ಮನೆ ಮನೆ ಮದ್ದು ಪ್ರಕೃತಿಯ ಚಿಕಿತ್ಸೆಗಳು

ಪ್ರಕೃತಿಯ ಚಿಕಿತ್ಸೆಗಳು

0

 ಹಬೆ ಸ್ನಾನ :

1. ಕುದಿಯುವ ನೀರಿನಿಂದ ಹೊರಬರುವ ಹಬೆಯಲ್ಲಿ ಕೂತಿರುವುದನ್ನು ಹಬೆ ಸ್ನಾನವೆನ್ನುತ್ತಾರೆ.ಬೊಜ್ಜು ಕರಗಿಸಿಕೊಳ್ಳಲು ವಾತರೋಗವನ್ನು ಹತೋಟಿಯಲ್ಲಿಡಲು ಈ ಚಿಕಿತ್ಸೆ ಮಾಡುತ್ತಾರೆ.

Join Our Whatsapp Group

2. ಬಿಸಿನೀರಿನಲ್ಲಿ ಮುಳುಗಿ ಅರ್ಧಗಂಟೆ ಕೂತಿದ್ದರೆ ಮೂತ್ರಕೋಶದ ತೊಂದರೆಯಾಗಿ ಬಾಧೆ ಪಡುವವರಿಗೆ ಸಾಂತ್ವನ ಸಿಗುತ್ತದೆ. ವಾತರೋಗದವರಿಗೂ ಅತಿ ಬೊಜ್ಜಿನವರಿಗೂ ಉತ್ತಮ ಚಿಕಿತ್ಸೆ ಆಗಿದೆ.ಪ್ರತಿದಿನವೂ ತಲೆಗೆ ತಣ್ಣೀರು ಸ್ಥಾನ ಮಾಡುವುದರಿಂದ ತಲೆ ಹೊಟ್ಟು ಏಳುವುದಿಲ್ಲ ಮತ್ತು ಕೂದಲು ಉದುರಿರುವುದಿಲ್ಲ.

3. ಮಕ್ಕಳಲ್ಲಿ ಭೇದಿಯಾಗಿ ದೇಹದ ನೀರಿನ ಅಂಶ ಕಡಿಮೆಯಾಗುತ್ತದೆ.ಆಗ ಒಂದು ಲೋಟ ಕಾಯಿಸಿ ಆರಿಸಿದ ನೀರಿಗೆ ಒಂದು ಚಮಚ ಸಕ್ಕರೆ ಒಂದು ಚಿಟಿಕೆ ಉಪ್ಪು ಒಂದು ಚಿಟಿಕೆ ಅಡಿಗೆ ಸೋಡಾ ಬೆರೆಸಿ ಒಂದೊಂದು ಚಮಚ ಕುಡಿಸುತ್ತಿರಬೇಕು.

4. ಯಾವ ಅಂಗಭಾಗಕ್ಕಾಗಲೀ  ಏಟು ಬಿದ್ದಾಗ ಅಲ್ಲಿಗೆ ತಣ್ಣೀರು ಬಟ್ಟೆ ಕಟ್ಟುವುದರಿಂದ ನೋವು ಉತ ಶಮನವಾಗುವುದು.

5. ಮೂಗಿನಿಂದ ರಕ್ತಸುರಿಯುತ್ತಿದ್ದರೆ ಐಸ್ ಅಥವಾ ತಣ್ಣೀರಿನಲ್ಲಿ ನೆನೆಸಿದ ಬಟ್ಟೆಯನ್ನು ಮೂಗಿನ ಮೇಲಿಟ್ಟು ನೀರು ಸುರಿಯುತ್ತಿದ್ದರೆ ರಕ್ತಸ್ರಾವ ನಿಲ್ಲುವುದು.

6. ಮಲಬದ್ಧತೆಯಿಂದ ನರಳುವವರು ಪ್ರತಿದಿನ ರಾತ್ರಿ ಮಲಗುವ ಮುಂಚೆ ಒಂದು ಬಟ್ಟಲು ಬಿಸಿನೀರು ಮತ್ತು ಬೆಳಿಗ್ಗೆ ಹಾಸಿಗೆಯಿಂದ ಎದ್ದಂತರ ಒಂದು ಬಟ್ಟಲು ಬಿಸಿನೀರು ಸೇವಿಸಲು ಸುಖವಾಗಿ ಮಲವಿಸರ್ಜನೆ ಆಗುವುದು.

7. ಉರಿ ಮೂತ್ರದಿಂದ ನರಳುವವರು ಹೆಚ್ಚು ಹೆಚ್ಚು ನೀರುಕುಡಿಯುವುದರಿಂದ ಗಮನಾರ್ಹ ಉರಿ ಕಡಿಮೆಯಾಗುವುದು.

8. ಬಾಧೆಗೊಳಗಾದ  ಭಾಗದ ಮೇಲೆ ಶೀತಲ ನೀರಿನಲ್ಲಿ ಅದ್ದಿದ ಬಟ್ಟೆಯನ್ನು ಕಟ್ಟುವುದರಿಂದ ರಕ್ತ ಸಂಚಾರಕ್ಕೆ ಇದ್ದ ಅಡಚಣೆಯು ನಿವಾರಣೆಯಾಗಿ ನೋವು ಪರಿಹಾರವಾಗುವುದು.