ನೋಯ್ಡಾ: ರಸ್ತೆ ದಾಟುತ್ತಿದ್ದ ವೃದ್ಧರೊಬ್ಬರಿಗೆ ಆಡಿ ಕಾರು ಢಿಕ್ಕಿ ಹೊಡೆದು ಪರಾರಿ ಆಗಿರುವ ಘಟನೆ ಭಾನುವಾರ(ಮೇ.26 ರಂದು) ಮುಂಜಾನೆ ನಡೆದಿದೆ.
ನೋಯ್ಡಾದ ಸೆಕ್ಟರ್ 24 ಪ್ರದೇಶದ ಕಾಂಚನಜುಂಗಾ ಅಪಾರ್ಟ್‌ಮೆಂಟ್ ಬಳಿ ಬೆಳಗ್ಗೆ 6.30ಕ್ಕೆ ಜನಕ್ ದೇವ್ ಶಾ ಎಂಬ ವ್ಯಕ್ತಿ ರಸ್ತೆ ದಾಟುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ವೃದ್ಧ ಜನಕ್ ದೇವ್ ಶಾ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ವೃದ್ಧನಿಗ ಢಿಕ್ಕಿ ಹೊಡೆದಿದೆ. ಪರಿಣಾಮ ವೃದ್ಧ ಗಾಳಿಯಲ್ಲಿ ಹಾರಿH ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ಬಳಿಕ ಕಾರಿನೊಂದಿಗೆ ಚಾಲಕ ಪರಾರಿ ಆಗಿದ್ದಾನೆ. ಸುದ್ದಿ ತಿಳಿದ ನಗರದ ಸೆಕ್ಟರ್ 24 ಪೊಲೀಸ್ ಠಾಣೆಯ ತಂಡ ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದೆ.
ಘಟನೆಯ ನಂತರ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆಡಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಮುಂದಿನ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ನೋಯ್ಡಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆಯಾಗಿದೆ.














