ಮನೆ ಅಂತರಾಷ್ಟ್ರೀಯ ಗಾಝಾ: ಇಸ್ರೇಲ್ ದಾಳಿಗೆ 24 ಫೆಲೆಸ್ತೀನ್ ನಾಗರಿಕರು ಸಾವು

ಗಾಝಾ: ಇಸ್ರೇಲ್ ದಾಳಿಗೆ 24 ಫೆಲೆಸ್ತೀನ್ ನಾಗರಿಕರು ಸಾವು

0

ಗಾಝಾ : ಇಸ್ರೇಲ್ ಗಾಝಾದಲ್ಲಿ ದಾಳಿಯನ್ನು ಮುಂದುವರಿಸಿದೆ. ಹಸಿದು ಆಹಾರಕ್ಕಾಗಿ ಕಾಯುತ್ತಿದ್ದ ೨೪ ಫೆಲೆಸ್ತೀನ್ ನಾಗರಿಕರು ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಅಲ್ ಜಝೀರಾ ವರದಿ ಮಾಡಿದೆ.

ವರದಿಯ ಪ್ರಕಾರ, ಗಾಝಾ ಪಟ್ಟಿಯ ಮಧ್ಯಭಾಗದಲ್ಲಿರುವ ವಾಡಿ ಗಾಝಾದ ದಕ್ಷಿಣಕ್ಕೆ ಸಲಾಹ್ ಅಲ್-ದಿನ್ ಸ್ಟ್ರೀಟ್‌ನಲ್ಲಿ ಆಹಾರಕ್ಕಾಗಿ ಕಾಯುತ್ತಿದ್ದವರ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಗಾಝಾದ ನಾಸರ್ ವೈದ್ಯಕೀಯ ಸಂಕೀರ್ಣ ಮತ್ತು ಅಲ್ ಅವ್ದಾ ಆಸ್ಪತ್ರೆಯಲ್ಲಿ ಸಂತ್ರಸ್ತರ ಮೃತದೇಹಗಳಿರುವುದು ಕಂಡು ಬಂದಿದೆ ಎಂದು ವರದಿಯು ತಿಳಿಸಿದೆ.

ಗಾಝಾದಲ್ಲಿ ಇಸ್ರೇಲ್ ಮತ್ತು ಯುಎಸ್ ಬೆಂಬಲಿತ ನೆರವು ಕೇಂದ್ರ ಮೇ.೨೭ರಂದು ಪ್ರಾರಂಭಿಸಲಾಗಿದೆ. ಇದೇ ನೆರವು ಕೇಂದ್ರದ ಬಳಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ೪೦೦ಕ್ಕೂ ಅಧಿಕ ಫೆಲೆಸ್ತೀನ್ ನಾಗರಿಕರು ಮೃತಪಟ್ಟಿದ್ದಾರೆ. ೧,೦೦೦ ಜನರು ಗಾಯಗೊಂಡಿದ್ದಾರೆ ಎಂದು ವರದಿಯು ತಿಳಿಸಿದೆ.