ಪುಷ್ಯ ನಕ್ಷತ್ರದ ಕ್ಷೇತ್ರವ್ಯಾಪ್ತಿ 3 ಅಂಶ 20 ಕಲಾಕರ್ದಿಂದ 16 ಅಂಶ 40 ಕಲಾ ಕರ್ಕರಾಶಿ,ನಕ್ಷತ್ರ ಸ್ವಾಮಿ ಶನಿ, ರಾಶಿ ಸ್ವಾಮಿ ಚಂದ್ರ, ಮಧ್ಯನಾಡಿ, ಮೇಷಯೋನಿ ನಕ್ಷತ್ರ ದೇವತೆ ಬೃಹಸ್ಪತಿ ತಾರಾ ಸಮೂಹ ಮೂರು ಆಕಾಶ ಭಾಗ ಮಧ್ಯ, ನಾಮಾಕ್ಷರ – ಹೂ, ಹೇ, ಹೋ, ಡಾ. ಪುಷ್ಯ ನಕ್ಷತ್ರ ಪ್ರತಿನಿಧಿಸುವ ಜಾತಕನ ಶರೀರ ಭಾಗ ಶ್ವಾಶಕೋಶದ ಉದರ ಮತ್ತು ಕರುಳುಗಳು.
ಪುಷ್ಯ ನಕ್ಷತ್ರದ ಜಾತಕಾನ ಸ್ವರೂಪ :
ಉಳಿತಾಯಗಾರ ಬುದ್ದಿವಂತ, ತಿಳಿಬೇಕಲ್ಲ ತಿಳುವಳಿಕೆಯುಳ್ಳವ,ಸಾಂಪ್ರದಾಯವಾದಿ, ನೀಳಕಾಯ,ಶಾಮ ಲವರ್ಣ, ಮಿತಹಾರಿ, ಚಿಂತನಶೀಲ ಜಾಗೃತ,ತತ್ವರ, ಆತ್ಮ ಕೇಂದ್ರಿತ, ಕ್ರಮಬದ್ಧ ಮತ್ತು ನಿಯಮ ಬದ್ಧ, ಅನ್ಯರನ್ನು ಸಹಿಸಿಕೊಳ್ಳುವವ, ಸುರಕ್ಷಿತವಾಗಿದ್ದು ಕಾರ್ಯನಿರ್ವಹಿಸುವವ, ವಿಶ್ವದಲ್ಲಿ ಪದವಿ ಪ್ರಾಪ್ತಿಹೊಂದುವ, ಮಂತ್ರಿ ರಾಜಾ, ಅಧಿಕಾರಿ,ಮೀನುಗಾರ, ನೌಕಾ, ವಿಜ್ಞಾನಿ ಬಲ್ಲವ, ತ್ಯಾಗ ಮಾಡುವವ, ಪ್ರಾಮಾಣಿಕ,ಅರಣ್ಯ ವಿಭಾಗ,ಗೋಧಿ, ಜೋಳ,ಅಕ್ಕಿ, ಕಬ್ಬು ಶುದ್ದ ಮನಸ್ಸಿನವ, ಎಲ್ಲರಿಂದ ಪ್ರಶಂಸಿಲ್ಪಡುವ ವಿದ್ವಾಂಸ, ಶ್ರೀಮಂತ, ಪವಿತ್ರತೆಯಲ್ಲಿ ಒಲವಿರುವವ, ಇಂಜಿನಿಯರಿಂಗ್ ಬುದ್ಧಿಯಳ್ಳವ, ವ್ಯವಹಾರಿಕ, ಸ್ವಷ್ಟ ನುಡಿಯುವವ, ಶೀಘ್ರವಾಗಿ ಮಾತನಾಡುವವ, ವಿಮರ್ಶಕ, ಕಾರ್ಯನಿಪುಣ.
ಪುಷ್ಯ ಜಾತಕನ ಉದ್ಯೋಗ :
ಗಣಿಗಾರಿಕೆ, ಉತ್ಪಾದನೆ ಒಗ್ಗೂಡಿಸುವವ,ಸೀಮೆ ಎಣ್ಣೆ ಪೆಟ್ರೋಲ್, ಪೆಟ್ರೋಲಿಯಮ್ ಪದಾರ್ಥಗಳು, ಇದ್ದಲು, ಭೂಮಿ, ಜಲೋತ್ಪನ್ನ ಪದಾರ್ಥಗಳು, ಇದ್ದೀಲು ವಿತರಕ, ಏಕಾಂತ ಕಾರ್ಯ ಸ್ಥಳ, ಬಾವಿ, ಗಣಿ, ಕಾಲುವೆ, ನಾಲೆಗಳು, ಕೃಷಿ ಸಂಬಂಧಿ ಕಾರ್ಯಾ, ಭೂಮಿ ವಿತರಕ, ನ್ಯಾಯಾಲಯ, ವಿಶ್ವಸಪೂರಿತ ಪದವಿ, ಗುಪ್ತಚರ, ನಲ್ಲಿಯ ಕಾರ್ಯ ಪಾಲಕ, ಅಭಿಯಂತ, ಗಮನಾಗಮನ ನಿರೀಕ್ಷಕ, ರಸ್ತೆ ನಿರ್ಮಾಣದ ಅಭಿಯಂತ, ಅಣೆಕಟ್ಟು, ಸುರಂಗ,ರಾತ್ರಿಯ ಕಾರ್ಯ ಮಾಡುವವ, ಕಾವಲುಗಾರ, ಭೂಮಿಯ ಅಡಿಯಲ್ಲಿ ಕಾರ್ಯನಿರ್ವಹಿಸುವ, ತಂತ್ರಜ್ಞ ನಿರ್ವಾಹಕ, ಯಂತ್ರಚಾಲಕ, ನೀರಿನಲ್ಲಿ ಮುಳುಗುವವ ಹಡಗು, ವಾಯುಯಾನ ವಿಭಾಗ, ವಿವಿಧ ಭಾಗಗಳನ್ನು ಜೋಡಿಸುವವ, ಮೃತ್ಯುಕರ ಅಥವಾ ದಂಡ ವಸೂಲಿಗಾರ.