ಮನೆ ಅಪರಾಧ ಚಿನ್ನಿದಾಂಡು ಆಟದ ವೇಳೆ ಗಲಾಟೆ: ಕೊಲೆಯಲ್ಲಿ ಅಂತ್ಯ

ಚಿನ್ನಿದಾಂಡು ಆಟದ ವೇಳೆ ಗಲಾಟೆ: ಕೊಲೆಯಲ್ಲಿ ಅಂತ್ಯ

0

ಹಾವೇರಿ(Haveri): ಚಿನ್ನಿದಾಂಡು ಆಡುತ್ತಿದ್ದ ಸಂದರ್ಭದಲ್ಲಿ ಆಟಗಾರರ ಹಾಗೂ ವಾಹನ ಮಾಲೀಕನ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ(Murder) ಅಂತ್ಯವಾಗಿರುವ ಘಟನೆ ಶಿ್ಗ್ಗಾವಿ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಬಳಿ ಬುಧವಾರ ಸಂಜೆ ನಡೆದಿದೆ.

ಆಟವಾಡುತ್ತಿದ್ದ ಐವರು ಹಾಗೂ ವಾಹನ ಮಾಲೀಕನ ನಡೆದ ಜಗಳದಲ್ಲಿ ಉಮೇಶ್ ಶಿವಜೋಗಿ ಮಠ (40)  ಸಾವನ್ನಪ್ಪಿದ್ದಾನೆ.

ಘಟನೆ ವಿವರ:

ಬುಧವಾರ ಸಂಜೆ ಎಪಿಎಂಸಿ ಬಳಿಯ ವೇ ಬ್ರಿಡ್ಜ್ ಹತ್ತಿರ ಕೆಲವು ಹುಡುಗರು ಚಿನ್ನಿದಾಂಡು ಆಡುತ್ತಿದ್ದರು. ಈ ವೇಳೆ ಚಿನ್ನಿ, ಉಮೇಶನ ಟಿಪ್ಪರ್​ಗೆ ಬಂದು ಬಡಿದಿದ್ದು, ಜಗಳ ಶುರುವಾಗಿದೆ. ಕೋಪಗೊಂಡು ಐದಾರು ಜನ ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಣಾಮ ಉಮೇಶ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಆತನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿಯೇ ಮೃತಪಟ್ಟಿದ್ದಾನೆ.

ಶಿಗ್ಗಾವಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಹಾವೇರಿ ಎಸ್​ಪಿ ಹನುಮಂತರಾಯ ಹಾಗೂ ಶಿಗ್ಗಾವಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.