ಮನೆ ಜ್ಯೋತಿಷ್ಯ ವೈದ್ಯಕೀಯ ಜ್ಯೋತಿಷ್ಯ

ವೈದ್ಯಕೀಯ ಜ್ಯೋತಿಷ್ಯ

0

 ಉದಾಹರಣೆಗೆ ಜಾತಕ : 4— 22-1-1947, 5-20 ಪಿಎಂ

Join Our Whatsapp Group

      ಇದು ಪುರುಷ ಜಾತಕ 1991ರ ಕೊನೆಯ ಭಾಗದಲ್ಲಿ ಇವರಿಗೆ ಟೈಪಾಯಿಡ್ ಜ್ವರ ಕಾಣಿಸಿಕೊಂಡು ಆಗ ಆಸ್ಪತ್ರೆಯಲ್ಲಿ ಸೇರಿದರು ಅಲ್ಲಿ ಇವರ ಜ್ವರ ತಗ್ಗಿಸಲು ವೈದ್ಯರು ಪ್ರತಿ ಆರು ಗಂಟೆಗಳಿಗೊಂದಾವರ್ತಿ ಸಾವಿರ ಎಂ.ಜಿ ಆೄಂಟಿಬಯೋಟಿಕ್ ಮಾತ್ರೆ ನೀಡಿದರು. ಹೆಚ್ಚು ಔಷಧಿಯ ಪರಿಣಾಮ ಮೂತ್ರಪಿಂಡ ವಿಫಲವಾಯಿತು. ಇವರಿಗೆ  ಇವರಿಗೆ ಜನವರಿ 92 ರಲ್ಲಿ ತಿಳಿಯಿತು.ಅವರು ಡಯಾಲಿಸಿಗೆ ಶರಣು ಹೋದರು.

    92 ಜೂಲೈನಲ್ಲಿ ವೆಲ್ಲೂರಿನಲ್ಲಿ 40,000 ರೂಗೆ ಮೂತ್ರಪಿಂಡ ಧಾನ ಪಡೆದರು. ಅನಂತರ ಆರೋಗ್ಯವಾದರು. ಆದರೆ ಮತ್ತೆ 1998ರಲ್ಲಿ ಇವರಿಗೆ ಶ್ವಾಸಕೋಶ ಸೋಂಕು ಜಾಡ್ಯವಾಗಿ ಮತ್ತೆ 8 ತಿಂಗಳು ಔಷಧೋಪಚಾರ ಪಡೆದರು.ಆದರೆ ಆಗ ಸಹ ಆೄಂಟಿಬಯೋಟಿಕ್ ಔಷದ ದಿಂದ ಮತ್ತೆ ಮೂತ್ರಪಿಂಡ ವಿಫಲವಾಯಿತು.ಆಗ ಮತ್ತೆ ವಾರಕ್ಕೆ ಮೂರು ದಿನ ಡಯಾಲಿಸಸ್ ಮಾಡಿಸಿ ಕೊಂಡರು. ಆದರೆ ಒಂದು ವರ್ಷದಲ್ಲಿ ಮರಣಿಸಿದರು.

      ಈ ಜಾತಕದಲ್ಲಿ ಮಕರ ರಾಶಿಯು ಮೂತ್ರಪಿಂಡವಾಗಿ ಲಗ್ನದಿಂದ ಅಷ್ಟಮ ರಾಶಿಯಾಗಿ ರಾಹು, ಕುಜ,ಸೂರ್ಯ ಮತ್ತು ವಕ್ರ ಶನಿಯಿಂದ ಪೀಡಿತ ಗುರು ಬಾಧಕ ಮಾರಕ,  ಕೇಂದ್ರಾಧಿಪತಿ ದೋಷ ಯುಕ್ತನಾಗಿ ಶುಕ್ರನನು ಪೀಡಿಸುವುದರಿಂದ ಮೊದಲು ಗುರುದಶೆ ಶುಕ್ರಭುಕ್ತಿಯಲ್ಲಿ ಅನಂತರ ಶನಿದಶೆ ಶನಿಭುಕ್ತಿಯಲ್ಲಿ ಮೂತ್ರಕೋಶ ವಿಫಲವಾಗಿದೆ.

     ಮೂರನೇ ಸ್ಥಾನದ ಔಷಧಿ ಅಲರ್ಜಿ ಸ್ಥಾನ  ಸೂರ್ಯ ಮೂರನೇ ಅಧಿಪತಿಯಾಗಿ ಪೀಡಿತನಾಗಿರುವುದರಿಂದ ಔಷಧಿ ಅಲರ್ಜಿಯಾಗಿದೆ.

 ಉದಾಹರಣೆಗೆ ಜಾತಕ  16-6-1971, 10-40 ಪಿಎಂ

      ಇದು ಪುರುಷಜಾತಕವಾಗಿ 1996ರಲ್ಲಿ ಬುಧದಶೆ ಶನಿ ಭುಕ್ತಿಯಲ್ಲಿ ಮೂತ್ರಪಿಂಡ ವಿಫಲವಾಗಿತ್ತು ಚಿಕ್ಕಮ್ಮನಿಂದ ಒಂದು ಮೂತ್ರಪಿಂಡ ದಾನವಾಗಿ ಪಡೆದರು.ಈಗ 2000 ರಲ್ಲಿ ಜ್ವರ ಕಾಣಿಸಿಕೊಂಡಿತು.ನಾನು ಅವರ ವ್ಯಾಧಿ ತಿಳಿದು ಮೂತ್ರಪಿಂಡ ವಿಫಲವಾಗುವುದಕ್ಕೆ ಮೊದಲು ಸಾಮಾನ್ಯವಾಗಿ ಜ್ವರ ಕಾಣಿಸಿಕೊಳ್ಳುತ್ತದೆ ಆದ್ದರಿಂದ ನಾನು ಜ್ವರ ಮತ್ತು ಮೂತ್ರಪಿಂಡ ಆಕಾರ ಗ್ರಹ ಗುರುವಿಗೆ ಕಡಲೆಕಾಳು ಧಾನ ಮಾಡಲು ತಿಳಿಸಿದೆ ಅದರಂತೆ ಅವರು ಪರಿಹಾರ ಮಾಡಿ,ನಾಲ್ಕು ವಾರಗಳಲ್ಲಿ ಜ್ವರ ಕಡಿಮೆಯಾಯಿತು.  ಇವರ ಜಾತಕದಲ್ಲಿ ಶನಿಯು ಭಾವದಲ್ಲಿ ಮೇಷಕ್ಕೆ ಬರುತ್ತಾನೆ, ಗುರು ಭಾವದ ಪ್ರಕಾರ ತುಲಾ ರಾಶಿಗೆ ಬರುತ್ತಾನೆ.ಆದ್ದರಿಂದ ಶನಿಯು ದೃಷ್ಟಿಯು ಮಕರದಲ್ಲಿರುವ ರಾಹು,ಕುಜ ಮೇಲೆ ಮಕರರಾಶಿ ಪೀಡಿತವಾದರೆ ಮೂತ್ರಕೋಶ ತೊಂದರೆ.ಗುರು ಸಹ ವಕ್ರಿಯಾಗಿ ಭಾವದಲ್ಲಿ ತುಲಾದಲ್ಲಿ ಇರುವುದರಿಂದ ಮೂತ್ರಕೋಶ ಸ್ನಾನವಾಗಿ ಬುಧದಶೆ ಶನಿಭುಕ್ತಿಯಲ್ಲಿ ವಿಫಲವಾಗಿದೆ. ಮತ್ತೆ ಕೇತು ದಶೆ ಕುಜಭುಕ್ತಿಯಲ್ಲಿ ಜ್ವರ ಕಾಣಿಸಿಕೊಂಡಿದೆ.