ಮನೆ ಅಪರಾಧ ಬಟ್ಟೆ ಮಳಿಗೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಲಕ್ಷಾಂತರ ಬೆಲೆಯ ಬಟ್ಟೆಗಳು ಭಸ್ಮ

ಬಟ್ಟೆ ಮಳಿಗೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಲಕ್ಷಾಂತರ ಬೆಲೆಯ ಬಟ್ಟೆಗಳು ಭಸ್ಮ

0

ಮೈಸೂರು: ಬಟ್ಟೆ ಮಳಿಗೆಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅನಾಹುತ ಸಂಭವಿಸಿದ್ದು, ಲಕ್ಷಾಂತರ ರೂ.ಮೌಲ್ಯದ ಬಟ್ಟೆಗಳು ಸುಟ್ಟು ಭಸ್ಮವಾಗಿರುವ ಘಟನೆ ಕುವೆಂಪುನಗರದ ಕಾಂಪ್ಲೆಕ್ಸ್ ಬಳಿಯ ನೃಪತುಂಗ ರಸ್ತೆಯಲ್ಲಿ ನಡೆದಿದೆ.

ನೃಪತುಂಗ ರಸ್ತೆಯಲ್ಲಿರುವ ರಾಜ್ ಫ್ಯಾಷನ್ಸ್ ಮಳಿಗೆಯಲ್ಲಿಯೇ ಈ ಅಗ್ನಿ ಅವಘಡ ಸಂಭವಿಸಿದೆ. ಇಂದು ಬೆಳಗಿನ ಜಾವ 5ಗಂಟೆಯ ಸುಮಾರಿಗೆ ಮಳಿಗೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ದಟ್ಟವಾಗಿ ಹೊಗೆ ಹೊರ ಹೋಗುತ್ತಿರುವುದನ್ನು ಕಂಡ ದಾರಿ ಹೋಕರು ಮಳಿಗೆಯ ಮಾಲೀಕರಿಗೆ ವಿಷಯ ತಿಳಿಸಿದ್ದು, ಕೂಡಲೇ ಮಾಲೀಕರು ಅಗ್ನಿ ಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಸರಸ್ವತಿಪುರಂ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾದರೂ ಅಷ್ಟರಲ್ಲಾಗಲೇ ಲಕ್ಷಾಂತರ ರೂ.ಮೌಲ್ಯದ ಬಟ್ಟೆಗಳು ಅಗ್ನಿಗೆ ಆಹುತಿಯಾಗಿದ್ದವು. ಮಳಿಗೆಯಲ್ಲಿ  ವಯಸ್ಕರ, ಮಕ್ಕಳ, ಮಹಿಳೆಯರ ಉಡುಪುಗಳ ಹೆಚ್ಚಿನ ಸಂಗ್ರಹವಿತ್ತು ಎನ್ನಲಾಗಿದೆ.

ಈ ಕುರಿತು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಹಣಕಾಸು ಸಚಿವಾಲಯಕ್ಕೆ ಆಗಮಿಸಿದ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ : ಕೆಲವೇ ಕ್ಷಣಗಳಲ್ಲಿ ಬಜೆಟ್ ಮಂಡನೆ
ಮುಂದಿನ ಲೇಖನಕೊರೊನಾ: ದೇಶದಲ್ಲಿಂದು 1.67 ಲಕ್ಷ ಹೊಸ ಕೇಸ್ ಪತ್ತೆ