ಮನೆ ಅಪರಾಧ ಸರಕು ತುಂಬಿದ ಲಾರಿ ಪಲ್ಟಿ: ಸಂಚಾರ ಸಂಪೂರ್ಣ ಸ್ಥಗಿತ

ಸರಕು ತುಂಬಿದ ಲಾರಿ ಪಲ್ಟಿ: ಸಂಚಾರ ಸಂಪೂರ್ಣ ಸ್ಥಗಿತ

0

ಯಲ್ಲಾಪುರ: ಸರಕು ತುಂಬಿದ ಲಾರಿಯೊಂದು ಪಲ್ಟಿಯಾಗಿ ಬಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ಅರಬೈಲ್ ಘಟ್ಟದ ತಿರುವಿನಲ್ಲಿ ಅ.17ರ ಗುರುವಾರ ಬೆಳಗಿನ ಜಾವ ಸಂಭವಿಸಿದೆ.

Join Our Whatsapp Group

ರಸ್ತೆಯಲ್ಲಿದ್ದ ಹೊಂಡ ಈ ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಈ ಘಟನೆಯ ಪರಿಣಾಮ ಲಾರಿ ಸ್ಕಿಡ್ ಆಗಿ ರಸ್ತೆಯಲ್ಲಿ ಅಡ್ಡಲಾಗಿ ಬಿದ್ದಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ವಾಹನಗಳು ರಸ್ತೆಯಲ್ಲಿ 3-4 ಕಿ.ಮೀ ದೂರ ಸಾಲುಗಟ್ಟಿ ನಿಂತಿದೆ. ಕ್ರೇನ್ ಸಹಾಯದಿಂದ ಬಿದ್ದ ಲಾರಿ ಎತ್ತುವ ಕಾರ್ಯ ಸಾಗಿದೆ.