ಮನೆ ಜ್ಯೋತಿಷ್ಯ ಗೃಹಾರಂಭಕ್ಕೆ ಶುಭ ನಕ್ಷತ್ರಗಳು

ಗೃಹಾರಂಭಕ್ಕೆ ಶುಭ ನಕ್ಷತ್ರಗಳು

0

 ಶ್ಲೋಕ :

 ತ್ರ್ಯುತ್ತರಾ ಮೃಗರೋಹಿಣ್ಯಾಂ ಪುಷ್ಯ ಮೈತ್ರಿಕರತ್ರಯೋ|

 ಧನಿಷ್ಠಾ ದ್ವಿತಯೇ ಪೌಷ್ಣೇ ಗೃಹಾರಂಭಃ ಪ್ರಶಸ್ತತೇ||

 ಅರ್ಥ: ಉತ್ತರ, ಉತ್ತರಾಷಾಢ ಉತ್ತರಾಭಾದ್ರ,ಮೃಗಶಿರ,ರೋಹಿಣಿ, ಪುಷ್ಯ ಅನುರಾಧ, ಹಸ್ತ, ಚಿತ್ತಾ, ಸ್ವಾತಿ, ದನಿಷ್ಟಾ, ಶತತಾರ ಮತ್ತು ರೇವತಿ ಈ 13 ನಕ್ಷತ್ರಗಳು ಮನೆಯ ಕಟ್ಟಡದ ಕಾರ್ಯ ಪ್ರಾರಂಭಕ್ಕೆ ಅತ್ಯುತ್ತಮ ಶುಭ ಮುಹೂರ್ತಗಳಾಗಿವೆ. ಈ ಶುಭ ನಕ್ಷತ್ರಗಳಲ್ಲಿ ಮನೆಯ ಯಾವುದೇ ಕಾರ್ಯರಂಭ ಮಾಡಿದರೆ ಸರ್ವ ರೀತಿಯಿಂದ ಶುಭಫಲವಾಗುವದೆಂದು ಧರ್ಮಸಿಂಧು ಮತ್ತು ಮುಹೂರ್ತ ಮಾರ್ತಾಂಡದಲ್ಲಿ ಉಲ್ಲೇಖವಿದೆ.ಈ ನಕ್ಷತ್ರಗಳಲ್ಲಿ ಶುಭಯೋಗವಿದ್ದರಂತೂ ಇನ್ನು ಉತ್ತಮ.

 ನೂತನ ಗೃಹ ನಿರ್ಮಾಣ ಸಮಯಕ್ಕೆ ಅವಶ್ಯಕವಾದ ಮುಖ್ಯ ವಿಚಾರಗಳು :

 ವಾಸ್ತು ಪುರುಷನ ಸ್ತುತಿ ಮತ್ತು ಪೂಜಾ ವಿಧಾನ :

     ಇದುವರೆಗೆ, ನಾವು ಹೊಸ ಮನೆ ಕಟ್ಟಿಸಲು ಪ್ರಾರಂಭ ಕಾಲಕ್ಕೆ ಬೇಕಾಗುವ ತಿಂಗಳು ವಾರ,ತಿಥಿ, ನಕ್ಷತ್ರಗಳ ಬಗ್ಗೆ ಮಾತ್ರ ತಿಳಿಸಿದಂತಾಯಿತು.ಆದರೆ ಮನೆ ಕಟ್ಟಲು ಪ್ರಾರಂಭಿಸುವದಕ್ಕೆ ಮೊದಲು ಮುಖ್ಯವಾಗಿ ನಾವು ಮನೆ ಕಟ್ಟಿಸುವ ಜಾಗದಲ್ಲಿ ಪರಿಶೋಧನೆ ಒಟ್ಟು ಜಾಗದ ಉದ್ದ ಅಗಲ ಮೊಳ ಅಥವಾ ಪೂಟು  ಇದೆ ಅದು ಯಾವ ಆಯವಾಗುತ್ತದೆ ಧನ ಋಣ ಸಂಖ್ಯೆ ಆಯುಷ್ ಸಂಖ್ಯೆ ಇತ್ಯಾದಿ ಏಕಾದಶ ವರ್ಗಗಳನ್ನೂ ನಿರ್ಮಾಣವನ್ನು ತಿಳಿದುಕೊಳ್ಳಬೇಕಾಗುವದು ಮುಖ್ಯವಾದದು.

      ಸರ್ವಜನರಿಗೂ ವಾಸ ಮಾಡುವುದಕ್ಕೆ ಒಳ್ಳೆಯ ಮನೆಯೇ ಮುಖ್ಯವಾದುದಾಗಿದೆ ಇಂತಹ ಮನೆಯನ್ನು ಏನೊಂದೂ ಶೋಧನೆ, ಪರೀಕ್ಷೆ ಇಲ್ಲದಲೇ ಕಟ್ಟಿಸಿದರೆ ಮನೆ ಕಟ್ಟಿಸಿದವರಿಗೂ ಅಲ್ಲಿ ವಾಸಮಾಡತಕ್ಕವರೆಲ್ಲರೂ ಅನೇಕ ಕಷ್ಟ, ನಷ್ಟ, ಅರಿಷ್ಟ ವ್ಯಸನ, ದುಃಖಗಳಿಗೆ ಎರವಾಗಬೇಕಾಗುವದು ಆದ್ದರಿಂದ ಮೊದಲು ನಾವು ಆ ಜಾಗೆಯ ಶೋಧನೆಯನ್ನು ಮಾಡಬೇಕು. ನಂತರ ಜಾಗದ ಅಳತೆಯಿಂದ ಅಯವನ್ನೂ  ಧನ ಋಣ ಆಯುಷ್ಯ ಮುಂತಾದ ಏಕಾದಶಿ 11 ಮಾರ್ಗಗಳನ್ನು ನಿರ್ಣಯಸಿಕೊಂಡು ಶುಭ ವರ್ಗಗಳಲ್ಲಿಯೇ ಮನೆಯನ್ನು ಕಟ್ಟಿಸಿಕೊಳ್ಳತಕ್ಕದ್ದು.ಇದಕ್ಕಾಗಿ ಈ ಮುಂದೆ ಏಕಾದಶ 11 ವರ್ಗಗಳನ್ನು ಗುಣಿಸುವ ಪದ್ದತಿಯುನ್ನೂ ಸುಲಭ ರೀತಿಯಲ್ಲಿ ಬರೆದಿರುವುದಲ್ಲದೆ ಫಲಾಫಲಗಳನ್ನೂ ತಿಳಿಸಿದೆ. ಅದರಂತೆ ಎಲ್ಲರೂ ಗಣಿತವನ್ನು ಮಾಡಿಕೊಂಡು ಶುಭಾ ಶುಭ ಫಲಗಳನ್ನು ತಿಳಿದುಕೊಂಡು ಉತ್ತಮ ಆಯಗಳಲ್ಲಿಯೇ ಮನೆಯನ್ನು ಸಂಪೂರ್ಣ ಸುಖ ಶಾಂತಿ ನೆಮ್ಮದಿ ಸಂತಾನಾಭಿವೃದ್ಧಿ ಸರ್ವ ಸೌಖ್ಯಗಳಿಂದ ಇರಬೇಕಾದುದು ಮುಖ್ಯವು.

 ವಿಶೇಷ ಸೂಚನೆ :

        ಥರ ಹಾಕುವ ಜಾಗೆಯನ್ನು ನಿರ್ಣಯಿಸಿ, ಆ ಜಾಗಯಲ್ಲಿ ಪಂಚಾಮೃತವನ್ನು ಹಾಕಿ ಶುದ್ದೋದಕದಿಂದ ಶುದ್ಧೀಕರಿಸಿ ಅಲ್ಲಿ ಪಂಚ ರತ್ನಗಳನ್ನು ಹಾಕಿ ಪೂಜೋಪಚಾರದಿಂದ ಸಂಕ್ಷಿಪ್ತವಾಗಿ ಪೂಜಿಸಬೇಕು. ಈ ಸಮಯದಲ್ಲಿ ಗೋಡೆ ಕಟ್ಟಲಿಕ್ಕೆ ಬೇಕಾಗುವ ಎಲ್ಲಾ ಸಾಮಾನುಗಳೂ ಮೊಗ್ಗುಲಲ್ಲಿರಬೇಕು. ಇವುಗಳನ್ನು ಶುದ್ಧೋದಕ ಜಲದಿಂದ ಸಂಪ್ರೋಕ್ಷಿಸಿ ಪೂಜಿಸಬೇಕು.ನಂತರ, ಶುಭ ಮುಹೂರ್ತಕ್ಕೆ ಸರಿಯಾಗಿ ಗಜ್ಜು ಹಾರಿ ಐದು ಕಲ್ಲುಗಳನ್ನು ಯೋಗ್ಯದಿಂದ ಇಡಿಸಿ ಗೋಡೆ ಕಟ್ಟಿಸಬೇಕು. ಇದಕ್ಕೆಯೇ ಬುನಾದಿ,ಥರ ಪಾಯ ಅಡಿಗಲ್ಲು ಸ್ಥಾಪನೆ ಹೀಗೆಂದು ಹೇಳುವರು.