ಮನೆ ಜ್ಯೋತಿಷ್ಯ ನಕ್ಷತ್ರಗಳಿಗೆ ಅಧಿಪತಿ ದೇವತೆಗಳು

ನಕ್ಷತ್ರಗಳಿಗೆ ಅಧಿಪತಿ ದೇವತೆಗಳು

0

 ಶ್ಲೋಕ :

 ನಾಸತ್ಯಾಂತಕ Whatever ಶಶಭೃದ್ರುದ್ರಾದತಿ

 *ರುಕ್ಷೇಷಾಃ *ಪಿತರೋಭಗೋರ್ಯ ಮರವಿತ್ಗಷ್ಟಾ ಸಮಿರಃ ಕ್ರಮಾತ್||

 ಶಕ್ರಗ್ನೀಖಲು ಮಿತ್ರ ಇಂದ್ರನಿರುತಿ ಕ್ಷೀರಾಣಿ ವಿಶ್ವೇವಿಧಿ|

 ರ್ಗೋವಿಂದೋ ವಸುತೋಯಜಪಾಜ ಚರಣಾ ಓರ್ಬುಧ್ನ್ಯ

Join Our Whatsapp Group

 ಅರ್ಥ: ಅಶ್ವಿನಿಗೆ ಅಶ್ವಿನಿ ದೇವತೆ ಭರಣಿಗೆ ಯಮ,ಕೃತಿಕೆಗೆ ಅಗ್ನಿ ರೋಹಿಣಿಗೆ ಬ್ರಹ್ಮ, ಮೃಗಶಿರಕ್ಕೆ ಚಂದ್ರ,ಆರಿದ್ರಕ್ಕೆ ಶಿವ,ಪುನರ್ವಸುಗೆ ಅಧಿತಿ ದೇವತೆ, ಪುಷ್ಯ, ನಕ್ಷತ್ರಕ್ಕೆ ಗುರು ಆಶ್ಲೇಷಕ್ಕೆ ನಾಗದೇವತೆ,ಮಘ, ನಕ್ಷತ್ರಕ್ಕೆ ಮನೆತನದ ಹಿರಿಯರು ಹುಬ್ಬ ನಕ್ಷತ್ರಕ್ಕೆ ಸೂರ್ಯ,ಉತ್ತರ ನಕ್ಷತ್ರಕ್ಕೆ ಆರ್ಯ ದೇವತೆ, ಹಸ್ತ, ನಕ್ಷತ್ರಕ್ಕೆ ಸೂರ್ಯ ಚಿತ್ತ ನಕ್ಷತ್ರಕ್ಕೆ ತ್ವಷ್ಪ್ರಃ ಸ್ವಾತಿಗೆ ವಾಯು, ವಿಶಾಖಕ್ಕೆ ಇಂದ್ರಾಗ್ನಿ ಅನುರಾಧಕ್ಕೆ ಮಿತ್ರ ಅನುರಾಧಕ್ಕೆ ಮಿತ್ರಜಕ್ಕೆ ಇಂದ್ರ ಮೂಲಾಕ್ಕೆ ನೈಋತಿ  ಮುನಿ,ಪೂರ್ವಷಾಢಕ್ಕೆ ಜಲದೇವತೆ, ಉತ್ತರಾಷಾಢಕ್ಕೆ ವಿಶ್ವದೇವ ಶ್ರಾವಣಕ್ಕೆ ವಿಷ್ಣು ಧನಿಷ್ಠ ನಕ್ಷತ್ರಕ್ಕೆ ವಾಸುದೇವ, ಶತತಾರಕ್ಕೆ ವರುಣ. ಪೂರ್ವ ಭಾಈದ್ರಕ್ಕೆ ಅಜೈಕ ಚರಣ,ಉತ್ತರಭಾದ್ರಕ್ಕೆ ಅಹಿ ಬುಧ್ನ್ಯ ರೇವತಿಗೆ ಪೂಜೆ ದೇವತೆ ಹೀಗೆ ನಕ್ಷತ್ರಗಳಿಗೆ ಅಧಿಪತಿಗಳಾಗಿದ್ದಾರೆ

 ಪ್ರಥಮ ಋತುಮತಿಯಾದ ದೋಷ ಶಾಂತಿ ಕ್ರಮ :

     ಸ್ತ್ರೀಯರು ಪ್ರಥಮ ಋತುಮತಿಯಾದ ದಿವಸದಲ್ಲಿ ಈ ಹಿಂದೆ ಹೇಳಿದ ಪ್ರಕಾರ ಯಾವವು ಶುಭ ಆದವುಗಳು?ಯಾವವು ಅಶುಭ ಆದವುಗಳು?ಎಂಬುದನ್ನು ನಿರ್ಣಯಿಸಿದ ನಂತರ ವಾರ.ತಿಥಿ  ‘  ನಕ್ಷತ್ರ,ಯೋಗ,ಕರಣ.ಲಗ್ನ ಸ್ಥಳ ವಸ್ತ್ರ ಇತ್ಯಾದಿಗಳನ್ನು ವಿಚಾರಿಸಿ.ಇವುಗಳ ಪ್ರಕಾರ ಯಾವುಗಳು  ದೋಷವೆಂದು ತಿಳಿದು ಬಂದ ನಂತರ,ಅವುಗಳ ದೋಷಗಳು ಹೋಗಿ, ಮುಂದೆ ಭವಿಷ್ಯತ್ತಿನಲ್ಲಿ ಸುಖ ದೊರೆಯುವುದಾಗಿ ಈ ವಾರಾದಿ ನಕ್ಷತ್ರಾದಿಗಳಿಗೆ ಅಧಿಪತಿಯಾದ ದೇವತೆಗಳ ಬೆಳ್ಳಿಯ ಮೂರ್ತಿಗಳನ್ನು ಮಾಡಿಸಿ,ಅಥವಾ ಬೆಳ್ಳಿಯ ತಗಡಿನಲ್ಲಿ ಆ ಅಧಿಪತಿ ದೇವತೆಗಳ ಹೆಸರುಗಳನ್ನು ಬೆಳ್ಳಿಯ ತಗಡಿನಲ್ಲಿ ಬರೆಸಿ, ಆ ಮೂರ್ತಿಯನ್ನು ಪಂಚಾಮೃತದಿಂದ ಅಭಿಷೇಕ ಮಾಡಿಸಿ ಗಂಢ ಅಕ್ಷತೆ ಬಿಲ್ವಪತ್ರೆ ಪುಷ್ಯಾ ದೀಪಗಳಿಂದ ಋತುಮತಿಯಾದ ಸ್ತ್ರೀಯಳ ಹಸ್ತದಿಂದ ಪೂಜಿಸಿ,,

ಹಾಲು ಬೆಲ್ಲ ಮುಂತಾದವನ್ನು ಅದಕ್ಕೆ ನೈವೇದ್ಯ ಮಾಡಿಸಿದ ನಂತರ ದಕ್ಷಿಣದ ಮಾಡಿಸಿ ಮೂರ್ತಗೆ ನಮಸ್ಕರಿಸಿ ತೃಪ್ತಿಪಡಿಸಿದ ನಂತರ ದಕ್ಷಿಣ ಸಹಿತ ಆ ಮೂರ್ತಿಯನ್ನು  ತಮ್ಮ ಮನೆತನದ ಪೂಜ್ಯ ಗುರುಗಳಿಗೆ ಆಸ್ತಿಯಳ ಹಸ್ತದಿಂದಲೇ ದಾನ ಕೊಡಿಸಬೇಕು.ಮತ್ತು ಆ ಪೂಜ್ಯರಿಂದ ಆಶೀರ್ವಾದ ಪಡೆಯಬೇಕು

     ಇದಲ್ಲದೆ,  ಇನ್ನುಳಿದ ಯೋಗ,ಕರಣ, ಮಾಸ,ಸ್ಥಾನ,ವೇಳೆ, ತೊಟ್ಟಿರುವ ವಸ್ತ್ರ,ಲಗ್ನ ಇವುಗಳಲ್ಲಿ ಯಾವುದಾದರೂ ದುಷ್ಟ ಫಲಗಳನ್ನು ಕೊಡತಕ್ಕವುಗಳಾಗಿದ್ದರೆ ಆ ದುಷ್ಟ ಫಲಗಳ ನಿವಾರಣೆಗಾಗಿ ಮಣ್ಣಿನ ಒಂದು ಹೊಸಕುಂಭವನ್ನು ತಂದು ಅದನ್ನು ಸುಣ್ಣ ಕೆಮ್ಮುಣ್ಣುಗಳಿಂದ ಅಲಂಕಾರಗೊಳಿಸಿ, ಆ ಕುಂಭಕ್ಕೆ ಒಂದು ಕೆಂಪು ಅಥವಾ ಹಳದೀ ವರ್ಣದ ವಸ್ತ್ರವನ್ನು ಏಳು ಸುತ್ತಿ,ಸುತ್ತಿ ಗಂಧಾಕ್ಷತೆ, ಧೂಪಾದಿಗಳಿಂದ ಋತುಮತಿಯಾದ ಶ್ರೀಯಳಿಂದಲೇ ಪೂಜೆ ಮಾಡಿಸಿ ಬಿಂದಿಗೆಯನ್ನು ದಕ್ಷಿಣ ಸಹಿತ ಪೂಜ್ಯ ಗುರುಗಳಿಗೆ ದಾನ ಕೊಡಬೇಕು.ಐದು ದನ ಜನ ಪೂಜ್ಯರಿಗೆ ಭೋಜನ ಮಾಡಿಸಿ, ಮನೆ ಜನರೆಲ್ಲ ಆಶೀರ್ವಾದ ಪಡೆಯಬೇಕು. ದೋಷವೆಲ್ಲವೂ ನಿವಾರಣೆಯಾಗುವುದು.