ಮನೆ ರಾಷ್ಟ್ರೀಯ ವಾಸ್ತುದೇವನ ಪೂಜಾ ಪದ್ದತಿ

ವಾಸ್ತುದೇವನ ಪೂಜಾ ಪದ್ದತಿ

0

     ನೂತನ ಗೃಹ ಮತ್ತು ಯಾವದೇ ಕಟ್ಟಡ ನಿರ್ಮಾಣಕ್ಕೆ ವಾಸುದೇವನು ಪ್ರಾಮುಖ್ಯ ನಾಗಿದ್ದು ಈ ಅಧಿಕೃತ ದೇವಾಮೂರ್ತಿಯನ್ನು ಪರಮಾತ್ಮ ನ ಸ್ವರೂಪವೆಂದರೆ ತಿಳಿದು, ಹೊಸ ಮನೆ ಅಥವಾ ಕಟ್ಟಡ ಕಟ್ಟಿಸುವ ಸ್ಥಳದ ಮಧ್ಯದಲ್ಲಿ ಅಥವಾ ಈಶಾನ್ಯ ಭಾಗದಲ್ಲಿ ಗೋಮಾಯದಿಂದ ಶುದ್ಧಗೊಳಿಸಿ,ರಂಗವಲ್ಯಾದಿಗಳಿಂದ ಅಲಂಕರಿಸಿ ಅಷ್ಟದಳ ಕಮಲವನ್ನು ಬರೆದು ಪಂಚರತ್ನ ಮುತ್ತು, ಹವಳ,ಬಂಗಾರ, ಬೆಳ್ಳಿ, ತಾಮ್ರಗಳನ್ನು ಅಲ್ಲಿ ಇಟ್ಟು ಸಂಕಲ್ಪವನ್ನು ಹೇಳಿ ಆಹ್ವಾನಾದಿ ಷೋಡಶೋಪಚಾರದಿಂದ ವಿಘ್ನೇಶ್ವರನನ್ನೂ ಮತ್ತು ವಾಸ್ತು ಮೂರ್ತಿಯನ್ನೂ ಧ್ಯಾನಿಸಿ ಪೂಜಿಸಬೇಕು. ಇದೇ ಸಮಯಕ್ಕೆ ಶಂಕು ಸ್ಥಾಪನೆ ಮಾಡಬೇಕು. ಈ ಶಂಕುಸ್ಥಾಪನೆ ವಿವರವಾದ ವಿಷಯದ ಬಗ್ಗೆ ಮುಂದೆ ಹೇಳಿದ್ದೇವೆ.

Join Our Whatsapp Group

 ವಾಸ್ತುದೇವನ ಧ್ಯಾನ

 ಪಂಚವಕ್ತ್ರಂ ಜಟಾಜೂಟಂ ತಿಥಿ ಸಂಖ್ಯಾ ವಿಲೋಚನಂ |

 ಸಂಧ್ಯಾ ಜಾತನನಂ ಶ್ವೇತಂ ವಾಮದೇವಂಚ ಕೃಷ್ಣ ಕಂ |

 ಪಿತೃವರ್ಣಂ ತತ್ಪುರುಷಮಿಶಾನಂ ಶ್ಯಾಮ ವರ್ಣಕಂ |

 ಅಘೋರಂ ರಕ್ತವರ್ಣಂಚ ಹೇಮ ವರ್ಣ ಶರೀರಿಕಂ ||

 ದಶಬಾಹುಂ ಮಹಾಕಾಯಂ ಕರ್ಣಕುಂಡಲ ಶೋಭಿತಂ||

 ಪೀತಾಂಬರಂ ಪುಷ್ಯಮಾಲಾ ನಾಗಾಯ ಜ್ಞೋಪವೀತನಂ ||

ರುದ್ರಾಕ್ಷಮಾಲಾಭರಣಂ ವ್ಯಾಘ್ರ ಚರ್ಮೋತ್ತರೀಯಕಂ |

 ಅಕ್ಷಮಾಲಾ ಪದ್ಮಯುತಂ ನಾಗಶೂಲ ಪಿನಾಕಿನಂ ||

 ಡಮರುಂ ಬಾಣವೀಣಂಚ ಶಂಕಚಕ್ರ ಕರಾನ್ವಿತಂ    ||

 ಕೋಟಿ ಸೂರ್ಯ ಪ್ರತಿಕಾಶಂ ಸರ್ವಜೀವಾ ದಯಾಪರಂ  ||

 ದೇವದೇವಂ ಮಹಾದೇವಂ ವಿಶ್ವಕರ್ಮ ಜಗದ್ಗುರುಂ |

 ಪ್ರಸನ್ನವದನಂ ಧ್ಯಾಯೇತ್ಸರ್ವ  ವಿಘ್ನೋಪಶಾಂತಯೇ  ||

     ಈ ಪ್ರಕಾರ ವಾಸ್ತುದೇವನ ಧ್ಯಾನವನ್ನು ಮಾಡಿ, ಆಹ್ವಾನಾದಿ ಷಡೋಶೋಪಚಾರದಿಂದ ಪೂಜಿಸಿ ನಮಸ್ಕರಿಸಬೇಕು.

 ನಮಸ್ಕಾರ ಮಂತ್ರ

 ವಾಸ್ತು ಮೂರ್ತಿಃ ಪರಮಜ್ಯೋತಿ ವಾಸ್ತುದೇವೋ ಪರಶ್ಯಿವಃ |

 ವಾಸ್ತು ದೇವಸ್ತು ಸರ್ವೇಷಾಂ ವಾಸುದೇವಂ ನಮಾಮ್ಯಹಂ ||

 ಶ್ರೀವಾಸ್ತು ದೇವತಾಭ್ಯೋ ನಮಃ  

    ಹೀಗೆಂದು ನಮಸ್ಕರಿಸಿ ಅಕ್ಷತಾರೋಪಣವನ್ನು ಮಾಡಿ,ಕರ್ಪೂರದಾರುತಿಗಳನ್ನು ಬೆಳಗಿ,ತೆಂಗಿನಕಾಯಿಗಳನ್ನು ಒಡೆದು, ಫಲ ನೈವೇದ್ಯಗಳನ್ನು ಸಮರ್ಪಿಸಿ ಪೂಜೆಯನ್ನು ಸಮಾಪ್ತಗೊಳಿಸಿ ಮುಂದಿನ ಕಟ್ಟಡ ಕಾರ್ಯಕ್ಕೆ ಆರಂಭಿಸಬೇಕು.