ಮನೆ ರಾಜಕೀಯ ರಾಜ್ಯಸಭಾ ಚುನಾವಣೆ: ಜೆಡಿಎಸ್ ಗೆ ಅಡ್ಡ ಮತದಾನದ ಭೀತಿ

ರಾಜ್ಯಸಭಾ ಚುನಾವಣೆ: ಜೆಡಿಎಸ್ ಗೆ ಅಡ್ಡ ಮತದಾನದ ಭೀತಿ

0

ಮೈಸೂರು (Mysuru): ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಗೆ ಅಡ್ಡ ಮತದಾನದ ಭೀತಿ ಎದುರಾಗಿದೆ. ಜೆಡಿಎಸ್ ಮತಗಳನ್ನ ಸೆಳೆಯಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಣ ತಂತ್ರಗಾರಿಕೆ ಹೂಡಿದೆ.

ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅನ್ನು ಸೋಲಿಸಬೇಕೆಂದು ಸಿದ್ದರಾಮಯ್ಯ ಹಠಕ್ಕೆ ಬಿದ್ದಿದ್ದಾರೆ. ಮೈಸೂರು ಭಾಗದ ಜೆಡಿಎಸ್ ಶಾಸಕರ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದ್ದು, ಜೆಡಿಎಸ್ ನ ಅಸಮಧಾನಿತ ಶಾಸಕರತ್ತ ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿದೆ.

ಹಳೇ ಮೈಸೂರು ಭಾಗದ ಕೆಲ ಜೆಡಿಎಸ್ ಶಾಸಕರ ಸಂಪರ್ಕದಲ್ಲಿ ಕಾಂಗ್ರೆಸ್‌ ಇದೆ. ಸಿದ್ದು ಹಣತೆಯಂತೆ ಕಾರ್ಯತಂತ್ರ ರೂಪಿಸಿದ್ದು, ಈ ಮೂಲಕ ಮತ್ತೆ ಇತಿಹಾಸ ಮರುಕಳಿಸುವ ಸಾಧ್ಯತೆಯಿದೆ. ಈಗಾಗಲೇ ಸಿದ್ದು ಒತ್ತಾಯದ ಮೇರೆಗೆ ಎರಡನೇ ಅಭ್ಯರ್ಥಿ ಹಾಕಿರುವ ಕಾಂಗ್ರೆಸ್, ರಾಜ್ಯಸಭಾ ಚುನಾವಣೆ ಮೂಲಕ ಜೆಡಿಎಸ್ ಗೆ ಒಳೆಟು ಕೊಡಲು ಸಿದ್ದರಾಮಯ್ಯ ರಿಂದ ತಂತ್ರ ಸಿದ್ಧವಾಗಿದೆ.

ಈ ಹಿಂದೆಯೂ ಜೆಡಿಎಸ್ ನಲ್ಲಿದ್ದ ಶಾಸಕರ ಅಡ್ಡ ಮತದಾನವಾಗಿತ್ತು. ಜೆಡಿಎಸ್ ನಲ್ಲಿದ್ದ ಚಲುವರಾಯಸ್ವಾಮಿ, ಜಮೀರ್ ಅಹಮದ್ ಖಾನ್, ಮಾಗಡಿ ಬಾಲಕೃಷ್ಣರಿಂದ ಅಡ್ಡ ಮತದಾನವಾಗಿತ್ತು. ಬಳಿಕ ಜೆಡಿಎಸ್ ನಿಂದ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಈ ಎಲ್ಲ ಹಿನ್ನೆಲೆಯಲ್ಲಿ ಜೆಡಿಎಸ್ ನಿಂದ ಜಾಣ ನಡೆಯನ್ನಿಡಲು ನಿರ್ಧರಿಸಿದೆ.