ಮನೆ ರಾಷ್ಟ್ರೀಯ ಕರ್ತವ್ಯ ಬಹಿಷ್ಕರಿಸಿ ಮತ್ತೆ ಮುಷ್ಕರ ಆರಂಭಿಸಿದ ಕಿರಿಯ ವೈದ್ಯರು

ಕರ್ತವ್ಯ ಬಹಿಷ್ಕರಿಸಿ ಮತ್ತೆ ಮುಷ್ಕರ ಆರಂಭಿಸಿದ ಕಿರಿಯ ವೈದ್ಯರು

0

ಕೊಲ್ಕತ್ತಾ: ಕೋಲ್ಕತ್ತಾ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಅತ್ಯಾಚಾರ ಹತ್ಯೆ ಖಂಡಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿ ಬಳಿಕ ಕರ್ತವ್ಯಕ್ಕೆ ಹಾಜರಾಗಿದ್ದ ಕಿರಿಯ ವೈದ್ಯರು ಇದೀಗ ಮಂಗಳವಾರ(ಅ. 01) ರಿಂದ ಮತ್ತೆ ತಮ್ಮ ಕರ್ತವ್ಯವನ್ನು ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ.

Join Our Whatsapp Group

ಈ ವೇಳೆ ಹೇಳಿಕೆ ನೀಡಿದ ವೈದ್ಯರು ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ತಮ್ಮ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಇಂದಿನಿಂದ ಮುಷ್ಕರ ನಡೆಸುತ್ತಿರುವುದಾಗಿ ಹೇಳಿದ್ದಾರೆ ಅಲ್ಲದೆ ಟ್ರೈನಿ ವೈದ್ಯೆ ಹತ್ಯೆ ಪ್ರಕರಣದ ತನಿಖೆಯೂ ನಿಧಾನಗತಿಯಲ್ಲಿ ಸಾಗುತ್ತಿರುವುದು ಒಂದು ವಿಚಾರವಾದರೆ, ಇದರ ಜೊತೆಗೆ ರಾಜ್ಯದ ಆರೋಗ್ಯ ಕಾರ್ಯದರ್ಶಿಯನ್ನು ಕರ್ತವ್ಯದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಈ ಮುಷ್ಕರ ನಡೆಸುವುದಾಗಿ ತಿಳಿಸಿದ್ದಾರೆ.

ಇದಕ್ಕೂ ಮೊದಲು ಸೆಪ್ಟೆಂಬರ್ 21 ರಂದು, ಆರ್‌ಜಿ ಕರ್ ಮೆಡಿಕಲ್ ಸೆಂಟರ್ ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಸುಮಾರು 42 ದಿನಗಳ ಪ್ರತಿಭಟನೆಯ ನಂತರ ಕಿರಿಯ ವೈದ್ಯರು ಮುಷ್ಕರ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದರು ಇದೀಗ ಮತ್ತೆ ತಮ್ಮ್ ಕೆಲಸಗಳನ್ನು ಬದಿಗಿಟ್ಟು ಮುಷ್ಕರ ಆರಂಭಿಸಿದ್ದಾರೆ.