ಈ ಆಸನವು ಹಿಂದಿನ ದತಲೂಕ್ಕಿಂತಲೂ ಕಷ್ಟತರ. ಏಕೆಂದರೆ ಇದರಲ್ಲಿ ತೋಳುಗಳನ್ನು ಪೂರಾ ನೀಳಮಾಡಿ ‘ಅಧೋಮುಖ ವೃಕ್ಷಾಸನ’ದಲ್ಲಿರುವಂತೆ ಪೂರ್ವವಾಗಿ ತೋಳುಗಳ ಮೇಲೆಯೇ ದೇಹವನ್ನು ಸಮತೋಲನಸ್ಥಿತಿಯಲ್ಲಿ ನಿಲ್ಲಿಸಬೇಕು.
ಅಭ್ಯಾಸ ಕ್ರಮ :
1. ಮೊದಲು, ‘ತಾಡಾಸನ’ದಲ್ಲಿ ನಿಲ್ಲಬೇಕು. ಆಮೇಲೆ ಮುಮದಕ್ಕೆ ಬಾಗಿ ಅಂಗೈಗಳನ್ನು ನೆಲದ ಮೇಲೆ ಊರಬೇಕು.ಆಗ ತೋಳುಗಳ ನಡುವಣಂತರ ಭುಜಗಳ ನಡುವಣಂತರವಷ್ಟೇ ಇರಬೇಕು. ಇದರಲ್ಲಿ ತೋಳುಗಳನ್ನು ಪೂರಾ ಹಿಗ್ಗಿಸಿಡಬೇಕಾದುದು ಅಗತ್ಯ.
2. ಬಳಿಕ, ಕಾಲುಗಳನ್ನು ಮೇಲೆತ್ತಿ ಮಂಡಿಗಳನ್ನು ಬಗ್ಗಿಸಿ, ಅನಂತರ ಉಸಿರನ್ನು ಹೊರಬಿಟ್ಟು, ಮುಂಡವನ್ನು ಕಾಲುಗಳನ್ನೂ ತೂಗಿಟ್ಟು ಮೇಲ್ಗಡೆಗೆ ಲಂಬವಾಗಿ ನಿಲ್ಲಿಸಿ, ಕೈಗಳ ಮೇಲೆಯೇ ಸಮತೋಲನಮಾಡಿ, ನೆಲೆಸಬೇಕು.ಇದಾದ ಮೇಲೆ ಕತ್ತನ್ನೂ ತಲೆಯನ್ನೂ ಸಾಧ್ಯವಾದಷ್ಟೂ ನೆಲದಿಂದ ಮೇಲೆತ್ತಬೇಕು. ಇದೇ ಅಧೋಮುಖ ವೃಕ್ಷಾಸನ ಭಂಗಿ
3. ಸಮತೋಲನಸ್ಥಿತಿಯನ್ನು ಗಳಿಸಿದಮೇಲೆ ಉಸಿರನ್ನು ಹೊರಕ್ಕೆ ಬಿಟ್ಟು, ಮಂಡಿಗಳನ್ನು ಭಾಗಿಸಿ, ಬೆನ್ನೆಲುಬು ಮತ್ತು ಎದೆಯನ್ನು ಹಿಗ್ಗಿಸಿ, ಪಾದಗಳನ್ನು ಕೆಳಗಿಳಿಸುತ್ತ,ಹಿಮ್ಮಡಿಗಳು ತಲೆಯಮೇಲೆ ಒರಗಿಸಿರುವಂತೆ ಮಾಡಬೇಕು. ಕಾಲ ಬೆರಳುಗಳನ್ನೂ ತುದಿ ಮಾಡಬೇಕು. ಸಮತೋಲಿಸುವಾಗ ಮಂಡಿಗಳನ್ನು ಮತ್ತು ಕಾಲ್ಗಿಣ್ಣುಗಳನ್ನು ಜೊತೆಗೂಡಿಸಲು ಯತ್ನೀಸಬೇಕು. ಕಣಕಾಲುಗಳು ತಲೆಗೂ ತೋಳುಗಳು ನೆಲಕ್ಕೂ ಲಂಬ ವಾಗು ವಂತಿರಿಸಬೇಕು.ಅಲ್ಲದೆ ಕಣಕಾಲುಗಳನ್ನು ಮತ್ತು ತೋಳುಗಳು ಪರಸ್ಪರ ಸಮಾಂತರವಾಗಿರಬೇಕು.
4. ಈ ಭಂಗಿಯ ಸ್ಥಿತಿಯಲ್ಲಿ ಸಮತೋಲಿಸುವುದು ಅತಿ ಕಷ್ಟ ಇದು, ಈ ಹಿಂದೆ ವಿವರಿಸಿದ ‘ಪಿಂಛಮಯೂರಾಸನ’ ಕ್ಕಿಂತಲೂ ಹೆಚ್ಚು ಕಷ್ಟ.
5. ಈ ಆಸನಾಭ್ಯಾಸದಿಂದ ನೈಪುಣ್ಯವನ್ನು ಗಳಿಸಲು ಕೈ ಮಣಿಕಟ್ಟುಗಳಲ್ಲಿ ಅಸಾಧಾರಣ ಶಕ್ತಿ ಮತ್ತು ಬಿಡದೆ ಇದನ್ನು ಸಾಧಿಸಲೇಬೇಕೆಂಬ ಮನೋದಾರ್ಡ್ಯ ಇವು ಅವಶ್ಯಕ.ಈ ಭಂಗಿಯಲ್ಲಿ ಕತ್ತು,ಹೆಗಲುಗಳು,ಎದೆ ಮತ್ತು ಬೆನ್ನೆಲುಬುಗಳು ಬಹಳ ಇರುವುದರಿಂದಲೂ,ಕಿಬ್ಬೊಟ್ಟೆಯು ಕುಗ್ಗುವುದರಿಂದಲೂ, ಉಸಿರಾಟವು ವೇಗದಿಂದ ಮತ್ತು ಶ್ರಮದಿಂದ ಕೂಡಿರುತ್ತದೆ. ಈ ಭಂಗಿಯಲ್ಲಿ ಸಾಮಾನ್ಯ ಉಸಿರಾಟ ನಡೆಸಲು ಯತ್ನಿಸಿ ಸುಮಾರು 10 15 ಸೆಕೆಂಡುಗಳ ಕಾಲ ನೆರಸಬೇಕು.
6. ಆ ಬಳಿಕ,ಕಾಲುಗಳನ್ನು ತಲೆಯಿಂದಾಚೆ ನೆಲದ ಮೇಲಿಳಿಸಿ ,‘ಊರ್ಧ್ವ ಧನುರಾಸನ’ವನ್ನು ಮಾಡಿ ಮುಗಿಸಿ ತಾಡಾಸನಕ್ಕೆ ಬಂದು ನಿಲ್ಲಬೇಕು. ಇಲ್ಲವೇ ‘ವಿಪರೀತ ಚಕ್ರಾಸನ’ ದ ಭಗಿಗಳನ್ನು ಮಾಡಬೇಕು.
7., ‘ವೃಶ್ಚಿಕಾಸನ’ಅಭ್ಯಾಸದಿಂದ ಬೆನ್ನಿಗೆಗುಂಟಾದ ಶ್ರಮವನ್ನು ಕಳೆದುಕೊಳ್ಳಲು ಮುಂದಕ್ಕೆ ಬಾಗಿ,ಮಂಡಿಗಳನ್ನು ಬಗ್ಗೆ ಬಗ್ಗಿಸದೆ ಅಂಗೈಗಳನ್ನು ನೆಲದ ಮೇಲೆ ಊರಿಡಬೇಕು.
ಪರಿಣಾಮಗಳು :
ಈ ಆಸನಾಭ್ಯಾಸದಿಂದ ಶ್ವಾಸಕೋಶಗಳು ಚೆನ್ನಾಗಿ ಹಿಗ್ಗುವುದಲ್ಲದೆ ಕಿಬ್ಬೊಟ್ಟೆಯ ಮಾಂಸಖಂಡಗಳೂ ಕೂಡ ಹಿಗ್ಗು ವಂತಾಗುತ್ತದೆ.ಅಲ್ಲದೆ ಇಡೀ ಬೆನ್ನೆಲುಬು ಹುರುಪನ್ನು ಪಡೆದು,ಆರೋಗ್ಯ ಸ್ಥಿತಿಯಲ್ಲಿರುತ್ತದೆ..ಈ ಆಸನವು ಶರೀರದ ಅವಯವಗಳ ಮೇಲೆ ಮಾತ್ರವಲ್ಲದೆ ಮನಸ್ಸಿನ ಮೇಲೆಯೂ ಸತ್ವರಿಣಾಮವನ್ನು ಬೀರುತ್ತದೆ. ಮಿದುಳನ್ನೊಳಗೊಂಡ ತಲೆಯೂ ಬುದ್ಧಿ, ಜ್ಞಾನಶಕ್ತಿಗಳಿಗೆ ಕೇಂದ್ರಸ್ಥಾನವಾಗಿರುವಂತೆ ಗರ್ವ, ಕೋಪ, ದ್ವೇಷ, ಅಸೂಯೇ, ಅಸಹನೆ,ಕೆಡುಕುತನ ಮೊದಲಾದ ದುಷ್ಟವರ್ತನೆಯ ಪ್ರೇರಣೆಗೂ ನೆಲ ಯಾಗಿದೆಯೆಂಬುದು ನಿಶ್ಚಯ ಈ ವಿಧವಾದ ದುಷ್ಟ ಮನೋಭಾವಗಳು ಚೇಳಿನ ಬಾಲದಲ್ಲಿರುವ ಈ ವಿಷಕಿಂತಲೂ ಹೆಚ್ಚಿನ ದುಷ್ಪರಿಣಾಮಗಳಮನ್ನುಂಟು ಮಾಡುತ್ತವೆ.ಯೋಗಿಯಾದವನ್ನು ಈ ಆಸನಭ್ಯಾಸದಲ್ಲಿ ಕಾಲುಗಳಿಂದ ತಲೆಯ ಮೇಲ್ಬಾಗವನ್ನು ಸ್ಪರ್ಶಿಸುವ ಉದ್ದೇಶವೇನಿಂದರೆ,ಅದರಲ್ಲಿ ಮಾಡುವ ಈ ಬಗೆಯಾದ ಕೆಟ್ಟ ಯೋಚನೆಗಳನ್ನು ಒದ್ದೋಡಿಸುವುದನ್ನು ಸೂಚಿಸುವುದಕ್ಕಾಗಿ ಅವನು ತಲೆಯನ್ನು ಕಾಳುಗಳಿಂದ ಒದೆಯಾಗು,ತನ್ನಲ್ಲಿ ನಮ್ರತೆ ಸಹನೆ ಶಾಂತಿಯನ್ನು ಮೂಡಿಕೊಂಡುರೂಢವಾಗಿದ್ದ ಅಹಂಕಾರವನ್ನು ಈ ಮೂಲಕ ಹೋಗಲಾಡಿಸಿಕೊಳ್ಳುತ್ತಾನೆ. ಅಹಂಕಾರವು ಅಣಗಿತೆಂದರೆ ಜೀವವು ಸುಖಮಯವಾಗಿರುವುದರಲ್ಲಿ ಸಂಶಯವಿಲ್ಲ.