ಮನೆ ಅಂತಾರಾಷ್ಟ್ರೀಯ ಮೈಕ್ರೋ ಆರ್‌ ಎನ್‌ ಎ: ಅಮೆರಿಕದ ವಿಕ್ಟರ್, ಗ್ಯಾರಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ

ಮೈಕ್ರೋ ಆರ್‌ ಎನ್‌ ಎ: ಅಮೆರಿಕದ ವಿಕ್ಟರ್, ಗ್ಯಾರಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ

0

ಸ್ಟಾಕ್‌ಹೋಮ್‌: ಮೈಕ್ರೋ ಆರ್‌ ಎನ್‌ ಎ ಆವಿಷ್ಕಾರಗೊಳಿಸಿದ ಅಮೆರಿಕದ ವಿಕ್ಟರ್‌ ಆ್ಯಂಬ್ರೋಸ್‌ ಮತ್ತು ಗ್ಯಾರಿ ರುಕುನ್‌ ಅವರಿಗೆ 2024ನೇ ಸಾಲಿನ ವೈದ್ಯಕೀಯ ನೊಬೆಲ್‌ ಪ್ರಶಸ್ತಿ ಸಂದಿದೆ.

Join Our Whatsapp Group

 ಜೀವಿಗಳ ಬೆಳವಣಿಗೆ ಹಾಗೂ ಕಾರ್ಯಚಟುವಟಿಕೆಗಳಲ್ಲಿ ಜೀನ್‌ಗಳ ಪಾತ್ರ ಕುರಿತು ಮೂಲ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನದಲ್ಲಿ ಈ ಜೋಡಿ ಕಂಡುಹಿಡಿದ ಮೈಕ್ರೋ ಆರ್‌ಎನ್ಎಗೆ ಈ ಪ್ರಶಸ್ತಿ ಲಭಿಸಿದೆ.

ಈ ವಾರ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ನೊಬೆಲ್‌ ಪ್ರಶಸ್ತಿಗಳ ಘೋಷಣೆಯಾಗಲಿದೆ. ನಾಳೆ ಭೌತವಿಜ್ಞಾನ, ಬುಧವಾರ ರಸಾಯನ ವಿಜ್ಞಾನ, ಗುರುವಾರ ಸಾಹಿತ್ಯ ಕ್ಷೇತ್ರ ಮತ್ತು ಶುಕ್ರವಾರ ಶಾಂತಿ ಪ್ರಶಸ್ತಿ ಪುರಸ್ಕೃತರ ಹೆಸರು ಘೋಷಣೆಯಾಗಲಿದೆ.

ಮೈಕ್ರೋಆರ್‌ಎನ್‌ಎ ಜೀನ್‌ಗಳು 500 ಮಿಲಿಯನ್ ವರ್ಷಗಳ ಕಾಲ ಬಹುಕೋಶೀಯ ಜೀವಿಗಳ ಜೀನೋಮ್‌ಗಳಲ್ಲಿ ವಿಕಸನಗೊಂಡಿವೆ ಮತ್ತು ವಿಸ್ತಾರಗೊಂಡಿವೆ. ಮಾನವರಲ್ಲಿ ಕಂಡುಬರುವ ವಿಭಿನ್ನ ಮೈಕ್ರೋಆರ್‌ಎನ್‌ಎಗಳ ಸಾವಿರಕ್ಕೂ ಹೆಚ್ಚು  ಜೀನ್‌ಗಳಿವೆ ಮತ್ತು ಇವೆಲ್ಲವೂ ಮೈಕ್ರೋಆರ್‌ಎನ್‌ಎಯ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ ಎನ್ನುವುದು ಈ ಆವಿಷ್ಕಾರದಿಂದ ತಿಳಿದುಬಂದಿದೆ ಎಂದು ನೊಬೆಲ್‌ ಸಮಿತಿ ಹೇಳಿದೆ.