ಮೈಸೂರು: ಮೈಸೂರು ಬ್ಯೂಟಿಷಿಯನ್ ವೆಲ್ ಫ್ಲೇರ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ತ್ರಿಷಿಕಾ ಕುಮಾರಿ ಯದುವೀರ್ ಒಡೆಯರ್ ಅವರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದಿಂದ ಜಾರಿ ಮಾಡಿರುವ ನಾರಿಶಕ್ತಿ ಉತ್ತೇಜಿಸುವ ಕಾರ್ಯಕ್ರಮಗಳ ಸ್ಮರಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರ ನಾಲ್ಕು ಶಕ್ತಿಗಳಾದ ನಾರಿ ಶಕ್ತಿ, ಯುವಶಕ್ತಿ, ರೈತಶಕ್ತಿ ಬಡವರ್ಗದವರು ಇವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಅದರಲ್ಲೂ ನಾರಿ ಶಕ್ತಿಯನ್ನು ಉತ್ತೇಜಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಮುದ್ರಾಯೋಜನೆ ಅಡಿಯಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು ಇದರಿಂದ ಸಾಕಷ್ಟು ಮಹಿಳೆಯರು ಲಾಭವನ್ನು ಪಡೆದಿದ್ದಾರೆ ಹಾಗೂ ಕೇಂದ್ರ ಸರ್ಕಾರವು ಮಹಿಳೆಯರಿಗೆ ಶೇಕಡ 33ರಷ್ಟು ರಿಸರ್ವೇಶನ್ ಅನ್ನು ನೀಡಿರುವುದನ್ನು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು.
ಮಾಜಿ ಸಚಿವ ಎಸ್.ಎ ರಾಮದಾಸ್, ಆಲ್ ಇಂಡಿಯಾ ಬ್ಯೂಟಿಷಿಯನ್ ವೆಲ್ ಫ್ಲೇರ್ ಅಸೋಸಿಯೇಷನ್ ಅಧ್ಯಕ್ಷರಾದ ಉಮಾ ಜಾದವ್ ಮೈಸೂರು ಅಸೋಸಿಯೇಷನ್ ಅಧ್ಯಕ್ಷರಾದ ವೇದ ರೈ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಅಧ್ಯಕ್ಷರಾದ ರಘುಕೌಟಿಲ್ಯ ಮೈಸೂರು ನಗರದ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ನಾಗೇಂದ್ರ ಮೈಸೂರು ಮಹಿಳಾ ಮೋರ್ಚ ನಗರ ಅಧ್ಯಕ್ಷರಾದ ರೇಣುಕಾ ಗಣ್ಯರುಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.