ಮಂಡ್ಯ: ತನ್ನ ಪತ್ನಿಯ ಜತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಸ್ನೇಹಿತನನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯಲ್ಲಿ ರವಿವಾರ ರಾತ್ರಿ (ಅ.27) ನಡೆದಿದೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಘಟನೆ ನಡೆದಿದೆ. ನಾಗಮಂಗಲ ತಿರುಮಲಾಪುರ ಗ್ರಾಮದ ಅರವಿಂದ್ (23) ಬರ್ಬರವಾಗಿ ಕೊಲೆಯಾದ ಯುವಕ.
ಈತ ತನ್ನ ಸ್ನೇಹಿತರ ಜೊತೆ ಚಿನಕುರುಳಿ ಗ್ರಾಮದ ಕುಮಾರ್ ಎಂಬುವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ರವಿವಾರ ರಾತ್ರಿ ಸ್ನೇಹಿತರ ಜೊತೆ ಮದ್ಯ ಸೇವಿಸಿ ಮಲಗಿದ್ದ. ಈ ವೇಳೆ ಆತನ ಜೊತೆಯಲ್ಲಿ ಮಲಗಿದ್ದ ವಿಜಯ್ ಹಾಗು ಏಳುಮಲೈ ಎಂಬವರು ಸುತ್ತಿಗೆಯಿಂದ ಅರವಿಂದನಿಗೆ ಹೊಡೆದು ಹತ್ಯೆ ಮಾಡಿದ್ದಾರೆ.
ಕೊಲೆ ಮಾಡಿರುವ ಇಬ್ಬರು ಕೂಡ ಅರವಿಂದನ ಸ್ವಗ್ರಾಮ ತಿರುಮಲಾಪುರದವರು. ತನ್ನ ಪತ್ನಿಯ ಜೊತೆ ಅಕ್ರಮ ಸಂಬಂಧಕ್ಕೆ ಹೊಂದಿದ್ದರಿಂದ ಕೊಲೆ ಮಾಡಿರುವುದಾಗಿ ವಿಜಯ್ ಹೇಳಿದ್ದಾನೆ.
ಸ್ಥಳಕ್ಕೆ ಪಾಂಡವಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ಆರಂಭಿಸಿದ್ದಾರೆ. ಆರೋಪಿಗಳನ್ನು ಬಂಧಿಸಿದ್ದಾರೆ.















