ಮನೆ ಮಕ್ಕಳ ಶಿಕ್ಷಣ ಬಾಲಗ್ರಹಗಳು: ದೌರ್ಬಲ್ಯಗಳು

ಬಾಲಗ್ರಹಗಳು: ದೌರ್ಬಲ್ಯಗಳು

0

    ನಮ್ಮ ಮನೆಯ ಹತ್ತಿರ ಒಂದು ಶಾಲೆಯಿದೆ,ಅದೊಂದು ದಿನ ಸಂಜೆ ಕತ್ತಲಾಗುತ್ತಿದ್ದ ಸಮಯದಲ್ಲಿ ಎಲ್ಲಾ ಮಕ್ಕಳು ಕೊರಸ್ ನಲ್ಲಿ ಘೊಳ್ಳೆಂದು ನಗುವುದು ಕೇಳಿಸಿತು. ತಮಾಷೆಗಾಗಿ ಹರಟೆ ಹೊಡೆಯುತ್ತಿದ್ದಾರೆಂದುಕೊಂಡೆ. ಸ್ವಲ್ಪ ಹೊತ್ತಿಗೆ ಮತ್ತೆ ರೀತಿಯ ನಗುಗಳು. ಆ ರೀತಿಯಾಗಿ ಐದಾರು ಬಾರಿ ನಗುತಲೇ ಇದ್ದಾರೆ.ಕುತೂಹಲ ತಡೆಯಲಾಗದೆ ಅದೇನೋ ನೋಡೋಣವೆಂದು ಹೋಗಿ ನೋಡಿದರೆ ಅಲ್ಲಿ ಒಬ್ಬ ದಂಪತಿಗಳು ಸ್ಕೂಟರ್ ನಿಂದ ಕೆಳಕ್ಕೆ ಬಿದ್ದಿದ್ದಾರೆ!

      ವಿಷಯವೇನೆಂದರೆ, ಅಲ್ಲಿರುವ ಮುನಿಸಿಪಾಲಿಟಿ ಮ್ಯಾನ್ ಹೋಲ್ ಮುಚ್ಚಳವನ್ನು ಯಾರೋ ತೆಗೆದು ಬಿಟ್ಟಿದ್ದಾರೆ.ಕತ್ತಲಲ್ಲಿ ಆ ಕಡೆ ಬರುವ ಸ್ಕೂಟರ್ ನವರು,ಬೈಕ್ ಸವಾರರು ಆ ಹಳ್ಳದಲ್ಲಿ ಬಿದ್ದು ಒದ್ದಾಡುತ್ತಿದ್ದಾರೆ.ಅವರಿಗಾದ ಗಾಯಗಳು ಕೂಡಾ ತೀವ್ರವಾಗಿವೆ.ಅದು ಆ ಮಕ್ಕಳಿಗೆ ಬಹಳ ಆನಂದವನ್ನುಂಟು ಮಾಡುತ್ತಿದೆ. ತಕ್ಷಣ ಮಕ್ಕಳೊಂದಿಗೆ ಮಾತನಾಡಿ ಈ ರೀತಿ ಮಾಡಬಾರದು, ಇದು ತಪ್ಪು. ನಾಳೆ ನಿಮ್ಮ ಅಪ್ಪ ಅಮ್ಮ ಕೂಡಾ“ ಈ ರೀತಿಯಾಗಿ ಬೀಳಬಹುದಲ್ಲ.ಬನ್ನಿ ಅದಕ್ಕೆ ಅಡ್ಡಲಾಗಿ ಕಲ್ಲುಗಳನ್ನು ಇಡೋಣ” ಎಂದು ಹೇಳಿದೆ.ಮಕ್ಕಳು ಮತ್ತೆ ನಕ್ಕರು. ಒಬ್ಬ ಹುಡುಗನು ಮಾತ್ರ ಮುಂದೆ ಬಂದು “ನೀವು ಹೇಳಿದ್ದು ನಿಜ ಅಂಕಲ್.ಈಗಲೇ ನಾನು ಕಲ್ಲುಗಳನ್ನು ತರುತ್ತೇನೆ” ಎಂದ್ಹೇಳಿ  ಕಲ್ಲುಗಳನ್ನು ತಂದ.ಉಳಿದ ಮಕ್ಕಳು ನಗುತ್ತಾ ಹೊರಟು ಹೋದರು.ನಾವಿಬ್ಬರು ಕಲ್ಲುಗಳನ್ನಿಟ್ಟು ಹಿಂತಿರುಗಿ ಬಂದೆವು. ಅರ್ಧಗಂಟೆಯ ನಂತರ ಮತ್ತದೇ ನಗು, ಕುಣಿದಾಟ, ಕಿರುಚಾಟಗಳು. ಆ ಮಕ್ಕಳು ಅಡ್ಡಲಾಗಿಟ್ಟಿದ್ದ ಕಲ್ಲುಗಳನ್ನು ತೆಗೆದು ಎಸೆದು ಪೈಶಾಚಿಕ ಆನಂದವನ್ನು ಪಡೆಯಲಾರಂಭಿಸಿದರು. ನಾನು ಬೇರೇನೂ ಮಾಡಲಿಕ್ಕಾಗದೆ ಮುನಿಸಿಪಾಲಿಟಿಗೆ ಫೋನ್ ಮಾಡಿ ವಿಷಯ ತಿಳಿಸಿದೆ.

   ಮಕ್ಕಳಲ್ಲಿ ಇಂತಹ ಪ್ರವೃತ್ತಿಗೆ ಯಾರು ಕಾರಣ? ತಾಯಿ ತಂದೆಯರ ಪ್ರವರ್ತನೆಯೇ? ಹಿಂಸಾತ್ಮಕ ಸಿನಿಮಾಗಳೇ? ಅಮಾಯಕರನ್ನು ಮೂರ್ಖರನ್ನಾಗಿಸುತ್ತಾ ಕೊನೆಗೆ ”ಇದೆಲ್ಲಾ ನಿಮ್ಮ ಟಿವಿಗಾಗಿ” ಎಂದು ನಗುತ್ತಾ ಆಟವಾಡಿಸುವ ಟಿ.ವಿ. ಛಾನಲ್ ಗಳೇ? ಒಮ್ಮೆ ಯೋಚಿಸಿ ನೋಡಿ.

 ಪರೋಪಕಾರಿ ಬುದ್ಧಿ ಕಡಿಮೆಯಾಗಿದೆ :

    ಜಪಾನ್ ನಲ್ಲಿ ಒಬ್ಬ ವ್ಯಾಪಾರಿ ತನ್ನ ಮನೆಯನ್ನು ದುರಸ್ತಿಗೊಳಿಸಲು ಒಬ್ಬ ಕಾರ್ಪೆಂಟರ್ ನನ್ನು ಕರೆದ.ಅದೇ ಕಾರ್ಪೆಂಟರ್ ಆ ಮನೆಯನ್ನು ಮೊದಲಿಗೆ ನಿರ್ಮಿಸಿದ್ದ ಜಪಾನ್ ನಲ್ಲಿ ಎಲ್ಲಾ ಮನೆಗಳನ್ನು ಮರದ ಹಲಗೆಗಳಿಂದ ನಿರ್ಮಿಸಲಾಗಿರುತ್ತದೆ. ಆ ಮರಗೆ ಲಸದವನು ಒಂದು ಬಾಗಿಲನ್ನು ಒಡೆದು ಹಾಕುತ್ತಿರಬೇಕಾದರೆ ಮಧ್ಯದಲ್ಲಿ ಒಂದು ಹಲ್ಲಿಯನ್ನು ನೋಡಿದ.ಅದರ ಹೊಟ್ಟೆ ಮೇಲಿಂದ ಒಂದು ಮೊಳೆಯ ಹಲಗೆಗೆ ಇಳಿದಿದೆ ಅದು ಆರು ವರ್ಷಗಳ ಹಿಂದೆ ತಾನು ಹೊಡೆದಿದ್ದದ್ದೆ ಆದರೂ ಹಲ್ಲಿ ಇನ್ನೂ ಜೀವಂತವಾಗಿದೆ ಎಂದು ಆ ಮನೆ ಮಾಲೀಕನನ್ನು ಕರೆದು ತೋರಿಸಿದ. ಆತ ಆಶ್ಚರ್ಯಕ್ಕೊಳಗಾದ.ಇಷ್ಟಕ್ಕೂ ಆದು ಹೇಗೆ ತಾನೇ ಬದುಕಿದೆ…..? ಎಂದುಕೊಂಡ.ಏಕೆಂದರೆ ಅದಕ್ಕೆ ಆಹಾರ ಸಿಗುವ ಅವಕಾಶವೇ ಇಲ್ಲ ಅತ್ತಿತ್ತ ಕದಲಾಡಲೂ ಸಾಧ್ಯವಿಲ್ಲದ ಪರಿಸ್ಥಿತಿ.ಅವರಿಬ್ಬರೂ ಅದರ ರಹಸ್ಯವನ್ನು ತಿಳಿದುಕೊಳ್ಳಬೇಕೆಂದೇ ಅಲ್ಲೇ ಕುರ್ಚಿಗಳನ್ನು ಹಾಕಿಸಿಕೊಂಡು ಆ ಅಲ್ಲಿಯ ಕಡೆಯೇ ತದೇಕಚಿತ್ತರಾಗಿ ನೋಡತೊಡಗಿದರು. ರಾತ್ರಿ 9:00 ಆಯ್ತು 10,11, 12,ಗಂಟೆಯಾಯಿತು. ಸರಿಯಾಗಿ 12:30 ಗಂಟೆಗೆ ಬೇರೊಂದು ಅಲ್ಲಿ ತನ್ನ ಬಾಯಲ್ಲಿ ಆಹಾರವನ್ನು ಕಚ್ಚಿಕೊಂಡು ಬಂದು ಈ ಹಲ್ಲಿಗೆ ತಿನ್ನಿಸತೊಡಗಿತು.  ಅವರಿಬ್ಬರ ಕಣ್ಣಲ್ಲು ನೀರು ಸುರಿಯತೊಡಗಿತು.

     ಬಹಳಷ್ಟು ಮಂದಿ ಮನುಷ್ಯರಿರಲಿಲ್ಲದ ಸಹಬಾಳ್ಮೆ,  ಪರೋಪಕಾರ, ಮಾನವೀಯತೆ ಆ ಮೂಕ ಪ್ರಾಣಿಗಳಿಗಿವೆ. ಪರರಿಗೆ ಸಹಾಯ ಮಾಡಬೇಕೆಂಬ ಆಲೋಚನೆ ಕನಿಷ್ಠ ಇಂತಹ ಘಟನೆಗಳನ್ನು ತಿಳಿದುಕೊಂಡಾಗಲಾದರೂ ಉಂಟಾಗಬೇಕು.ಇತ್ತೀಚಿಗೆ ಒಬ್ಬ ಹುಡುಗ ತನ್ನ ತಂದೆ ಅನ್ನ ಕೇಳಿದನೆಂಬ  ಕಾರಣಕ್ಕಾಗಿ ತಲೆ ಮೇಲೆ ಕಲ್ಲುಹಾಕಿ ಸಾಯಿಸಿಬಿಟ್ಟಿದರಂತೆ. ಇಂತಹ ಸುದ್ದಿಗಳ ಓದಿದಾಗ ಮನಸ್ಸಿಗೆ ತುಂಬಾ ನೋವೆನಿಸುತ್ತದೆ   ನಾವು ಪ್ರಪಂಚವನ್ನೆಲ್ಲಾ ಸರಿಪಡಿಸಲಾಗದಿದ್ದರೂ ಮನಸ್ಸು ಮಾಡಿ ಕೆಲವು ಮಂದಿಯನ್ನಾದರೂ ಬದಲಾಯಿಸಬಹುದು.