ಮನೆ ರಾಜಕೀಯ ಗಣರಾಜ್ಯೋತ್ಸವಕ್ಕೆ ವಿದೇಶದ ಮುಖ್ಯ ಅತಿಥಿಗಳಿಗಿಲ್ಲ ಆಹ್ವಾನ

ಗಣರಾಜ್ಯೋತ್ಸವಕ್ಕೆ ವಿದೇಶದ ಮುಖ್ಯ ಅತಿಥಿಗಳಿಗಿಲ್ಲ ಆಹ್ವಾನ

0

ನವದೆಹಲಿ: ಗಣರಾಜ್ಯೋತ್ಸವಕ್ಕೆ ಈ ಬಾರಿ ಗಣ್ಯ ಅತಿಥಿಗಳಾಗಿ ಯಾವುದೇ ವಿದೇಶಿ ಸರ್ಕಾರದ ಮುಖ್ಯಸ್ಥರೂ ಆಗಮಿಸುತ್ತಿಲ್ಲ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ.
ಕೋವಿಡ್-೧೯ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಗಣರಾಜ್ಯೋತ್ಸವ ದಿನಾಚರಣೆಗೆ ವಿದೇಶಿ ಸರ್ಕಾರದ ಗಣ್ಯರನ್ನು ಅತಿಥಿಗಳನ್ನಾಗಿ ಆಹ್ವಾನಿಸುತ್ತಿಲ್ಲ.
ಈ ಬಾರಿಯ ಗಣರಾಜ್ಯೋತ್ಸವ ದಿನಾಚರಣೆಯ ಬಳಿಕ ಜ.೨೭ ರಂದು ಪ್ರಧಾನಿ ನರೇಂದ್ರ ಮೋದಿ ಭಾರತ-ಕೇಂದ್ರ ಏಷ್ಯಾ ವರ್ಚು್ಯಯಲ್ ಶೃಂಗಸಭೆಯನ್ನು ಆಯೋಜಿಸಲಿದ್ದಾರೆ.
ಶೃಂಗಸಭೆಯಲ್ಲಿ ಕಝಕಸ್ತಾನ್, ಕಿರ್ಗಿಜ್ ಗಣರಾಜ್ಯ, ತಜಕಿಸ್ತಾನ, ತುರ್ಮೇನಿಸ್ತಾನ ಹಾಗೂ ಉಜ್ಬೇಕಿಸ್ತಾನಗಳ ಸರ್ಕಾರದ ಮುಖ್ಯಸ್ಥರು ಭಾಗಿಯಾಗಲಿದ್ದಾರೆ.

ಹಿಂದಿನ ಲೇಖನಅಪರಿಚಿತ ವಾಹನ ಡಿಕ್ಕಿ: ಜಿಂಕೆ ಸಾವು
ಮುಂದಿನ ಲೇಖನಕೊರೊನಾ: ದೇಶದಲ್ಲಿಂದು 3.17 ಲಕ್ಷಕ್ಕೆ ಸೋಂಕಿತರ ಸಂಖ್ಯೆ ಏರಿಕೆ