ಮನೆ ಆರೋಗ್ಯ ಮದುವೆ ಸಮಾರಂಭದಲ್ಲಿ ಐಸ್​ ಕ್ರೀಂ ತಿಂದು 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ- ಆಸ್ಪತ್ರೆಗೆ ದಾಖಲು

ಮದುವೆ ಸಮಾರಂಭದಲ್ಲಿ ಐಸ್​ ಕ್ರೀಂ ತಿಂದು 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ- ಆಸ್ಪತ್ರೆಗೆ ದಾಖಲು

0

ರಾಮನಗರ: ಮದುವೆ ಸಮಾರಂಭದಲ್ಲಿ ಐಸ್​ ಕ್ರೀಂ ತಿಂದು ಅಸ್ವಸ್ಥರಾಗಿ 50ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಚನ್ನಪಟ್ಟಣದಲ್ಲಿ ಭಾನುವಾರ ನಡೆದಿದೆ.

Join Our Whatsapp Group

ಚನ್ನಪಟ್ಟಣ ನಗರದ ಸಾತನೂರು ಸರ್ಕಲ್ ಸಮೀಪ ಮದುವೆ ಸಮಾರಂಭ ಏರ್ಪಾಡಾಗಿತ್ತು. ಊಟದ ನಂತರ ಐಸ್​ ಕ್ರೀಂ ಸೇವಿಸಿದವರಿಗೆ ಅರ್ಧ ಗಂಟೆಯ ಬಳಿಕ ವಾಂತಿ, ಭೇದಿ ಶುರುವಾಗಿದೆ. ಯಾರಬ್​ ನಗರ ಹಾಗೂ ಕೋಟೆ ನಿವಾಸಿಗಳಾದ ಸುಮಾರು ಐವತ್ತಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 40 ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆ, ಉಳಿದವರನ್ನು ಮಂಡ್ಯ ಹಾಗೂ ರಾಮನಗರ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಹಿಂದಿನ ಲೇಖನಕಾಂಗ್ರೆಸ್‌, ಬಿಜೆಡಿ ಲೂಟಿಯಿಂದ ಸಂಪನ್ಮೂಲಭರಿತ ಒಡಿಶಾ ಬಡ ರಾಜ್ಯವಾಗಿದೆ: ಪ್ರಧಾನಿ ಮೋದಿ
ಮುಂದಿನ ಲೇಖನಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ: ಹೆಚ್. ಡಿ ದೇವೇಗೌಡ, ಹೆಚ್. ಡಿ ಕುಮಾರಸ್ವಾಮಿ ಹೆಸರು ಬಳಸದಂತೆ ಕೋರ್ಟ್ ನಿರ್ಬಂಧ