ಮನೆ ಅಪರಾಧ ಅಥಣಿಯಲ್ಲಿ ಹೃದಯಾಘಾತದಿಂದ 9ನೇ ತರಗತಿ ಬಾಲಕಿ ದಾರುಣ ಸಾವು: ಆಟವಾಡುವಾಗಲೇ ಕುಸಿತ

ಅಥಣಿಯಲ್ಲಿ ಹೃದಯಾಘಾತದಿಂದ 9ನೇ ತರಗತಿ ಬಾಲಕಿ ದಾರುಣ ಸಾವು: ಆಟವಾಡುವಾಗಲೇ ಕುಸಿತ

0

ಅಥಣಿ: ಹಿಂದೆಲ್ಲಾ ಹೃದಯಾಘಾತ ಕೇವಲ ವಯಸ್ಸಾದವರಿಗೆ ಮಾತ್ರ  ಆಗುತ್ತಿತು. ಆದರೆ ಈಗ ಕಾಲ ಹಾಗೂ ಜೀವನಶೈಲಿ ಬದಲಾಗಿದೆ. ಯಾವಾಗ ಯಾರಿಗೆ ಬೇಕಾದರೂ ಹೃದಯಾಘಾತ ಆಗಬಹುದು. ಈ ರೋಗ ಚಿಕ್ಕ ಮಕ್ಕಳನ್ನ ಸಹ ಬಿಡುತ್ತಿಲ್ಲ ಎಂಬುದು ಮಾತ್ರ ಬಹಳ ನೋವಿನ ವಿಚಾರ. ಇದೀಗ ಶಾಲೆಯಲ್ಲಿ ಆಟವಾಡುವ ವೇಳೆ ಹೃದಯಾಘಾತ ಸಂಭವಿಸಿ ಬಾಲಕಿ ಮೃತಪಟ್ಟ ಘಟನೆ ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ ನಡೆದಿದೆ.

9ನೇ ತರಗತಿ ಬಾಲಕಿಗೆ ಹೃದಯಾಘಾತ
ಅಥಣಿ ತಾಲೂಕಿನ ಬೇಡರಹಟ್ಟಿ ಗ್ರಾಮದ ವಿದ್ಯಾರ್ಥಿನಿಗೆ ರೇಣುಕಾ ಸಂಜಯ್‌ ಎನ್ನುವ ಬಾಲಕಿ ಹೃದಯಾಘಾತ ಮೃತಪಟ್ಟಿದ್ದು,  ಚಮಕೇರಿ ಗ್ರಾಮದ ಖಾಸಗಿ ಶಾಲೆಯಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ರೇಣುಕಾ ಆಟ ಆಡುತ್ತಿರುವಾಗ ಹೃದಯಾಘಾತ ಉಂಟಾಗಿದೆ.

ಚಿಕಿತ್ಸೆ ಫಲಕಾರಿಯಾಗದೇ ಸಾವು
ವಿದ್ಯಾರ್ಥಿನಿ ಹೃದಯಾಘಾತದಿಂದ ಕುಸಿದು ಬಿದ್ದ ತಕ್ಷಣವೇ ಶಾಲೆಯ ಶಿಕ್ಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯಾವುದೇ ರೀತಿಯ ಚಿಕಿತ್ಸೆ ಫಲಕಾರಿಯಾದೇ ರೇಣುಕಾ ಸಾವನ್ನಪ್ಪಿದ್ದು, ಶಾಲೆಗೆ ಹೋಗಿದ್ದ ಮಗಳು ಮತ್ತೆ ವಾಪಾಸ್‌ ಬರಲೇ ಇಲ್ಲ ಎನ್ನುವುದನ್ನ ಕುಟುಂಬ ಅರಗಿಸಿಕೊಳ್ಳುವುದು ಕಷ್ಟವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.