ಮನೆ ಜ್ಯೋತಿಷ್ಯ ಋತುಮತಿಯಾದ ವೇಳೆಯ ಫಲವು

ಋತುಮತಿಯಾದ ವೇಳೆಯ ಫಲವು

0

 ಶ್ಲೋಕ : ಪುತ್ರಿಣೀ ಸುಭಗಾ ಪುಣ್ಯಾ ಪೂರ್ವಾನ್ಹೇಯ ರಜಸ್ವಾಲಾ

 ಮಧ್ಯಾನ್ಹೇತು ಶುಭಪ್ರಾಪ್ತಿ ಸ್ವೈರಿಣೀಚಾವರಾಹ್ನ ತೇ 

 ಸಂಧ್ಯಯೋ ರುಭಯೋರ್ವೆಶ್ಯಾ ನಿಶಾಯಾಂ ವಿಧವಾ ತಥಾ

Join Our Whatsapp Group

 ಅರ್ಥ ಸ್ತ್ರೀಯಳು ಉದಯದಲ್ಲಿ ಪ್ರಥಮ ಋತುಮತಿಯಾದರೆ ಆಕೆಯು ಸುಖ ಶಾಂತಿ  ಸಮೃದ್ಧಿಯಿಂದ ಜೀವಿಸುವವಳು.ಮಧ್ಯಾಹ್ನದಲ್ಲಿ ಋತುಮತಿಯಾದರೆ ಒಳ್ಳೆಯ ಸಂತಾನವನ್ನು ಹೊಂದುವಳು. ಸಾಯಂಕಾಲದಲ್ಲಿ ಋತುಮತಿ ಆದರೆ ಜಾರಿಣಿಯು ರಾತ್ರಿಯಲ್ಲಿ 11 ಘಂಟೆಯೊಳಗಾದರೆ ಆಯುಷ್ಯವೃದ್ಧಿಯು ಅರ್ಧ ರಾತ್ರಿಯಲ್ಲಾದರೆ ಪತಿಹೀನೆಯು, ರಾತ್ರಿ ಮೂರು ಗಂಟೆಯಿಂದ ಬೆಳಗಿನ ಆರು ಗಂಟೆಯೊಳಗಾಗಿ ಋತುಮತಿಯಾದರೆ ವ್ಯಸನಾಕ್ರಾಂತಳಾಗುವಳು.

  ಋತು ಸಮಯದಲ್ಲಿ ತೊಟ್ಟಿರುವ ವಸ್ತ್ರ ಸೀರೆ ಫಲವು :

 ಶ್ಲೋಕ :

 *ಶ್ವೇತ ವಸ್ತ್ರಾಕ್ಷಿತೀಸ್ಯಾಂ ನವವಸ್ತ್ರ ಪತಿವ್ರತಾ

 ಕ್ಷಾಮ ವಸ್ತ್ರಾಕ್ಷಿತೀಶಾಸ್ಯಾಂ |ದೃಢ ವಸ್ತ್ರಾ ಸುಖಾನ್ವಿತಾ

 ದುರ್ಬಲಾ ಜೀರ್ಣ ವಸ್ತ್ರಾನಾಂ ದ್ರೋಗಿಣಿ|*ರಕ್ತವಾಸನಾ|

 ಮೇಘಾಂಬರಧರಾನಾರಿ |ರಜಸ್ವೀ ವಿಧ ವಾತಥಾ||

 ಅರ್ಥ : ಸ್ತ್ರೀಯರು ಬಿಳೇ ವಸ್ತ್ರ ಸೀರೆ ಧರಿಸಿಕೊಂಡಾಗ ಪ್ರಥಮ ರಜಸ್ವಲೆಯಾದರೆ ಶುಭವು.ಹೊಸ ವಸ್ತ್ರದಲ್ಲಿ ಆದರೆ ಪತಿವ್ರತೆಯು.ಬಿಳೀ ಜರತಾರಿ ರೇಷ್ಮೆ ಬಟ್ಟೆಯನ್ನುಟ್ಟುಕೊಂಡಾಗ ರಾಜಸ್ವಲೆಯಾದರೆ ಆಕೆ ರಾಜಸುಕಿಯು ಗಟ್ಟಿಯಾಗಿರುವ ದೃಢ ವಸ್ತ್ರದಲ್ಲಾದರೆ ಸುಖ ಸೌಖ್ಯವು. ಹಳೆ ಬಟ್ಟೆಯನ್ನು ಧರಿಸಿದಾಗ ಆದರೆ ದುರ್ಬಲ ಸಂತಾನವುಳ್ಳವಳು. ದರಿದ್ರ ಪತಿಯನ್ನು ಹೊಂದುವಾಕೆಯು. ಮಡಿಯಾದ  ವಸ್ತ್ರ ಧರಿಸಿಕೊಂಡಿದ್ದರೆ ನಿರುದ್ಯೋಗಿಯು. ರಕ್ತವರ್ಣದ ವಸ್ತ್ರ ಧರಿಸಿಕೊಂಡಾಗ ಆದರೆ ರೋಗಾದಿ ಪೀಡೆಗಳನ್ನು ಅನುಭವಿಸುವಳು.ನೀಲಿ ಕಪ್ಪು ಮೇಘ ವರ್ಣದ ಬಟ್ಟೆ ಧರಿಸಿಕೊಂಡಾಗ ಸ್ತ್ರಿಯಳು ಪ್ರಥಮ ಋತುಮತಿಯಾದರೆ ವಿದುವೆಯಾಗುವಳೆಂದು ಜೋತಿಷ್ಯ ನಿರ್ಣಯ ಸಾಗರ ಎಂಬ ಗ್ರಂಥಕಾರರ ಅಭಿಪ್ರಾಯವಿದೆ.

      ಮಾನ್ಯ ವಾಚಕ ಮಹನೀಯರೇ,ಈ ಮೇಲೆ ಹೇಳಿದ ಪ್ರಕಾರ ವಾರ, ನಕ್ಷತ್ರ ತಿಥಿ ಯೋಗ,ಕಾರಣ ಇವೆಲ್ಲವುಗಳೊಂದಿಗೆ ಸ್ತ್ರೀಯರು ಋತುವಾದ ದಿವಸ ನೋಡಿಕೊಂಡು ಶುಭ ಶುಭ ಫಲವನ್ನು ತಿಳಿಯಬೇಕು ಋತುವಾದ ದಿವಸದ ಫಲವನ್ನು ಮುಖ್ಯವಾಗಿ ನೋಡಿಕೊಳ್ಳಬೇಕು ನಂತರ ಋತುಮತಿಯಾದ ಮಾಸ,ಸ್ಥಳ, ವೇಳೆ,  ಆ ವೇಳೆಗೆ ಧರಿಸಿದಂಥ ವಸ್ತ್ರ ಬಟ್ಟೆ ಇತ್ಯಾದಿಗಳ ಶುಭಾಶುಭ ಫಲವನ್ನೂ ನೋಡಿ. ಕೆಳಗಿನಂತೆ ತಾತ್ಕಾಲ ಲಗ್ನ ಇವುಗಳ ಫಲವನ್ನೂ ಗಮನಿಸತಕ್ಕದ್ದು ಮುಖ್ಯವು.