ಚೆನ್ನೈ(Chennai): ನಂದಂಬಾಕ್ಕಂ ರಸ್ತೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಬ್ ಇನ್ಸ್ಪೆಕ್ಟರ್ಗೆ(Sub inspector) ಆಟೋ(Auto) ಗುದ್ದಿಸಿ ಚಾಲಕ ಪರಾರಿಯಾಗಿದ್ದು, ಸಬ್ ಇನ್ಸ್‌ಪೆಕ್ಟರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಸಮೀಪದ ಸಿಸಿಟಿವಿಯಲ್ಲಿ(CCTV) ಸೆರೆಯಾಗಿದೆ.
ಸಬ್ ಇನ್ಸ್‌ಪೆಕ್ಟರ್ ಬೋನ್‌ರಾಜ್ ನಂದಂಬಾಕ್ಕಂ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಏಪ್ರಿಲ್ 3 ರಂದು ರಾತ್ರಿ ನಂದಂಬಾಕ್ಕಂ ರಸ್ತೆಯಲ್ಲಿ ಸಿಬ್ಬಂದಿ ಜೊತೆ ವಾಹನ ತಪಾಸಣೆಯಲ್ಲಿ ತೊಡಗಿದ್ದರು. ಈ ವೇಳೆ ಎದುರಿನಿಂದ ವೇಗವಾಗಿ ಬರುತ್ತಿದ್ದ ಆಟೋ ರಿಕ್ಷಾ ನಿಲ್ಲಿಸುವಂತೆ ಬೋನ್‌ರಾಜ್ ಚಾಲಕನಿಗೆ ಸೂಚಿಸಿದ್ದಾರೆ. ಆದ್ರೆ ಚಾಲಕ ವಾಹನವನ್ನು ನಿಲ್ಲಿಸದೇ ಸಬ್ ಇನ್ಸ್‌ಪೆಕ್ಟರ್ ಮೇಲೆ ಗುದ್ದಿಸಿ ಪರಾರಿಯಾಗಿದ್ದಾನೆ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ..