ಮನೆ ರಾಜ್ಯ ನೋಂದಣಿ ಮಾಡಿಸಿಕೊಳ್ಳುವವರ ಬದಲಿಗೆ ಅಧಿಕಾರಿಯಿಂದಲೇ ಮುದ್ರಾಂಕ ಶುಲ್ಕ ಪಾವತಿ: ಸ್ನೇಹಮಯಿ ಕೃಷ್ಣ ಆರೋಪ

ನೋಂದಣಿ ಮಾಡಿಸಿಕೊಳ್ಳುವವರ ಬದಲಿಗೆ ಅಧಿಕಾರಿಯಿಂದಲೇ ಮುದ್ರಾಂಕ ಶುಲ್ಕ ಪಾವತಿ: ಸ್ನೇಹಮಯಿ ಕೃಷ್ಣ ಆರೋಪ

0

ಮೈಸೂರು: 50:50 ಅನುಪಾತದಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ಹಂಚಿಕೆಯಾಗಿರುವ ನಿವೇಶನದ ಕ್ರಯ ಪತ್ರಕ್ಕೆ ಮುದ್ರಾಂಕ ಶುಲ್ಕವನ್ನು ಮುಡಾದ ವಿಶೇಷ ತಹಶೀಲ್ದಾರ್‌ ಪಾವತಿ ಮಾಡಿದ್ದಾರೆ ಎಂದು ಆರೋಪಿಸಿ ದೂರುದಾರ ಸ್ನೇಹಮಯಿ ಕೃಷ್ಣ ದಾಖಲೆ ಬಿಡುಗಡೆ ಮಾಡಿದ್ದಾರೆ.

Join Our Whatsapp Group

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಕ್ರಯಪತ್ರವನ್ನು ನೋಂದಣಿ ಮಾಡಿಸಿ ಕೊಳ್ಳುವವರು ಅದಕ್ಕೆ ಸಂಬಂಧಿಸಿದ ಶುಲ್ಕಗಳನ್ನು ಪಾವತಿ ಮಾಡಬೇಕು. ಆದರೆ, ಪಾರ್ವತಿ ಅವರ ಬದಲಿಗೆ ಮುಡಾ ವಿಶೇಷ ತಹಶೀಲ್ದಾರ್‌ ನಿಗದಿತ ಮುದ್ರಾಂಕ ಶುಲ್ಕ ಕಟ್ಟಿದ್ದಾರೆ. ಇದರಿಂದ ಸಿಎಂ ಸಿದ್ದರಾಮಯ್ಯ ಪ್ರಭಾವ ಬೀರಿರುವುದು ಸ್ಪಷ್ಟವಾಗಿದೆ ಎಂದು ದೂರಿದರು.

ಈ ಆರೋಪಕ್ಕೆ ಮುಖ್ಯಮಂತ್ರಿಗಳು ವ್ಯಂಗ್ಯವಾಗಿ ಉತ್ತರಿಸಿರುವುದು ಸರಿಯಲ್ಲ. ಜತೆಗೆ ಅವರ ಪುತ್ರ ಯತೀಂದ್ರ ನಮ್ಮ ತಾಯಿಗೆ ಆರೋಗ್ಯ ಸರಿಯಿಲ್ಲದ ಹಿನ್ನೆಲೆಯಲ್ಲಿ ಸಹಾಯ ಮಾಡಿರಬಹುದು ಎಂದಿದ್ದಾರೆ. ಇದು ಕೂಡ ಸರಿಯಲ್ಲ. ಏಕೆಂದರೆ ಸೈಟ್‌ ಪಡೆಯುವಾಗ ನೋಂದಣಿ ಶುಲ್ಕವನ್ನು ಅವರ ಹೆಸರಿನಲ್ಲಿ ಪಾವತಿಸಬೇಕು. ಆದರೆ ಒಬ್ಬ ಸರ್ಕಾರಿ ಅಧಿಕಾರಿ ಈ ಶುಲ್ಕವನ್ನು ಪಾವತಿ ಮಾಡಿರುವುದು ನೋಡಿದರೆ ಕೆಲವು ಅಧಿಕಾರಿಗಳು ಸಿದ್ದರಾಮಯ್ಯ ಅವರ ಪರವಾಗಿ ಕೆಲಸ ಮಾಡಿರುವುದು ಕಂಡು ಬರುತ್ತೆದೆ ಎಂದು ಆರೋಪಿಸಿದರು.

ಮುದ್ರಾಂಕ ಶುಲ್ಕವನ್ನು ತಹಶೀಲ್ದಾರ್ ಬರೆಸಿದ್ದಾರೆ. ಇದಕ್ಕಿಂತ ಏನು ಸಾಕ್ಷಿ ಬೇಕು? ಎಂದು ಸೋಶಿಯಲ್ ಮೀಡಿಯಾದಲ್ಲಿ ಸ್ನೇಹಮಯಿ ಕೃಷ್ಣ ಪೋಸ್ಟ್​ ಹಾಕಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಭಾನುವಾರ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ್ದ ಸಿಎಂ, ದಾಖಲೆ ಬಿಡುಗಡೆ ವಿವಾದದಲ್ಲಿ ಹಣ ಚೆಕ್ ಮೂಲಕ ಕೊಟ್ಟಿದ್ದಾರಾ? ಸ್ನೇಹಮಯಿ ಕೃಷ್ಣ ಸುಳ್ಳು ಆರೋಪ ಮಾಡುತ್ತಿದ್ದಾರೆ. ದಾನ ಪತ್ರ ಮಾಡೋಕೆ ನನ್ನ ಭಾಮೈದ ಕೊಟ್ಟಿದ್ದು. ತಹಶಿಲ್ದಾರ್ ಏಕೆ ಕೊಡ್ತಾರೆ, ಎಸಿ ಯಾಕೆ ಕೊಡ್ತಾರೆ. ಸುಮ್ಮನೆ ಏನೋ ಹೇಳ್ತಾರೆ ಎಂದು ಅವರ ಆರೋಪವನ್ನು ಸಿಎಂ ತಳ್ಳಿಹಾಕಿದ್ದರು.