ಮನೆ ಸಾಹಿತ್ಯ ಧ್ವನಿ ಮತ್ತು ದೃಶ್ಯ

ಧ್ವನಿ ಮತ್ತು ದೃಶ್ಯ

0

     ನೀವು ಟಿ.ವಿ.ನೋಡುವಾಗ ಧ್ವನಿಯನ್ನು ಪೂರ್ತಿಯಾಗಿ ಮ್ಯೂಟ್ ಮಾಡಿಕೊಂಡು ದೃಶ್ಯಗಳನ್ನು ಮಾತ್ರ ನೋಡಿದ್ದೀರಾ? ನೋಡಿದ್ದರೆ ದೃಶ್ಯಗಳು ಹೇಗೆ ಕಾಣಿಸುತ್ತವೆ ಎಂದು ಯೋಚಿಸಿದ್ದೀರಾ? ವ್ಯಕ್ತಿಗಳ ಹಾವ ಭಾವಗಳೆಲ್ಲ ಬಹಳ ವಿಚಿತ್ರವಾಗಿ ಕಾಣಿಸುತ್ತವೆ. ಇಬ್ಬರು ವ್ಯಕ್ತಿಗಳು ಮಾತನಾಡುತ್ತಿರುವಾಗ ಅವರ ಧ್ವನಿ ಕೇಳಿದಷ್ಟು ದೂರದಲ್ಲಿ ನಿಂತುಕೊಂಡು ಅವರನ್ನೇ ನಾವು ನೋಡುತ್ತಾ ನಿಂತಾಗಲೂ ಅವರ ಹಾವ ಭಾವಗಳು ವಿಚಿತ್ರವೆಂದು ಅನಿಸುತ್ತದೆ.ಆದರೆ ಪ್ರಾಣಿಗಳು ಚಲಿಸುವುದನ್ನು ಧ್ವನಿಯನ್ನು ಮ್ಯೂಟ್ ಮಾಡಿಕೊಂಡು ನೋಡಿದಾಗಲೂ ವಿಚಿತ್ರ ರೀತಿಯಲ್ಲಿ ಕಾಣಿಸುವುದಿಲ್ಲ.ಯಾಕೆಂದರೆ ಪ್ರಾಣಿಗಳ ವರ್ತನೆಗಳಿಗೆ ಮಾತಿನ ಹಿನ್ನೆಲೆ ಅನಿವಾರ್ಯವಲ್ಲ.ಆದರೆ ಮನುಷ್ಯರಲ್ಲಿ ಮಾತಿಲ್ಲದ ವರ್ತನೆಗಳು ಅಭ್ಯಾಸಕಾರಿಯಾಗಿ ಕಾಣಿಸುತ್ತವೆ.

Join Our Whatsapp Group

      ಇದೇ ರೀತಿ ಇನ್ನೊಂದು ಸಂಗತಿಯನ್ನು ಗಮನಿಸಿ. ಒಂದು ಸುಂದರವಾದ ನೃತ್ಯವನ್ನು ನೀವು ನೋಡಿದ್ದೀರಿ ಎಂದು ಭಾವಿಸಿ.ನೃತ್ಯದ ಜೊತೆಯಲ್ಲಿ ಸಂಗೀತ ಇದ್ದೇ ಇರುತ್ತದೆ. ಆದರೆ ನೃತ್ಯ ವೀಕ್ಷಣೆ ಮಾಡುವಾಗ ನಾವು ಪ್ರಧಾನವಾಗಿ ಗಮನಿಸುವುದು ನೃತ್ಯವನ್ನೊ? ಸಂಗೀತವನ್ನೋ?ಸಂಗೀತವನ್ನೇ ಗಮನಿಸಬೇಕೆಂದು ಯೋಚನೆ ಮಾಡಿಕೊಳ್ಳದೆ ಇದ್ದರೆ ಸ್ವಾಭಾವಿಕವಾಗಿ ಗಮನಿಸುವುದು ನೃತ್ಯವನ್ನೇ. ಯಾಕೆಂದರೆ ದೃಶ್ಯಕ್ಕೆ ನಮ್ಮ ಮನಸ್ಸು ಧ್ವನಿಗಿಂತ ಬೇಗನೆ ಆಕರ್ಷಿಸಲ್ಪಡುತ್ತದೆ.ಸಣ್ಣ ತರಗತಿಯ ಮಕ್ಕಳ ಪುಸ್ತಕದಲ್ಲಿ ಹೆಚ್ಚು ಹೆಚ್ಚು ಗಳನ್ನು ಚಿತ್ರಗಳನ್ನು ಹಾಕಿರುವುದರಿಂದ ಉದ್ದೇಶ ಇದೇ ಆಗಿರುತ್ತದೆ.

     ದೃಶ್ಯಕ್ಕೆ ನಮ್ಮ ಮನಸ್ಸು ಬಹುಬೇಗ ಆಕರ್ಷಿತವಾಗುತ್ತದೆ ಎನ್ನುವುದು ನಿಜ.ಆದರೆ ಜ್ಞಾನವನ್ನು ಗಳಿಸಿಕೊಳ್ಳಲು ದೃಶ್ಯಕ್ಕಿಂತದ ಧ್ವನಿ,ಧ್ವನಿಗಿಂತ ಬರೆ ಹವು ಹೆಚ್ಚು ಸಶಕ್ತವಾಗಿರುತ್ತವೆ, ಯಾಕೆಂದರೆ ದೃಶ್ಯದ ಮೂಲಕ ಅರ್ಥ ಮಾಡಿಕೊಳ್ಳುವಾಗ ಕಣ್ಣಿಗೆ ಕಂಡದ್ದು ಮಾತ್ರ ಅರ್ಥವಾಗುತ್ತದೆ.ಮತ್ತು ಅದು ಮನಸ್ಸಿನಲ್ಲಿ ಅಚ್ಚಳಿಯದೆ ನಿಂತುಬಿಡುತ್ತದೆ. ಉದಾಹರಣೆಗೆ ಕೃಷ್ಣದೇವರಾಯನ ಸಿನಿಮಾ ಬಂದ ನಂತರ ಕೃಷ್ಣದೇವರಾಯನ ಎಂದ ತಕ್ಷಣ ಸಿನಿಮಾದಲ್ಲಿ ಅಭಿನಯಿಸಿದ ರಾಜ್ ಕುಮಾರ ಅವರಂಥ ಸ್ಛುರದ್ರೂಪಿ ವ್ಯಕ್ತಿಯೇ ಕಲ್ಪನೆಗೆ ಬರುತ್ತಾರೆ. ಆದರೆ ಸ್ವಂತ ಕಷ್ಟದೇವರಾಯನನ್ನು ಭೇಟಿಯಾಗಿದ್ದ ಡೊಮಿಂಗೋ ಪೇಸ್ ಬರೆದಿರುವ ಪ್ರಕಾರ ಕೃಷ್ಣದೇವರಾಯನು ಕುರೂಪಿಯಾಗಿದ್ದ. ಹಾಗೆಂದು ಒಬ್ಬ ಕುರೂಪಿಯನ್ನು ಕರೆತಂದು ಕೃಷ್ಣದೇವರಾಯನ ಪಾತ್ರ ಮಾಡಿಸಿದರೆ ಸಿನಿಮಾ ಆಕರ್ಷಣೆಯನ್ನು ಕಳೆದುಕೊಳ್ಳುತ್ತದೆ.ಜನರು ಸಿನಿಮಾ ನೋಡುವುದಿಲ್ಲ. ಇದು ದೃಶ್ಯ ಮಾಧ್ಯಮಕ್ಕೆ ಇರುವ ಮಿತಿಯಾಗಿದೆ.ಆದರೆ ಧ್ವನಿಯ ಮೂಲಕ ಜ್ಞಾನವನ್ನು ಪಡೆಯುವಾಗ ಈ ಸಮಸ್ಯೆ ಇರುವುದಿಲ್ಲ.ದೃಶ್ಯದಲ್ಲಿ ಹೇಳಲು ಆಗಿದ್ದನ್ನು ಧ್ವನಿಯು ಹೇಳುತ್ತದೆ.ಆದ್ದರಿಂದ ಜ್ಞಾನದ ಗಳಿಕೆಗೆ ಟಿ.ವಿ. ಗಿಂತ ರೇಡಿಯೋ ಹೆಚ್ಚು ಉಪಯುಕ್ತವಾಗಿದೆ.