ಮನೆ ಉದ್ಯೋಗ ಇಂಡಿಯಾ ಗ್ಯಾಸ್ ಅಥಾರಿಟಿಯಲ್ಲಿ ಅಸೋಸಿಯೇಟ್ ಪೋಸ್ಟ್ಗಳ ನೇಮಕ: ಅರ್ಜಿಗೆ ಅವಧಿ ವಿಸ್ತರಣೆ

ಇಂಡಿಯಾ ಗ್ಯಾಸ್ ಅಥಾರಿಟಿಯಲ್ಲಿ ಅಸೋಸಿಯೇಟ್ ಪೋಸ್ಟ್ಗಳ ನೇಮಕ: ಅರ್ಜಿಗೆ ಅವಧಿ ವಿಸ್ತರಣೆ

0

ಇಂಡಿಯಾ ಗ್ಯಾಸ್ ಅಥಾರಿಟಿ’ಯು ಕಳೆದ ಮಾರ್ಚ್ ತಿಂಗಳಲ್ಲಿ ಅಸೋಸಿಯೇಟ್ ಪೋಸ್ಟ್ ಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿ, ಏಪ್ರಿಲ್ 10 ರವರೆಗೆ ಅರ್ಜಿಗೆ ಅವಕಾಶ ನೀಡಿತ್ತು. ಇದೀಗ ಆಡಳಿತಾತ್ಮಕ ಕಾರಣಗಳಿಂದ ಹಾಗೂ ಅಭ್ಯರ್ಥಿಗಳ ಅನುಕೂಲಕ್ಕಾಗಿ ಅರ್ಜಿ ಅಲ್ಲಿಸಲು ಅವಕಾಶ ವಿಸ್ತರಣೆ ಮಾಡಿದೆ. ಹೊಸ ವೇಳಾಪಟ್ಟಿ ಪ್ರಕಾರ ಆಸಕ್ತರು ಏಪ್ರಿಲ್ 17, 2023 ರವರೆಗೆ ಅರ್ಜಿ ಸಲ್ಲಿಸಬಹುದು.

Join Our Whatsapp Group

GAIL ಅಸೋಸಿಯೇಟ್ ಪೋಸ್ಟ್ ಗಳ ವಿವರ

ಜೂನಿಯರ್ ಅಸೋಸಿಯೇಟ್ (ಟೆಕ್ನಿಕಲ್) : 16

ಸೀನಿಯರ್ ಅಸೋಸಿಯೇಟ್ (ಫೈನಾನ್ಸ್ ಮತ್ತು ಅಕೌಂಟ್ಸ್) : 6

ಸೀನಿಯರ್ ಅಸೋಸಿಯೇಟ್ (ಕಂಪನಿ ಸೆಕ್ರೇಟರಿ) : 2

ಸೀನಿಯರ್ ಅಸೋಸಿಯೇಟ್ (ಟೆಕ್ನಿಕಲ್) : 72

ಸೀನಿಯರ್ ಅಸೋಸಿಯೇಟ್ (ಫೈಯರ್ ಅಂಡ್ ಸೇಫ್ಟಿ) : 12

ಸೀನಿಯರ್ ಅಸೋಸಿಯೇಟ್ (ಮಾರ್ಕೆಟಿಂಗ್) : 6

ಸೀನಿಯರ್ ಅಸೋಸಿಯೇಟ್ (ಹ್ಯೂಮನ್ ರಿಸೋರ್ಸ್) : 6

ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಪ್ಲೊಮ/ ಡಿಗ್ರಿ / ಸ್ನಾತಕೋತ್ತರ ಪದವಿ ಅನ್ನು ಹುದ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಓದಿರಬೇಕು. ಹುದ್ದೆವಾರು ವಿದ್ಯಾರ್ಹತೆಗಳನ್ನು ನೋಟಿಫಿಕೇಶನ್ ನಲ್ಲಿ ಓದಿ ತಿಳಿಯಬಹುದು.

ಅಪ್ಲಿಕೇಶನ್ ಹಾಕಲು ಗರಿಷ್ಠ 32 ವರ್ಷ ವಯಸ್ಸು ದಾಟಿರಬಾರದು. ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮ ಅನ್ವಯವಾಗಲಿದೆ.

ಅರ್ಜಿ ಸಲ್ಲಿಸುವ ದಿನಾಂಕಗಳು

ಅರ್ಜಿ ಸ್ವೀಕಾರ ಆರಂಭವಾದ ದಿನಾಂಕ : 10-03-2023

ಅರ್ಜಿ ಸ್ವೀಕಾರ ಕೊನೆಗೊಳ್ಳುವ ದಿನಾಂಕ: 17-04-2023

ಅರ್ಜಿ ಶುಲ್ಕ ರೂ.100.

SC / ST / PWD ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಅಪ್ಲಿಕೇಶನ್ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿ ಮಾಡಬಹುದಾಗಿದೆ.

ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಅಫೀಶಿಯಲ್ ವೆಬ್ ಸೈಟ್ ವಿಳಾಸ : https://gailgas.com/

ಆಯ್ಕೆ ವಿಧಾನ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ / ಸಂದರ್ಶನ ದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

ಹಿಂದಿನ ಲೇಖನಹಣೆಗೆ ತಿಲಕವನ್ನು ಹಚ್ಚುವುದರಿಂದ ಈ ಪ್ರಯೋಜನಗಳನ್ನೂ ನೀವು ಪಡೆಯಬಹುದು..
ಮುಂದಿನ ಲೇಖನಮಂಗಳೂರು ವಿಶ್ವವಿದ್ಯಾಲಯ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ