ಮನೆ ಸಾಹಿತ್ಯ ಸರಿಯಾದ ಪ್ರೇರಣೆಗಳಿಗೆ ಸ್ಪಂದಿಸಬೇಕು

ಸರಿಯಾದ ಪ್ರೇರಣೆಗಳಿಗೆ ಸ್ಪಂದಿಸಬೇಕು

0

ಐವಾನ್ ಪೆಟ್ರೋವಿಜ್ ಪಾವ್ಲೋ ಎಂಬುವರು ರಷ್ಯಾ ದೇಶದ ಶರೀರ ಶಾಸ್ತ್ರಜ್ಞರಾಗಿದ್ದರು. ಅವರು ಒಮ್ಮೆ ನಾಯಿಗಳ ಜೀರ್ಣ ಕ್ರಿಯೆಗಳಿಗೆ ಸಂಬಂಧಿಸಿದ ಪ್ರಯೋಗಗಳನ್ನು ಮಾಡುತ್ತಿದ್ದರು. ನಾಯಿಯ ಬಾಯಿಂದ ಎಷ್ಟು ಜೊಲ್ಲು ರಸ ಇದು ಸಂಗ್ರಹವಾಗುತ್ತದೆ ಎಂದು ತಿಳಿಯುವುದಕ್ಕಾಗಿ ಅವರು ನಾಯಿಯ ದವಡೆಗೆ ಒಂದು ಸಣ್ಣ ಶಸ್ತ್ರಚಿಕಿತ್ಸೆಯನ್ನು  ನಡೆಸಿ ಒಂದು ನಳಿಗೆಯನ್ನು ಸಿಕ್ಕಿಸಿದರು.

Join Our Whatsapp Group

ನಾಯಿಯು ಆಹಾರವನ್ನು ಕಂಡ ತಕ್ಷಣ ಜೊಲ್ಲು  ಸುರಿಸುತ್ತಿತ್ತು.ನಂತರ ನಾಯಿಗೆ ಆಹಾರವನ್ನು ನೀಡಲು ಒಬ್ಬ ವ್ಯಕ್ತಿಯನ್ನು ಗೊತ್ತು ಪಡಿಸಲಾಯಿತು.ಕೆಲವು ದಿನಗಳ ನಂತರ ನಾಯಿಯು ತಾನಗೆ ಆಹಾರವನ್ನು ನೀಡುವ ವ್ಯಕ್ತಿಯನ್ನು ಕಂಡ ತಕ್ಷಣ ಜೊಲ್ಲು ಸುರಿಸಲು ಪ್ರಾರಂಭಿಸಿತು.

ನಿಜವಾಗಿ ನಾಯಿ ಸ್ಬಂಧಿಸುತ್ತಿದ್ದುದು ಆಹಾರಕ್ಕೆ. ಆದರೆ ನಂತರ ನಾಯಿ ಮತ್ತು ಆಹಾರದ ನಡುವೆ ಇದ್ದ ಸಂಬಂಧವು ಆಹಾರ ಕೊಡುವ ವ್ಯಕ್ತಿಗೆ ವರ್ಗಾವಣೆಯಾಗಿ ವ್ಯಕ್ತಿಯನ್ನು ಕಂಡಾಗ ನಾಯಿಯು ಜೊಲ್ಲು ಸುರಿಸಲು ಪ್ರಾರಂಭಿಸಿತು.ನಂತರ ಸ್ವಲ್ಪ ದಿನಗಳು ಕಳೆದ ಮೇಲೆ ಆಹಾರ ಕೊಡುವ ವ್ಯಕ್ತಿಯ ಹೆಜ್ಜೆ ಸದ್ದು ಕೇಳಿದರೆ ಸಾಕು, ನಾಯಿಯು ಜೊಲ್ಲು ಸುರಿಸುತ್ತಿತ್ತು ಇದರಿಂದ ಪಾವ್ಲೋ ಅವರಿಗೆ ಕೆಲವು ಹೊಸ ಹೊಳಹುಗಳು ದೊರೆತವು.ಅವರು ಪ್ರಯೋಗದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡರು.ಆಹಾರವನ್ನು ನೋಡಿದಾಗ ನಾಯಿ ಜೊಲ್ಲು ಸುರಿಸುವುದನ್ನು ಪಾವ್ಲೋ ಸ್ವಾಭಾವಿಕ ಪ್ರತಿಕ್ರಿಯೆ ಎಂದು ಗುರುತಿಸಿದರು. ನಂತರ ಕೃತಿಕ ಪ್ರತಿಕ್ರಿಯೆಯನ್ನು ಉಂಟುಮಾಡಲು ಸಾಧ್ಯವೇ ಎಂದು ಪ್ರಯೋಗವನ್ನು ನಡೆಸಿದರು. ನಾಯಿಗೆ ಆಹಾರವನ್ನು ಕೊಡುವ ಮೊದಲು ಗಂಟೆಯ ಧ್ವನಿಯನ್ನು ಮೊಳಗಿಸ ತೊಡಗಿದರು. ನಾಯಿಯು ಜೊಲ್ಲು ಸುರಿಸಲಿಲ್ಲ. ಇದನ್ನು ತಟಸ್ಥ ಪ್ರತಿಕ್ರಿಯೆ ಎಂದು ಕರೆದರು. ಆದರೆ ಗಂಟೆಯ ಧ್ವನಿಯನ್ನು ಕೇಳಿಸಿ ಆಹಾರವನ್ನು ಕೊಡುವ ಪದ್ಧತಿಯನ್ನು ಕೈ ಬಿಡಲಿಲ್ಲ. ನಿಧಾನವಾಗಿ ಗಂಟೆಯ ಧ್ವನಿ ಮತ್ತು ಆಹಾರ ನೀಡುವಿಕೆಯ ನಡುವೆ ಸಂಬಂಧ ಉಂಟಾಯಿತು. ಅಂದರೆ ತಟಸ್ಥ ಪ್ರಚೋದನೆಗೂ ಈಗ ನಾಯಿಯು ಪ್ರತಿಕ್ರಿಯೆಯನ್ನು ನೀಡಲು ಶುರು ಮಾಡಿತು. ಈ ಸ್ಥಿತಿಯನ್ನು ಪಾವ್ಲೋ ಅವರು ಅನುಬಂಧ ಎಂದು ಕರೆದರು..ಈ ರೀತಿಯ ಅನುಬಂಧಕ್ಕೆ ಸ್ವಾಭಾವಿಕ ಪ್ರಚೋದನೆಗೂ ತಟಸ್ಥ ಪ್ರಚೋದನೆಗೂ ನಡುವೆ ಸಂಬಂಧ ಏರ್ಪಟ್ಟಿರುವುದು ಕಾರಣವಾಗಿದೆ.

ಈ ಪ್ರಯೋಗವನ್ನು ಮುಂದುವರೆಸಿದ ಅವರು ಗಂಟೆಯ ಧ್ವನಿ ಮತ್ತು ಆಹಾರ ನೀಡಿಕೆಯ ನಡುವಿನ ಅವಧಿಯನ್ನು ಹೆಚ್ಚಿಸಿದರು ಆಗ ನಾಯಿಯು ನಿಧಾನವಾಗಿ ಜೊಲು ಸುರಿಸಿತು. ನಂತರ ಗಂಟೆಯ ದ್ವನಿಯೊಂದಿಗೆ ಆಹಾರ ನೀಡುವ ಪದ್ಧತಿಯನ್ನು ಪೂರ್ತಿಯಾಗಿ ನಿಲ್ಲಿಸಲಾಯಿತು. ನಾಯಿ ಜೊಲ್ಲು ಸುರಿಸುವುದನ್ನೂ ನಿಲ್ಲಿಸಿತ್ತು. ಅಭಿಜಾತ ಅಭಿಜಾತ ಅನು ಬಂಧಿತ ಕಲಿಕೆ ಎಂಬ ಕಲಿಕಾ ಸಿದ್ಧಾಂತ ರೂಪುಗೊಂಡದ್ದು ಹೀಗೆ. ಆಟ ಮನೆಗೆ ಸ್ವಾಭಾವಿಕ ಆಸಕ್ತಿ.ಪಾಠವನ್ನು ಒಂದು ಆಟದಂತೆ ಅನುಭವಿಸಲು ನಾವು ಕಲಿತುಕೊಂಡರೆ ಪಾಠಕ್ಕೂ ನಾವು ಆಟದಷ್ಟೇ ಸ್ಪಂದಿಸಲು ಸಾಧ್ಯ.ಯಾವುದು ಸರಿಯಾದ  ಪ್ರೇರಣೆ ಎಂದು ಗುರುತಿಸಿ ಸ್ಪಂದಿಸಲು ಕಲಿಯಬೇಕು ಅಲ್ಲವಾ?