ಕೆಳಬದಿಯಲ್ಲಿಯ ತ್ರಿಕಾಸ್ಥಿತಿಯಲ್ಲಿರುವ ಸ್ಥಾನಗಳಲ್ಲಿಯೂ ನೋವು ಮತ್ತು ಬಿರುಸಿನ ಸ್ಥಿತಿಯನ್ನು ಹೋಗಲಾಡಿಸುವುದು.