ಮನೆ ಅಂತಾರಾಷ್ಟ್ರೀಯ ತನ್ನನ್ನು ತಾನೇ ಮದುವೆಯಾಗಿದ್ದ ಯುವತಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ

ತನ್ನನ್ನು ತಾನೇ ಮದುವೆಯಾಗಿದ್ದ ಯುವತಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ

0

ಅಂಕಾರಾ (ಟರ್ಕಿ): ಸಾಮಾಜಿಕ ಜಾಲತಾಣದ ಪ್ರಭಾವಿಯೊಬ್ಬರು ಕಟ್ಟಡದಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾರೆ.

Join Our Whatsapp Group

ಟರ್ಕಿ ದೇಶದ ಸೋಶಿಯಲ್‌ ಮೀಡಿಯಾ ಪ್ರಭಾವಿ ಕುಬ್ರಾ ಆಯ್ಕುತ್ (26) ಟರ್ಕಿಯ ಸುಲ್ತಾನ್‌ಬೇಲಿ ಜಿಲ್ಲೆಯ ಐಷಾರಾಮಿ ಅಪಾರ್ಟ್‌ಮೆಂಟ್ ನ ಕಟ್ಟಡದ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

ಸೆ.23ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಧಿಕಾರಿಗಳಿಗೆ ಘಟನಾ ಸ್ಥಳದಲ್ಲಿ ಪತ್ರವೊಂದು ಸಿಕ್ಕಿರುವುದಾಗಿ ವರದಿಯಾಗಿದೆ.

ಕುಬ್ರಾ ಸಾವಿಗೆ ಕೆಲವೇ ಗಂಟೆಗಳ ಮೊದಲು ತನ್ನ ಖಾತೆಯಲ್ಲಿ ತೂಕ ಹೆಚ್ಚಾಗಿ ಅದರೊಂದಿಗೆ ಜೀವನ ಕಳೆಯುವುದರ ಬಗೆಗಿನ ಕುರಿತ ಪೋಸ್ಟ್‌ ಹಂಚಿಕೊಂಡಿದ್ದರು. ಇದಕ್ಕೆ ಅವರ ಫಾಲೋವರ್ಸ್  ಕಳವಳ ವ್ಯಕ್ತಪಡಿಸಿದ್ದರು.

ತನ್ನ ಟಿಕ್‌ ಟಾಕ್‌ ವಿಡಿಯೋಗಳಿಂದ ಅಪಾರ ಫಾಲೋವರ್ಸ್‌ ಗಳನ್ನು ಹೊಂದಿದ್ದ ಅವರಿಗೆ ಟಿಕ್‌ಟಾಕ್ ಖಾತೆಯಲ್ಲಿ ಒಂದು ಮಿಲಿಯನ್ ಅನುಯಾಯಿಗಳಿದ್ದರು. ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 2,07,000 ಅನುಯಾಯಿಗಳನ್ನು ಹೊಂದಿದ್ದರು.

ಕುಬ್ರಾ 2023 ರಲ್ಲಿ ಟಿಕ್‌ಟಾಕ್‌ನಲ್ಲಿ ತನ್ನ ವಿಶಿಷ್ಟ ಕಂಟೆಂಟ್‌ ನಿಂದ ಗಮನ ಸೆಳೆದಿದ್ದರು.”ವೆಡ್ಡಿಂಗ್ ವಿತ್ ಔಟ್‌ ಎ ಗ್ರೂಮ್”(ವರನಿಲ್ಲದೆ ಮದುವೆ) ಸರಣಿಯ ವಿಡಿಯೋಗಳಿಂದ ಖ್ಯಾತಿ ಆಗಿದ್ದರು. ಗಮನಾರ್ಹ ಜನಪ್ರಿಯತೆಯನ್ನು ಗಳಿಸಿದ್ದರು. ಕುಬ್ರಾ ಸಾಂಕೇತಿಕವಾಗಿ ತನ್ನನ್ನು ತಾನೇ ಮದುವೆಯಾಗಿದ್ದರು.

ಅವರ ಸಾವಿನ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಕೊನೆಯ ದಾಗಿ ಅವರು ತನ್ನ ಮನೆಯನ್ನು ಸ್ವಚ್ಛಗೊಳಿಸುವ ವಿಡಿಯೋವನ್ನು ಅಪ್ಲೋಡ್‌ ಮಾಡಿದ್ದರು.