ಮನೆ ರಾಜಕೀಯ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ:  ಸಿಎಂ ಪರ ಬ್ಯಾಟ್ ಬೀಸಿದ ಬಿಜೆಪಿ ಶಾಸಕ ಎಸ್.ಟಿ...

ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ:  ಸಿಎಂ ಪರ ಬ್ಯಾಟ್ ಬೀಸಿದ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್

0

ಬೆಂಗಳೂರು:  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿರುವ ಬಿಜೆಪಿ ನಾಯಕರಿಗೆ ಸ್ವಪಕ್ಷದ ಶಾಸಕನೇ ಆದ ಎಸ್.ಟಿ ಸೋಮಶೇಖರ್ ತಿರುಗೇಟು ನೀಡಿದ್ದಾರೆ.

Join Our Whatsapp Group

ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿ ಮಾತನಾಡಿರುವ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್, ಸಿದ್ದರಾಮಯ್ಯ ಯಾವ ಕಾರಣಕ್ಕೆ ರಾಜೀನಾಮೆ ಕೊಡಬೇಕು?  ಸಿಎಂ ರಾಜೀನಾಮೆ ನೀಡುವ  ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಬಿಜೆಪಿಗರು ಯಾವತ್ತದರೂ ಅಭಿವೃದ್ದಿ ಬಗ್ಗೆ ಮಾತನಾಡಿದ್ದಾರಾ?  50:50 ಅನುಪಾತದಲ್ಲಿ ಸಿಎಂ ಪತ್ನಿ ಒಬ್ಬರಿಗೆ ಸೈಟ್ ಕೊಟ್ಟಿಲ್ಲ.  ನೂರಾರು ಜನರಿಗೆ ಸೈಟ್ ಕೊಟ್ಟಿದ್ದಾರೆ ಇವರೊಬ್ಬರಿಗೆ ಸೈಟ್ ಕೊಟ್ಟಿದ್ದರೆ ಟಾರ್ಗೆಟ್ ಮಾಡಬಹುದಿತ್ತು. ಮುಡಾ ಸೈಟ್ ಗಳನ್ನ ಕೊಟ್ಟಿದ್ದು ಬಿಜೆಪಿ ಸರ್ಕಾರ. ಪತಿಗೆ ಕಿರಿಕಿರಿ ಆಗುತಿದೆ ಎಂದು ಸೈಟ್ ವಾಪಸ್ ನೀಡಿದ್ದಾರೆ.  ತಡವಾಗಿರಬಹುವುದು ಆದರೂ ಪರವಾಗಿಲ್ಲ ವಾಪಸ್ ಕೊಟ್ಟಿದ್ದಾರೆ  ಕಾನೂನು ಬಾಹಿರವಾಗಿದ್ದರೆ ಅಂದೇ ಸರ್ಕಾರ ವಜಾಮಾಡಬಹುದಿತ್ತು ಎಂದು ಕಿಡಿಕಾರಿದರು.

ಸ್ವಪಕ್ಷದ ವಿರುದ್ದವೇ ವಾಗ್ದಾಳಿ ನಡೆಸಿದ ಎಸ್ ಟಿ ಸೋಮಶೇಖರ್,  ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ ಸುಮ್ಮನೆ ಗಲಾಟೆ ಮಾಡುತ್ತಿದ್ದಾರೆ ಸಿದ್ದರಾಮಯ್ಯ ರಾಜಕೀಯದಲ್ಲಿ ಒಂದೇ ಒಂದು ಕಳಂಕ ಇಲ್ಲ. ಬೇಕು ಅಂತಾನೆ ಸಿಎಂ ಸಿದ್ದರಾಮಯ್ಯಗೆ ಕಳಂಕ ತರುತ್ತಿದ್ದಾರೆ. ಎಂದು ಹರಿಹಾಯ್ದರು.