ಅಮೃತ,ಗುಡೂಚಿ, ಕಾಡು ಹಾಕು, ಕಾಶಿ ಮುಂತಾದ ಹೆಸರುಗಳಿಂದ ಕರೆಯುವ ಈ ಬಳ್ಳಿಯ ಉಪಯೋಗಗಳು ಹಲವು,ಗುಣದಲ್ಲಿ ಅಮೃತ ಸಮಾನ. ಅದರೆ ರುಚಿಯಲ್ಲಿ ಕಹಿ ಮತ್ತು ಒಗರು ಅಮೃತಬಳ್ಳಿಯ ಉತಪ್ಪಿ ಹೇಗಾಯಿತೆಂಬುದಕ್ಕೆ ಒಂದು ಕಥೆಯಿದೆ.
ರಾವಣ ಕಾಮಾತುರನಾಗಿ ಬಲವಂತದಿಂದ ಸೀತೆಯನ್ನು ಲಂಕೆಗೆ ಹೊತ್ತೊಯ್ದುದ್ದು,ನಂತರ ಶ್ರೀರಾಮಚಂದ್ರ ವಾನರ ಸೈನ್ಯದ ಸಹಾಯದಿಂದ ಲಂಕೆಗೆ ದಾಳಿ ಯಿಟ್ಟು ರಾವಣನನ್ನು ನಿರ್ನಾಮ ಗೊಳಿಸಿದ ಸಂಗತಿ ಎಲ್ಲರಿಗೂ ತಿಳಿದದ್ದೇ ಅಲ್ಲವೇ,?ದೇವತೆಗಳಿಗೆ ತೊಂದರೆ ನೀಡುತ್ತಿದ್ದ ರಾವಣ ಹತನಾಗಿದ್ದು ಕಂಡು ದೇವೇಂದ್ರನು ಸಂತಸಗೊಂಡು ಯುದ್ಧದಲ್ಲಿ ಗತಿಸಿದ್ಧ ವಾನರನ್ನು ಅಮೃತಧಾರೆ ಹರಸಿ ಬದುಕಿಸಿದ. ಅಮೃತದಾರೆ ಯಿಂದ ಮತ್ತೆ ಸಂಜೀವರಾದ ವಾನರರ ದೇಹದಿಂದ ಅಮೃತದ ಬಿಂದುಗಳು ಎಲ್ಲೆಲ್ಲಿ ಬಿದ್ದಿದ್ದವೋ ಅಲ್ಲೆಲ್ಲ ಅಮೃತಬಳ್ಳಿ ಹುಟ್ಟಿಕೊಂಡಿತಂತೆ.
ಸಂಸ್ಕೃತದಲ್ಲಿ ಗುಡೂಚಿ, ಅಮೃತ, ಮಧುಪರ್ಣಿ, ಛಿನ್ನ, ಛೀನ್ನರುಹ, ಮತ್ಸಾದನಿ,ಜೀವಂತಿ, ಸೋಮವಲ್ಲಿ ಚಂದ್ರಾಲಕ್ಷಣಿಕಾ, ರಾಸಾಯನಿ, ವಯಸ್ಥಾ, ಕುಂಡಲಿ,ದೀರಾ ಮುಂತಾದ ಪರ್ಯಾಯ ಪದಗಳಿಂದ ಕರೆಯಲ್ಪಡುವ ಅಮೃತಬಳ್ಳಿ ಬಲವನ್ನುಂಟು ಮಾಡುವುದಕ್ಕಾಗಿ ತ್ರಿದೋಷನಾಶಕ ಅಂದರೆ ವಾತ, ಪಿತ್ತ ಮತ್ತು ಕಫಹರವಾಗಿದೆ. ಅಮೃತಬಳ್ಳಿಯನ್ನು ಎಲ್ಲಿಯೇ ನೆಟ್ಟರೂ ಚಿಗುರು ಹುಟ್ಟಿ ಮತ್ತೊಂದು ಹೊಸಬಳ್ಳಿ ಉತ್ಪತ್ತಿಯಾಗುತ್ತದೆ. ಇದು ಒಣಗುವುದಾಗಲೀ ನಾಶವಾಗುವುದಾಗಲಿ ಆಗದಿರುವುದರಿಂದಲೇ, ಅಮೃತ ಎಂಬ ಹೆಸರು ಬಂದಿದೆ. ಇದನ್ನು ತುಂಡು ತುಂಡು ಮಾಡಿದರು ಮತ್ತೆ ಛಲಬಿಡದ ತ್ರಿವಿಕ್ರಮನಂತೆ ಬೆಳೆಯುತ್ತಲೇ ಇರುತ್ತಾದಾದ್ದರಿಂದ ಛಿನ್ನೋದ್ಭ ಲತಾ ಎಂಬ ಹೆಸರು ಮತ್ತು ಕುಂಡಲಾಕೃತಿಯಲ್ಲಿ ಬಳ್ಳಿಯಿರುವುದರಿಂದ ಕುಂಡಲಿ ಎಂಬುದಾಗಿಯೂ ಕರೆಯೋಲಾಗುತ್ತದೆ.
ಸಸ್ಯ ವರ್ಣನೆ :
ವೈಜ್ಞಾನಿಕ ಹೆಸರು ಇದು ಮೆನಿಸ್ಟೆರ್ಮೇಸಿಯೆ ಕುಟುಂಬಕ್ಕೆ ಸೇರಿದೆ. ಆಸರೆಯ ಮೇಲೆ ಹಬ್ಬುವ ಈ ಬಳ್ಳಿಯ ಒರರಾಟ. ಬೂದಿಮಿಶ್ರಿತ ಕಂದು ಬಣ್ಣದ ತೊಗಟೆಯನ್ನು ಹೊಂದಿದ್ದು,ಕೆಲವು ಬಾರಿ ಹಾಲು ಬಿಳುಪಾಗಿ ಕೂಡ ಕಂಡುಬರುತ್ತದೆ ಹಸಿರು ಮಿಶ್ರಿತ ಹಳದಿ ಬಣ್ಣದ ಹೂಗಳಿದ್ದು ಗಂಡು ಮತ್ತು ಹೆಣ್ಣು ಹೂಗಳು ಬೇರೆ ಬೇರೆ ಗಿಡಗಳಲ್ಲಿ ಬಿಡುತ್ತವೆ.ಕಾಯಿಯು ಮಾಗಿದಾಗ ಗಾಢ ಕೆಂಪು ಬಣ್ಣವನ್ನು ಹೊಲುವ, ಹೊಳಪುಳ್ಳ, ದುಂಡಗಿನ ಹಣ್ಣನ್ನು ಕಾಣಬಹುದು.