ಮನೆ ಕಾನೂನು ಹಿಂದೂ ಮಹಿಳೆಯರನ್ನು ಗುರಿಯಾಗಿಸಿ ಲವ್‌ ಜಿಹಾದ್‌ ನಡೆಯುತ್ತಿದೆ ಎಂದ ಉ. ಪ್ರದೇಶ ನ್ಯಾಯಾಲಯ: ಯುವಕನಿಗೆ ಆಜೀವ...

ಹಿಂದೂ ಮಹಿಳೆಯರನ್ನು ಗುರಿಯಾಗಿಸಿ ಲವ್‌ ಜಿಹಾದ್‌ ನಡೆಯುತ್ತಿದೆ ಎಂದ ಉ. ಪ್ರದೇಶ ನ್ಯಾಯಾಲಯ: ಯುವಕನಿಗೆ ಆಜೀವ ಸಜೆ

0

ತನ್ನನ್ನು ಹಿಂದೂ ಎಂದು ಬಿಂಬಿಸಿ ಸಂತ್ರಸ್ತೆಯನ್ನು ದೇವಸ್ಥಾನದಲ್ಲಿ ವಿವಾಹವಾಗಿ ವಂಚಿಸಿದ್ದ ಮುಸ್ಲಿಂ ಯುವಕನೊಬ್ಬನಿಗೆ ಉತ್ತರ ಪ್ರದೇಶದ ಬರೇಲಿ ನ್ಯಾಯಾಲಯ ಆಜೀವ ಪರ್ಯಂತ ಜೈಲು ಶಿಕ್ಷೆ ವಿಧಿಸಿದೆ.

Join Our Whatsapp Group

ತಾವು ಈ ಘಟನೆಯನ್ನು ‘ಲವ್‌ ಜಿಹಾದ್‌’ ಎಂದು ಕರೆದ ಬಗ್ಗೆ ಪ್ರತಿಕ್ರಿಯಿಸಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರು ಮುಸ್ಲಿಂ ಪುರಷರು ತಾವು ಪ್ರೀತಿಸುವುದಾಗಿ ನಂಬಿಸಿ ಹಿಂದೂ ಮಹಿಳೆಯರನ್ನು ವಿವಾಹದ ಮೂಲಕ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಆರೋಪಿ ಮೊಹಮದ್‌ ಅಲೀಮ್‌ ತಾನು ಆನಂದ್‌ ಎಂದು ಹೇಳಿಕೊಂಡು ಸಂತ್ರಸ್ತೆಗೆ ವಂಚಿಸಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದ. ಬಳಿಕ ಅವಳ ಮೇಲೆ ಅತ್ಯಾಚಾರ ಎಸಗಿ ಛಾಯಾಚಿತ್ರ, ವಿಡಿಯೋ ಮಾಡಿಕೊಂಡಿದ್ದ. ಪದೇ ಪದೇ ಅತ್ಯಾಚಾರ ಎಸಗಿದ್ದ ಎಂದು ನ್ಯಾಯಾಲಯ ಹೇಳಿದೆ.

ಲವ್‌ ಜಿಹಾದ್‌ನ ಮುಖ್ಯ ಉದ್ದೇಶ ನಿರ್ದಿಷ್ಟ ಧರ್ಮದ ಅರಾಜಕತಾವಾದಿಗಳು ಅಂತಾರಾಷ್ಟ್ರೀಯ ಸಂಚು ಮತ್ತು ಜನಾಂಗೀಯ ಯುದ್ಧದ ಮೂಲಕ ಭಾರತದ ಮೇಲೆ ಪ್ರಭುತ್ವ ಸಾರುವುದಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಲವ್ ಜಿಹಾದ್ ಗೆ ಅಪಾರ ಹಣ ಬೇಕಾಗುತ್ತದೆ. ಹಾಗಾಗಿ, ಲವ್ ಜಿಹಾದ್‌ನಲ್ಲಿ ವಿದೇಶಿ ಧನಸಹಾಯದ ಅಂಶವನ್ನು ತಳ್ಳಿಹಾಕಲಾಗುವುದಿಲ್ಲ . ಬಲವಂತವಾಗಿ ಮತಾಂತರ ಮಾಡುವ ಹಕ್ಕು ಯಾರಿಗೂ ಇಲ್ಲ. ಹಾಗೆ ಮಾಡಿದ್ದರೆ ಆತ ಯಾವುದೇ ವ್ಯಕ್ತಿ ಆಗಿರಲಿ ಆತನ ವಿರುದ್ಧ ಮತಾಂತರ ನಿಷೇಧ ಕಾಯಿದೆ  2021ರಡಿ ಕ್ರಮ ಕೈಗೊಳ್ಳಬೇಕು ಎಂದು ಕೂಡ ನ್ಯಾಯಾಲಯ ನುಡಿದಿದೆ.

ದೊಡ್ಡ ಉದ್ದೇಶಗಳನ್ನು ಈಡೇರಿಸುವ ಸಲುವಾಗಿ ಲವ್ ಜಿಹಾದ್ ಮೂಲಕ ಅಕ್ರಮ ಮತಾಂತರ ನಡೆಸಲಾಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸಬೇಕು ಎಂದು ಕರೆ ನೀಡಿದ ಅದು ಇಲ್ಲದೇ ಹೋದರೆ ಭವಿಷ್ಯದಲ್ಲಿ ದೇಶ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಅಕ್ರಮ ಮತಾಂತರಗಳನ್ನು ಲಘುವಾಗಿ ಪರಿಗಣಿಸುವಂತಿಲ್ಲ ಏಕೆಂದರೆ ಅವು ದೇಶದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತೆಗೆ ದೊಡ್ಡ ಬೆದರಿಕೆಯಾಗಿವೆ ಎಂದು ಎಚ್ಚರಿಸಿತು.

ಕುತೂಹಲಕಾರಿ ಸಂಗತಿಯೆಂದರೆ, ಜ್ಞಾನವಾಪಿ-ಕಾಶಿ ವಿಶ್ವನಾಥ ಪ್ರಕರಣದಲ್ಲಿ ಆದೇಶ ನೀಡಿದ ನಂತರ ತನಗೆ  ಬೆದರಿಕೆ ಇದೆ ಎಂದು ಅಲಾಹಾಬಾದ್‌ ಹೈಕೋರ್ಟ್‌ಗೆ ತಿಳಿಸುವ ಮೂಲಕ ನ್ಯಾಯಾಧೀಶ ದಿವಾಕರ್ ಇತ್ತೀಚೆಗೆ ಸುದ್ದಿಯಲ್ಲಿದ್ದರು. ಅವರು 2022ರಲ್ಲಿ ಜ್ಞಾನವಾಪಿ ಮಸೀದಿ ಆವರಣದ ವಿಡಿಯೋ ಸಮೀಕ್ಷೆಗೆ ಆದೇಶಿಸಿದ್ದರು.

ಬಳಿಕ ನ್ಯಾಯಾಧೀಶ ದಿವಾಕರ್‌ ಅವರನ್ನು ಕೊಲ್ಲಲ್ಲು ಇನ್‌ಸ್ಟಾಗ್ರಾಂ ಖಾತೆ ನಡೆಸುತ್ತಿರುವ ಇಸ್ಲಾಮಿಕ್‌ ಮೂಲಭೂತ ವಾದಿಗಳು ಸಂಚು ನಡೆಸಿದ್ದಾರೆ ಎಂದು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಲಖನೌ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಅಲಹಾಬಾದ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದು ನ್ಯಾಯಾಧೀಶ ದಿವಾಕರ್ ಅವರಿಗೆ ಭದ್ರತೆ ನೀಡುವಂತೆ ಕೋರಿದ್ದರು.