ಪ್ರವಾಸೋದ್ಯಮ ಇಲಾಖೆ ಹಾಗೂ ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿವತಿಯಿಂದ ಮಾನಸಗಂಗೋತ್ರಿಯ ಕ್ಲಾಕ್ ಟವರ್ ಬಳಿ ನಡೆದ ಚಿತ್ರಸಂತೆ ಕಾರ್ಯಕ್ರಮದ ಪ್ರಯುಕ್ತ ಭಾವಗೀತೆಗಳ ಗೀತ ಗಾಯನ ಕೇಳುಗರನ್ನು ಭಾವದ ಕಡಲಿಗೆ ನೂಕಿದವು.
ಕಾರ್ಯಕ್ರಮದ ಮೊದಲಿಗೆ ನಿಮ್ಮ ಶರಣರಿಗೆ ವೃಂದಗಾನದ ಮೂಲಕ ಪ್ರಾರಂಭಿಸಿ, ಕೆ.ಎಸ್ ನರಸಿಂಹಸ್ವಾಮಿ ಅವರ ಪ್ರೇಮಗೀತೆ ನಿನ್ನ ಪ್ರೇಮದ ಪರಿಯ, ಇರಬೇಕು ಇರುವಂತೆ, ಕಾಣದ ಕಡಲಿಗೆ ಹಂಬಲಿಸಿದೆ ಮನ ಗೀತೆಯ ಮೂಲಕ ಪ್ರೇಕ್ಷಕರನ್ನು ಭಾವನೌಕೆಗೆ ನೂಕಿತು, ದೀಪವೂ ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕು ಎಂದು ನೆರದಿರುವ ಕೇಳುಗರ ಮನ ತಣಿಸಿತು. ಹೂವು ಹಣ್ಣು ಸಿನಿಮಾದ ನಿಂಗಿ ನಿಂಗಿ ಗೀತೆಗೆ ಪ್ರೇಕ್ಷಕರು ಆನಂದಿಸಿದರು. ನಿತಿನ್ ಮತ್ತು ಚಿಂತನ್ ವಿಕಾಸ್ ರವರು ಕುರಿಗಳು ಸಾರ್ ಕುರಿಗಳು ಗೀತೆಯ ಮೂಲಕ ನೆರದಿಂದ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು. ಗಾಯಕಿ ಶೃತಿರವರ ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲಮ್ಮ ಗೀತೆಯ ಮೂಲಕ ಅಮ್ಮನ ನೆನಪಿಸಿದರು.
ಗಾಯನದಲ್ಲಿ ನಿತಿನ್ ರಾಜ ರಾಮ ಶಾಸ್ತ್ರಿ, ನಾಗೇಶ್ ಕಂದೇಗಾಲ, ಚಿಂತನ್ ವಿಕಾಸ್, ಶೃತಿ ತುಮಕೂರು, ಭವತರಣಿ, ಪ್ರಭು ಸೊನ್ನ ಋತಿಕ್ ಸಿ ರಾಜರು ನೆರದಿಂದ ಪ್ರೇಕ್ಷಕರನ್ನು ರಂಜಿಸಿದರು.