ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಎಂ.ಎಸ್.ತಿಮ್ಮಪ್ಪ (83) ಸೋಮವಾರ ರಾತ್ರಿ ನಿಧನರಾಗಿದ್ದಾರೆ.
ಅಕ್ಟೋಬರ್ 11ರಂದು ತಮ್ಮ ಬೆಡ್ ರೂಮ್ ನಲ್ಲಿ ಕಾಲು ಜಾರಿ ಬಿದ್ದಿದ್ದರಿಂದ ಮಿದುಳಿಗೆ ಪೆಟ್ಟಾಗಿತ್ತು. ಅವರನ್ನು ನಗರದ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಹು ಅಂಗಾಂಗ ವೈಫಲ್ಯ ದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ತಿಮ್ಮಪ್ಪ ಅವರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದವರು. ಮನೋವಿಜ್ಞಾನ ಪ್ರಾಧ್ಯಾಪಕ ರಾಗಿದ್ದ ಅವರು ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಹಾಗೂ ಕುಲಪತಿಯೂ ಆಗಿದ್ದರು.
2000ರಲ್ಲಿ ಮಗಳು ಹಾಗೂ 2007 ರಲ್ಲಿ ಪತ್ನಿ ಮೃತಪಟ್ಟಿದ್ದರು. ನಿವೃತ್ತಿ ಬಳಿಕ ತಿಮ್ಮಪ್ಪ ಅವರು ಒಬ್ಬರೇ ವಾಸವಾಗಿದ್ದರು.
ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಜಯನಗರದ ಅವರ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇಂದು 11.30ಕ್ಕೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.