ಮನೆ ಯೋಗಾಸನ ದ್ವಿಪಾದ ವಿಪರೀತ ದಂಡಾಸನ

ದ್ವಿಪಾದ ವಿಪರೀತ ದಂಡಾಸನ

0

   ‘ ದ್ವಿಪಾದ’ವೆಂದರೆ ಎರಡು ಪಾದಗಳು ‘ವಿಪರೀತ’= ಪ್ರತಿ ಲೋಮ, ವಿರುದ್ಧ ದಿಕ್ಕು, ತಲೆಕೆಳಗು ‘ದಂಡ’= ಕೋಲು. ರಾಜದಂಡ= ಶಿಕ್ಷೆ ಮಾಡುವ ಅಧಿಕಾರಸೂಚಕ ಚಿನ್ಹೆ ದೇಹವನನ್ನು ಉದ್ದಕ್ಕೂ ಅಡ್ಡ ಬೀಳಿಸುವುದು ದಂಡಪ್ರಾಣಾಮಾಮ. ಹಿಂದೂ ಜನಾಂಗದ ಭಕ್ತನು ತನ್ನಿಷ್ಟದೈವದ ಮುಂಗಡೆಗೆ ನೆಲದ ಮೇಲೆ ಉದ್ದಕ್ಕೂ ಅಡ್ಡಬೀಳುವ ವಾಡಿಕೆ ಯುಂಟು. ಇದರಲ್ಲಿ ಮುಖವನ್ನು ಕೆಳಮಾಡಿ,ಕಾಲುಗಳನ್ನೂ ಕೈಗಳನ್ನೂ ನೀಳವಾಗಿಸುವುದು ಅಷ್ಟಾಂಗಪ್ರಣಾಮ. ಅದರ ವಿವರಣೆ ಹೀಗಿದೆ.

Join Our Whatsapp Group

 *ಉರಸಾ ಶಿರಸಾ, ದೃಷ್ಪ್ಯಾ ಮನಾಸ ಶ್ರದ್ಧಯಾಪಿ ವಾ |

 ಪದ್ಭ್ಯಾಂ ಕರಾಭ್ಯಾಂ ಕರ್ಣಾಭ್ಯಾಂ ಪ್ರಣಾಮೋಷ್ಟಾಂಗ ಉಚ್ಯತೇ||

     ಎಂದರೆ,ಎದೆ, ತಲೆ,ದೃಷ್ಟಿ ಮನಸ್ಸು ಶ್ರದ್ಧಾಭಾವ,ಎರಡು ಕೈಗಳು ಎರಡೂ ಕಾಲುಗಳು ಮತ್ತು ಎರಡು ಕಿವಿಗಳು ಈ ಎಂಟು ಅಷ್ಟಾಂಗಗಳೆಸಿವೆ.ಇವುಗಳನ್ನೊಡ  ಗೂಡಿಸಿ ಅಡ್ಡಬೀಳುವ ಭಂಗಿಗೆ ಅಷ್ಟಾಂಗ ಪ್ರಾಣವೆಂದು ಹೆಸರು.ಆದರೆ ಯೋಗಿಯಾದವನು ಈ ಮುಂದೆ ವಿವರಿಸಿರುವ ಕ್ರಮದಲ್ಲಿ ರನ್ಯವಾದ ಪ್ರಲೋಮಭಂಗಿಗಳ ಮೂಲಕ ತನ್ನ ಪ್ರಣಾಮವನ್ನು ಸಲ್ಲಿಸಿದ್ದಾನೆ.

ಅಭ್ಯಾಸ ಕ್ರಮ

1. ಮೊದಲು ನೆಲದಮೇಲೆ ಬೆನ್ನನ್ನಿಟ್ಟು ಚಪ್ಪಟೆಯಾಗಿ ಮಲಗಬೇಕು.

2. ಬಳಿಕ,ತೋಳುಗಳನ್ನು ತಲೆಯ ಮೇಲ್ಗಡೆಗೆ ತಂದು,ಮೊಣಕೈಗಳನ್ನು ಬಾಗಿಸಿ,ಅಂಗೈಗಳನ್ನು ಭುಜಗಳ ಕೆಳಗೆ ಸೇರಿಸಿ, ಕೈ ಬೆರಳುಗಳ ತುದಿಗಳನ್ನು ಕಾಲುಗಳಲ್ಲಿರುವ ದಿಸೆಗೆ ತಿರುಗಿಸಬೇಕು ಅಲ್ಲದೆ ಮಂಡಿಗಳನ್ನು, ಅಲ್ಲದೆ ಮಂಡಿಗಳನ್ನು  ಬಗ್ಗಿಸಿ ಮೇಲೆತ್ತಿ ಪಾದಗಳನ್ನು ಟೊಂಕಗಳ ಬಳಿ ತಂದು ಅವನ್ನು ನೆಲದಮೇಲೆ ಒರಗಿಸಿರಬೇಕು.

3. ಆಮೇಲೆ ಉಸಿರನ್ನು ಹೊರಬಿಡುತ್ತ ಜೊತೆಯಲ್ಲಿಯೇ ತಲೆ ಮುಂಡಗಳನ್ನು ಮೇಲೆತ್ತಿ, ನಡುನೆತ್ತಿಯನ್ನು ನೆಲದ ಮೇಲೆ ಒರಗಿಸಿರಬೇಕು. ಆ ಬಳಿಕ ಕೆಲವು ಸಲ ಉಸಿರಾಟ ನಡೆಸಬೇಕು

4. ಮತ್ತೆ ಉಸಿರನ್ನು ಹೊರಕ್ಕೆ ಬಿಟ್ಟು ಕಾಲುಗಳನ್ನು ನೀಳವಾಗಿ ಹಿಗ್ಗಿಸಿ ತಲೆ, ಕತ್ತಿನ ಭಾಗಗಳಿಗೆ ಹೊರಿಸಬೇಕು.

5. ಆ ಬಳಿಕ, ಎಡಗೈಯನ್ನು ನೆಲದಿಂದ ಮೇಲೆತ್ತಿ ಅದನ್ನು ತಲೆಯ ಹಿಂಬದಿಗೆ ಸೇರಿಸಿ, ಮೊಣಕೈಯನ್ನು ನೆಲದ ಮೇಲೆ ಊರಿಡಬೇಕು ಆಮೇಲೆ ಎರಡು ಸಲ ಉಸಿರಾಟ ನಡೆಸಬೇಕು.

6. ಈಗ ಬಲಗೈಯನ್ನು ಅದರ ಸ್ಥಾನದಿಂದ ತೆಗೆದು, ಮೊಣಕೈಯನ್ನು ನೆಲದ ಮೇಲೆರಿಸಿ, ಕೈಗಳನ್ನು ತಲೆಯ ಹಿಂಬದಿಗೆ ಸರಿಸಿ, ಎರಡೂ ಕೈಗಳ ಬೆರಳುಗಳನ್ನು ಹೆಣೆದು, ಕೈ ಬಟ್ಟಲನ್ನು ತಲೆಯ ಹಿಂಬದಿಗೆ ಸೇರಿಸಬೇಕು. ಇದು ಭಂಗಿಯ ಕೊನೆಯ ಹಂತ ಇದರಲ್ಲಿ ತಲೆ ಕಾಲುಗಳು ಸಲಾಂಬಶೀರ್ಷಾಸನ ಭಂಗಿಯಲ್ಲಿದ್ದಂತೆ ಇರುವುವು. 7.  ಇದರಲ್ಲಿ,ಎದೆ ಹೊಟ್ಟೆಗಳ ನಡುವೆ ಇರುವ ವಪೆಯೆಂಬ ಪೊರೆಯು ಸಂಕೋಚನ ಸ್ಥಿತಿಯನ್ನು ಹೊಂದುವುದರಿಂದ ಉಸಿರಾಟ ವೇಗವಾಗಿಯೂ ಮೋಟುಕಾಗಿಯೂ ಆಗುವುದು. ಬಳಿಕ,ಕೆಲವು ಸಾರಿ ಉಸಿರಾಡಿ,ಉಸಿರನ್ನು ಹೊರ ಬಿಟ್ಟು, ಭುಜಗಳನ್ನು ಸಾಧ್ಯವಾದಷ್ಟು ನೆಲದಿಂದ ಮೇಲೆತ್ತಿ, ಅದರಂತೆಯೇ ಎದೆ, ಮುಂಡ, ಟೊಂಕಗಳು, ತೊಡೆಗಳು ಮತ್ತು ಮೀನಾಖಂಡಗಳನ್ನು ಮೇಲೆತ್ತಬೇಕು.ಅನಂತರ ವಸ್ತಿಕುಹರದಿಂದ ಕಾಲ್ಗಿಣ್ಣುಗಳವರೆಗೂ ನೆರವಾಗುವಂತೆ ಕಾಲುಗಳನ್ನು ಚಾಚಿಡಬೇಕು. ಆಮೇಲೆ ಕಾಲ ಹಿಮ್ಮಡಿಗಳನ್ನು  ನೆಲದಮೇಲೆ ಒತ್ತಿಟ್ಟು ಈ ಭಂಗಿಯಲ್ಲಿ ಶಕ್ತಿಗನು ಗುಣವಾದಷ್ಟು ಕಾಲ ಅಂದರೆ ಒಂದೆರಡು ನಿಮಿಷಗಳ ಕಾಲ ನೆಲೆಸಬೇಕು.

8. ತರುವಾಯ, ಪಾದಗಳನ್ನು ತಲೆಯ ಕಡೆಗೆ ಸರಿಸಿ, ಮಂಡಿಗಳನ್ನು ಬಗ್ಗಿಸಿ ಕೈ ಬೆರಳ ಹೆಣಿಗೆಯನ್ನು ಸಡಿಲಿಸಿ, ತಲೆಯನ್ನು ನೆಲದಿಂದ ಮೇಲೆತ್ತಿ ಮುಂಡವನ್ನು ಕೆಳಗಿಳಿಸಿ, ವಿಶ್ರಮಿಸಿಕೊಳ್ಳಬೇಕು.

9. ಈ ಭಂಗಿಯಲ್ಲಿ, ಕತ್ತು, ಎದೆ ಮತ್ತು ಹೆಗಲುಗಳನ್ನು ಚೆನ್ನಾಗಿ ಹಿಗ್ಗಿಸಿ ವಸ್ತಿಕುಹರದ ಭಾಗವನ್ನು ನೆಲದಿಂದ ಸಾಧ್ಯವಾದಷ್ಟೂ ಮೇಲೆತ್ತಿ ಡಬೇಕು, ಮೊದಮೊದಲು, ತಲೆಯು ನೆಲಕ್ಕೆ ಲಂಬಸ್ಥಿತಿಯಲ್ಲಿ  ನಿಲ್ಲುವುದು ಕಷ್ಟ ಅಲ್ಲದೆ ತಲೆ ಮತ್ತು ಮುಂದೋಳು ಜಾರಿ ಬೀಳುವ ಸಂಭವವುಂಟು ಆದುದರಿಂದ ಕಾಲುಗಳನ್ನು ಗೋಡೆಯ ಮೇಲಿರಿಸಿ ಮತ್ತೊಬ್ಬರ ನೆರವಿನಿಂದ ಮೊಣಕೈಗಳನ್ನು ನೆಲದ ಮೇಲೆ ಊರಿಟ್ಟು ಪಾದಗಳು ಮತ್ತು ತಲೆಗಳ ನಡುವಣಂತರವನ್ನು ನೆಲದ ಮೇಲೆ ಸರಿಯಾಗಿ  ಅಳವಡಿಸಿ, ಬೆನ್ನೆಲುಬು ಮತ್ತು ಕಾಲುಗಳನ್ನು ಪೂರ್ಣವಾಗಿ ಹಿಗ್ಗಿಸಿಡಬೇಕು.

ಅಭ್ಯಾಸ ಕ್ರಮ

1. ಮೊದಲು ‘ಸಾಲಂಭ ಶೀರ್ಷಾಸನಒಂದಾದ’ ಭಂಗಿಯಲ್ಲಿ ನಿಲ್ಲಬೇಕು. ಬಳಿಕ ಮಂಡಿಗಳನ್ನು ಬಾಗಿಸಿ ಕಾಲುಗಳನ್ನು ಬೆನ್ನಹಿಂಗಡೆಗೆ ಇಳಿಬಿಟ್ಟು  ಬೇರೆ ಬೇರೆ ಚಲನಗಳಿಗೊಳಗಾಗಿಸುತ್ತ ನೆಲದಮೇಲಿಳಿಸಬೇಕು .

2. ಮೇಲಿನ ಚಲನೆಗಳನ್ನು ಅನುಸರಿಸಿರುವ ಕಾಲದಲ್ಲಿ ನೆಲದಮೇಲೂರಿದ್ದ ಮೊಣಕೈ ಮುಂಗೈಗಳನ್ನು ಮೇಲೆತ್ತದಂತೆಯೂ, ಮತ್ತು ನೆಲದಮೇಲಣ ತಲೆಯ ಸ್ಥಾನವನ್ನು ಬಿಟ್ಟು ಕದಲಿಸದಂತೆಯೂ ಇರಬೇಕು.

3. ಇದಾದ ಮೇಲೆ ಪೃಷ್ಠಗಳನ್ನು ಕುಗ್ಗಿಸಿ ವಸ್ತಿಕುಹದ ಭಾಗವನ್ನು ಮೇಲೆತ್ತಿ ಮಂಡಿ ತೊಡೆ, ಮೀನಖಂಡಗಳನ್ನು ಬಿಗಿಗೊಳಿಸಬೇಕು.

4. ಈ ಭಂಗಿಯಲ್ಲಿ ಒಂದೆರಡು ನಿಮಿಷಗಳ ಕಾಲ ಸಾಮಾನ್ಯ ಉಸಿರಾಟದಿಂದ ನೆನೆಸಲು ಯತ್ನಿಸಬೇಕು.

5. ಆ ಬಳಿಕ,ಮಂಡಿಗಳನ್ನು ಭಾಗಿಸಿ, ಉಸಿರನ್ನು ಹೊರಕ್ಕೆ ಬಿಡುತ್ತ ಕಾಲುಗಳನ್ನು ತೂಗಿ ಮೇಲೆತ್ತಿ, ಸಾಲಾಂಬಶೀರ್ಷಾಸನ ಒಂದಾದ ಭಂಗಿಗೆ ಮತ್ತೆ ಬರಬೇಕು.ಆ ಭಂಗಿಯಲ್ಲಿ ಕೆಲವು ಸೆಕೆಂಡುಗಳ ಕಾಲ ಆಳವಾಗಿ ಉಸಿರಾಟ ನಡೆಸುತ್ತ ನೆಲೆಸಿ,ಬಳಿಕ ಕಾಲುಗಳನ್ನು ನೆಲದ ಮೇಲಿರಬೇಕು. ಆಮೇಲೆ ಬೆರಳುಗಳ ಬಿಗಿ ಹೆಣಿಗೆ ಯನ್ನು ಸಡಿಲಿಸಿ ತಲೆಯನ್ನು ನೆಲದಿಂದ ಮೇಲೆತ್ತಿ ವಿಶ್ರಮಿಸಿಕೊಳ್ಳಬೇಕು.ಇಲ್ಲವೆ‘ಊರ್ಥ್ವಧನುರಾಸನ’ವನ್ನು ಅಭ್ಯಸಿಸಿ, ತಾಡಾಸನದಲ್ಲಿ ಬಂದು ನಿಲ್ಲಬೇಕು.ಇಲ್ಲವೇ ‘ವಿಪರೀತಚಕ್ರಾಸನ’ಕ್ಕೆ ಸರಿಯಬೇಕು.

 ಪರಿಣಾಮಗಳು

     ದೇಹಕ್ಕೆ ಹುರುಪನ್ನು ಕೊಡತಕ್ಕ ಈ ಭಂಗಿಯು ಬೆನ್ನೆಲುಬನನ್ನು ಆರೋಗ್ಯಸ್ಥಿತಿಯಿಂದಿಡುವುದಲ್ಲದೆ,ಎದೆಯನ್ನು ಪೂರಾ ಅಗಲಿಸಲು ನೆರವಾಗುವುದು. ಅಲ್ಲದೆ ಇದರ ಅಭ್ಯಾಸಯು ಇದರಿಂದ ‘ಶೀರ್ಷಾಸನ’ದ ಸತ್ಛಲಗಳಿಗೆಲ್ಲ ಭಾಗಿಯಾಗುವನು. ಜೊತೆಗೆ ಬೆನ್ನಿನ ಕೆಳಗಿನ ತ್ರಿಕೋನಾಕಾರದ ತ್ರಿಕಾಸ್ಥಿಯಲ್ಲಿಯ ನೋವನ್ನು ಹೋಗಲಾಡಿಸಿಕೊಳ್ಳಲು  ಆಸನದ ಅಭ್ಯಾಸವನ್ನು ಸಲಹೆ ಮಾಡಲಾಗಿದೆ.