ಮನೆ ಸುದ್ದಿ ಜಾಲ ಶ್ರೀರಾಮನ ಬಗ್ಗೆ ಹಗುರ ಹೇಳಿಕೆ: ಆರು ವರ್ಷಗಳ ಬಳಿಕ ಪ್ರಕರಣಕ್ಕೆ ಜೀವ; ವಿಚಾರಣೆಗೆ ಹಾಜರಾದ ಕೆ.ಎಸ್.ಭಗವಾನ್‌

ಶ್ರೀರಾಮನ ಬಗ್ಗೆ ಹಗುರ ಹೇಳಿಕೆ: ಆರು ವರ್ಷಗಳ ಬಳಿಕ ಪ್ರಕರಣಕ್ಕೆ ಜೀವ; ವಿಚಾರಣೆಗೆ ಹಾಜರಾದ ಕೆ.ಎಸ್.ಭಗವಾನ್‌

0

ಮೈಸೂರು (Mysuru): ಮರ್ಯಾದೆ ಪುರುಷೋತ್ತಮ ಶ್ರೀರಾಮನ ಬಗ್ಗೆ ಹಗುರವಾಗಿ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಗತಿಪರ ಚಿಂತಕ ಕೆ.ಎಸ್.ಭಗವಾನ್‌ (K.S.Bhagwan) ಇಂದು ವಿಚಾರಣೆಗೆ ಹಾಜರಾಗಿದ್ದಾರೆ.

ಆ ಮೂಲಕ ಆರು ವರ್ಷಗಳ ಹಿಂದಿನ ವಿವಾದಾತ್ಮಕ ಪ್ರಕರಣಕ್ಕೆ ಮತ್ತೆ ಜೀವಬಂದಿದೆ. ಮೈಸೂರು ಜಿಲ್ಲಾ ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಭಗವಾನ್ ವಿಚಾರಣೆಗೆ ಹಾಜರಾಗಿದ್ದರು. ಪ್ರಕರಣ ವಿಚಾರಣೆಯನ್ನು ಜೂನ್ 20ಕ್ಕೆ ಕೋರ್ಟ್‌ ಮುಂದೂಡಿದೆ.

ಕೆಲ ಹಿಂದೂಪರ ವ್ಯಕ್ತಿಗಳು ಮೌಢ್ಯತೆಯಿಂದ ಹೊರ ಬರಲು ಆಗುತ್ತಿಲ್ಲ. ಮೂಲ ರಾಮಾಯಣವನ್ನು ಇವರ್ಯಾರು ಓದಿಲ್ಲ ಹೀಗಾಗಿ ಅವರಿಗೆ ಗೊತ್ತಿಲ್ಲ. ಇಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ ಎಂದು ಕೆಲ ಹಿಂದೂಪರ ಕಾರ್ಯಕರ್ತರ ವಿರುದ್ದ ಭಗವಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ದೂರುದಾರರಾದ ಪುನೀತ್‌ ಮತ್ತು ಕಾರ್ತಿಕ್‌ ಅವರು, ರಾಮ-ಸೀತೆ ಬಗ್ಗೆ ಹಗುರುವಾಗಿ ಹೇಳಿಕೆ ನೀಡಿರುವುದು ಸರಿಯಲ್ಲ. ಭಗವಾನ್ ಗೆ ತಕ್ಕ ಶಿಕ್ಷೆ ಆಗಬೇಕು. ಆರು ವರ್ಷಗಳ ಬಳಿಕ ಪ್ರಕರಣಕ್ಕೆ ಜೀವ ಬಂದಿರುವುದು ಖುಷಿ ತಂದಿದೆ. ಹಿಂದೂ ದೇವರುಗಳನ್ನು ಸದಾಕಾಲವೂ ಭಗವಾನ್  ಅವಮಾನಿಸುತ್ತಿದ್ದಾರೆ. ಇದನ್ನ ನಾವು ಎಂದಿಗೂ ಸಹಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಭಗವಾನ್‌ ರಾಮ-ಸೀತೆ ಬಗ್ಗೆ ಹಗುರುವಾಗಿ ಮಾತನಾಡಿದ್ದಾರೆ ಎಂದು ಹಿಂದೂಪರ ಕಾರ್ಯಕರ್ತರಾದ ಪುನೀತ್ ಮತ್ತು ಕಾರ್ತಿಕ್‌ ಅವರು ಜಯಲಕ್ಷ್ಮಿಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಎಫ್ಐಆರ್‌ ಕೂಡ ದಾಖಲಾಗಿದೆ.

ಹಿಂದಿನ ಲೇಖನಮಹೇಂದ್ರ ಸಿಂಗ್ ಧೋನಿ ವಿರುದ್ಧ ಎಫ್‌ಐಆರ್‌
ಮುಂದಿನ ಲೇಖನರಾಜ್ಯಸಭಾ ಚುನಾವಣೆ: ಜೆಡಿಎಸ್ ಗೆ ಅಡ್ಡ ಮತದಾನದ ಭೀತಿ