ಮನೆ ರಾಜ್ಯ ಟ್ರ್ಯಾಕ್ಟರ್ ಗೆ ಶಾಸಕನ ಕಾರು ಡಿಕ್ಕಿ: ಟ್ರ್ಯಾಕ್ಟರ್‌ ಚಾಲಕ ಸಾವು

ಟ್ರ್ಯಾಕ್ಟರ್ ಗೆ ಶಾಸಕನ ಕಾರು ಡಿಕ್ಕಿ: ಟ್ರ್ಯಾಕ್ಟರ್‌ ಚಾಲಕ ಸಾವು

0

ಕೋಲಾರ (Kolar)-ಟ್ರ್ಯಾಕ್ಟರ್ ಗೆ  ಶಾಸಕನ ಕಾರು ಡಿಕ್ಕಿಯಾಗಿ ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮುಳಬಾಗಲು ಮೂಲದ ಟ್ರಾಕ್ಟರ್ ಚಾಲಕ ಸುಬ್ರಮಣಿ (35)ಮೃತಪಟ್ಟವರು. ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಕಾಂತರಾಜ ವೃತ್ತದಲ್ಲಿ ಅಪಘಾತ ಸಂಭವಿಸಿದೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಸಿರ ಕ್ಷೇತ್ರದ ವೈಎಸ್ ಆರ್ ಕಾಂಗ್ರೆಸ್ ನ ಹಾಲಿ ಶಾಸಕ ತಿಪ್ಪೇಸ್ವಾಮಿ ಅವರ ಕಾರು ಟ್ರ್ಯಾಕ್ಟರ್ ಗೆ ಡಿಕ್ಕಿಯಾಗಿದ್ದು, ಕಾರು ಚಾಲಕನಿಗೆ ಗಾಯವಾಗಿದೆ.

ಚಾಲಕ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ಮುಳಬಾಗಲು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.