ಶಿವಮೊಗ್ಗ: ಮಾರುಕಟ್ಟೆಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಎಪಿಎಂಸಿ ತರಕಾರಿ ಮಾರುಕಟ್ಟೆ, ನಗರದ ಗಾಂಧಿ ಬಜಾರ್, ಲಷ್ಕರ್ ಮೊಹಲ್ಲಾದ ಏಳೆಂಟು ಅಂಗಡಿಗಳ ಮೇಲೆ ದಾಳಿ ನಡೆಸಿ ಅನುಮಾನಾಸ್ಪದ ಬೆಳ್ಳುಳ್ಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಾರುಕಟ್ಟೆಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟವಾಗುತ್ತಿರುವ ಖಚಿತ ಮಾಹಿತಿ ಮೇರೆಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ದಾಳಿ ನಡೆಸಿ ಅನುಮಾನಾಸ್ಪದ ಬೆಳ್ಳುಳ್ಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದು ವಶಕ್ಕೆ ಪಡೆದ ಬೆಳ್ಳುಳ್ಳಿಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ರವಾನೆ ಮಾಡಿದ್ದಾರೆ.
ಸದ್ಯ ಮಾರುಕಟ್ಟೆಗಳಲ್ಲಿ ಬೆಳ್ಳುಳ್ಳಿ ರೇಟ್ ದುಬಾರಿಯಾಗಿದ್ದು ಕೆಜಿಗೆ 250 ರಿಂದ 400 ರೂಪಾಯಿ ಏರಿಕೆಯಾಗಿದೆ ಎನ್ನಲಾಗಿದೆ.
ಕೆಲವು ವ್ಯಾಪಾರಿಗಳು ದೇಶಿ ಬೆಳ್ಳುಳ್ಳಿಗಳ ಜೊತೆ ಚೀನಾ ಬೆಳ್ಳುಳ್ಳಿ ಸೇರಿಸಿ ಮಾರಾಟ ಮಾಡುತ್ತಿದ್ದಾರೆ ಎಂಬ ದೂರು ಕೇಳಿ ಬಂದಿತ್ತು, ಚೀನಾ ಬೆಳ್ಳುಳ್ಳಿ ಕೆಜಿಗೆ 80.ರೂ. ಆಗಿದ್ದು ಮಾರಾಟಗಾರರು ಅಧಿಕ ಲಾಭದ ಆಸೆಗೆ ದೇಶೀಯ ಬೆಳ್ಳುಳ್ಳಿ ಜೊತೆ ಚೀನಾ ಬೆಳ್ಳುಳ್ಳಿ ಬೆರೆಸಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಚೀನಾ ಬೆಳ್ಳುಳ್ಳಿಯಿಂದ ಗ್ರಾಹಕರ ಆರೋಗ್ಯಕ್ಕೂ ಹಾನಿಕಾರ ಈ ಹಿನ್ನೆಲೆ ಶಿವಮೊಗ್ಗದ ಎಫ್ ಎಸ್ ಎಸ್ ಎ ಐ ತಂಡ ದಾಳಿ ನಡೆಸಿದೆ.