ಮನೆ ರಾಜಕೀಯ ಪರೀಕ್ಷೆಗೆ ಗೈರು ಹಾಜರಾಗಬೇಡಿ; ನಜ್ಮಾ ನಜೀರ್

ಪರೀಕ್ಷೆಗೆ ಗೈರು ಹಾಜರಾಗಬೇಡಿ; ನಜ್ಮಾ ನಜೀರ್

0

ಬೆಂಗಳೂರು: ರಾಜ್ಯದ ಹಿಜಾಬ್-ಕೇಸರಿ ಶಾಲು ವಿವಾದ ರಾಷ್ಟ್ರಾದ್ಯಂತ ಸದ್ದುಮಾಡುತ್ತಿರುವ ಬೆನ್ನಲ್ಲೆ ವಿರೋಧಿಗಳ ಷಡ್ಯಂತ್ರವು ನಿಮ್ಮನ್ನು ಶಿಕ್ಷಣದಿಂದ ವಂಚಿತರಾಗಿಸುವ ಹುನ್ನಾರವೇ ಆಗಿದೆ, ಆದ್ದರಿಂದ ಯಾವುದೇ ಕಾರಣಕ್ಕೂ ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರು ಹಾಜರಾಗಬೇಡಿ ಎಂದು ಜೆಡಿಎಸ್ ಮುಖಂಡೆ ನಜ್ಮಾ ನಜೀರ್ ಕಿವಿಮಾತು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರೀತಿಯ ಮಕ್ಕಳೇ, ನೆನಪಿರಲಿ ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ಸಹ ಶಾಲೆಯಿಂದ ಅಂದು ಹೊರಹಾಕಿದ್ದರು. ಅದರ ಪ್ರತಿಕಾರವಾಗಿ ಸಂವಿಧಾನ ರಚಿಸಿ, ಅದರ ಶಿಲ್ಪಿಯೇ ಅವರಾದರು. ನಾವಿಂದು ಅವರ ಮಾರ್ಗದರ್ಶನದ ಗುಲಾಮರಷ್ಟೇ . ನಿಮ್ಮ ಹೋರಾಟದ ಪ್ರತಿಫಲ, ಪ್ರತಿಕಾರ, ಸ್ವಲ್ಪ ತಡವಾದರೂ ಪರವಾಗಿಲ್ಲ. ಪರಿಣಾಮಕಾರಿಯಾದ ಶಾಶ್ವತ ಪರಿಹಾರವಾಗಬೇಕಾದರೆ ನಮ್ಮ ಶಿಕ್ಷಣ ಮುಂದುವರೆಯಲೇಬೇಕು, ಮುಂದುವರಿಸಲೇಬೇಕು. ಸದ್ಯ ಈ ವ್ಯಾಜ್ಯಾವು ಘನ ನ್ಯಾಯಲಯದಲ್ಲಿರುವುದರಿಂದ ಸರ್ಕಾರದ ಆದೇಶವನ್ನು ಪಾಲಿಸೋಣ, ಶಿಕ್ಷಿತರಾಗೋಣ ಎಂದು ಕರೆ ನೀಡಿದ್ದಾರೆ.

ಇನ್ನು ಹಿಜಾಬ್ ವಿವಾದಕ್ಕೆ ಕುರಿತು ನಿನ್ನೆಯೂ ಟ್ವೀಟ್ ಮಾಡಿದ್ದ ನಜ್ಮಾ ನಜೀರ್, ನೀನು ಈ ಮುಂಚೆ ಹಿಜಾಬ್ ಧರಿಸುತ್ತಿರಲಿಲ್ಲ, ಕಳೆದ ಎರಡ್ಮೂರು ವರ್ಷದಿಂದಷ್ಟೇ ಧರಿಸುತ್ತಿದ್ದೀಯಾ ಎನ್ನುವವರಿಗೆ ನಾನು ಕೇಳಲು ಇಷ್ಟ ಪಡುವುದಿಷ್ಟೆ, ನಿಮ್ಮಂತಹ ದೊಣ್ಣೆ ನಾಯಕರನ್ನು ಕೇಳಿ ನನ್ನ ದೇಹದಲ್ಲಿ ಬದಲಾವಣೆಗಳು ಆಗಿಲ್ಲ. ಜೊತೆಗೆ ನಾನು ಯಾವ ಉಡುಪು ಧರಿಸಬೇಕು ಎಂದು ನಿರ್ಧರಿಸುವುದಕ್ಕೆ ನೀವ್ಯಾರು ಅಲ್ಲ, ನನ್ನ ಉಡುಪು ನನ್ನ ಇಷ್ಟ ಎಂದು ಹೇಳಿದ್ದಾರೆ.

ಆ ಹೆಣ್ಣುಮಕ್ಕಳನ್ನು ನಾನು ಗೌರವಿಸುವುದು ಯಾಕೆಂದರೆ “ನಮ್ಮ ಆಯ್ಕೆಗೆ ಮನ್ನಣೆ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಶಾಲೆ ಎಂಬ ದೇಗುಲಕ್ಕೆ ಆ ಹೆಣ್ಣು ಮಕ್ಕಳು ಕಲ್ಲು ಹೊಡೆಯಲಿಲ್ಲ, ನಮ್ಮ‌ ದೇಶದ- ನಮ್ಮ ನಾಡಿನ ಧ್ವಜಗಳನ್ನು ಹಾರಿಸುವ ಧ್ವಜಸ್ತಂಭದಲ್ಲಿ ಧಾರ್ಮಿಕ ಧ್ವಜಗಳನ್ನು ಹಾರಿಸಲಿಲ್ಲ, ಕಿತ್ತಾಡಿಕೊಂಡು ಯಾರಿಗು ಚಾಕುವಿನಿಂದ ಇರಿಯಲೂ ಇಲ್ಲ. ಬದಲಾಗಿ ದೇಶದ ನ್ಯಾಯಾಂಗದ ಮೊರೆ ಹೋಗಿದ್ದಾರೆ, ಇದೇ ನಿಜವಾದ ದೇಶಪ್ರೇಮ. ದೇಶ ಮತ್ತು ಧರ್ಮ‌ ಎರಡನ್ನು ಗೌರವಿಸುವವರು, ರಕ್ಷಿಸುವವರು ಹೆಣ್ಣು ಮಕ್ಕಳೇ ಎಂದು ಟ್ವೀಟ್ ಮಾಡಿದ್ದರು.

ಸದ್ಯ ಕರ್ನಾಟಕ ಹೈಕೋರ್ಟ್‌ನಲ್ಲಿ ಹಿಜಾಬ್ ಅರ್ಜಿ ವಿಚಾರಣೆ ನಡೆಯುತ್ತಿದೆ.

ಹಿಂದಿನ ಲೇಖನ7 ರಾಜ್ಯಗಳಲ್ಲಿ 14 ವಿವಾಹ: ವ್ಯಕ್ತಿಯ ಬಂಧನ
ಮುಂದಿನ ಲೇಖನ60 ವರ್ಷದ ದಿನಗೂಲಿ ಕಾರ್ಮಿಕ ಈಗ ಫೇಮಸ್‌ ಮಾಡೆಲ್‌