ಮನೆ ಸುದ್ದಿ ಜಾಲ ಕೊರೊನಾ ಕಳೆಯಲಿ ಎಂದು ಮೈಸೂರಿನಿಂದ ಶಿರಡಿಗೆ ಭಕ್ತನ ಪಾದಯಾತ್ರೆ

ಕೊರೊನಾ ಕಳೆಯಲಿ ಎಂದು ಮೈಸೂರಿನಿಂದ ಶಿರಡಿಗೆ ಭಕ್ತನ ಪಾದಯಾತ್ರೆ

0

ಮೈಸೂರು(Mysuru): ಕೊರೊನಾ ಸಂದರ್ಭದಲ್ಲಿ ಮಾಡಿಕೊಂಡಿದ್ದ ಹರಕೆ ತೀರಿಸಲು ಮೈಸೂರಿನ ಭಕ್ತರೊಬ್ಬರು ಮಹಾರಾಷ್ಟ್ರದ ಶಿರಡಿಗೆ ಬರೋಬ್ಬರಿ 1052 ಕಿ.ಮೀ. ದೂರ ಪಾದಯಾತ್ರೆ ಕೈಗೊಂಡಿದ್ದಾರೆ.

ಮೈಸೂರು ತಾಲೂಕಿನ ಏಳಿಗೆ ಹುಂಡಿ ಗ್ರಾಮದ ನಿವಾಸಿ ರಾಜೇಂದ್ರ ಅವರೇ ಮಹಾರಾಷ್ಟ್ರದ ಶಿರಡಿಗೆ ಪಾದಯಾತ್ರೆ ಕೈಗೊಂಡಿರುವ ಭಕ್ತ. ಕೊರೊನಾ ಕಡಿಮೆಯಾದರೆ ಬರಿಗಾಲಲ್ಲಿ ಬಂದು ದೇವರ ದರ್ಶನ ಮಾಡುತ್ತೇನೆ ಎಂದು ರಾಜೇಂದ್ರ ಅವರು ಹರಕೆ ಕಟ್ಟಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪಾದಯಾತ್ರೆ ನಡೆಸಿ ಹರಕೆ ತೀರಿಸಲು ಮುಂದಾಗಿದ್ದಾರೆ.

ಮೇ 12 ರಿಂದ ಮುಂಜಾನೆ 5.30ಕ್ಕೆ ಸ್ವಗ್ರಾಮದಿಂದ ಪಾದಯಾತ್ರೆ  ಕೈಗೊಂಡಿದ್ದಾರೆ. ಮೂಲತಃ ಶಾಲಾ ಬಸ್ ಚಾಲಕರಾಗಿರುವ ಇವರು ಸದ್ಯ ಶಾಲೆ ರಜೆ ಇರುವ ಹಿನ್ನೆಲೆಯಲ್ಲಿ 21 ದಿನಗಳ ಕಾಲ ನಾಗಮಂಗಲ, ಬೆಳ್ಳೂರ್ ಕ್ರಾಸ್, ಹೊಸಪೇಟೆ, ಬಳ್ಳಾರಿ ಮಾರ್ಗವಾಗಿ ಪಾದಯಾತ್ರೆ ಆರಂಭಿಸಿದ್ದಾರೆ.

ಹಿಂದಿನ ಲೇಖನಕೌಟುಂಬಿಕ ಕಲಹ: ಅಳಿಯನನ್ನೇ ಕೊಂದ ಮಾವ
ಮುಂದಿನ ಲೇಖನವನ್ಯಜೀವಿ ಮಾಂಸ ಮಾರಾಟ ಮಾಡುತ್ತಿದ್ದ ಹೋಟೆಲ್​ ಮೇಲೆ ದಾಳಿ: ಪ್ರಾಣಿಗಳ ರಕ್ಷಣೆ