ಮನೆ ಜ್ಯೋತಿಷ್ಯ ಅಭುಕ್ತ ಮೂಲದ ಪ್ರಯಾಣ

ಅಭುಕ್ತ ಮೂಲದ ಪ್ರಯಾಣ

0

 ಅಭುಕ್ತ ಮೂಲಂ ಘಟಿಕಾಚತುಷ್ಟಮಯಂ ಜ್ಯೇಷ್ಠಾಂತ್ಯ ಮೂಲಾದಿಭವಂ ಹಿ ನಾರದಃ|

 ವಶಿಷ್ಠ ಏಕದ್ಯಿಘಟಿಮಿತಂ ಜಗೌ ಬೃಹಸ್ವತಿಸ್ತ್ವೇಕಘಟೀಪ್ರಮಾಣಕಮ್||

Join Our Whatsapp Group

    ಅಭುಕ್ತಮೂಲದ ಪ್ರಯಾಣ: ಜೇಷ್ಠಾದ ಅತ್ಯಂತ ಮತ್ತು ಮೂಲಾದ ಆದಿಯ 3+3 ಗಳಿಗೆ ಸೇರಿ ಅಭುಕ್ತ ಮೂಲವಾಗುತ್ತದೆ, ಇದು ನಾರದ ಮುನಿಗಳ ವಚನವಾಗಿದೆ ಜೇಷ್ಠಾದ ಒಂದು ಮತ್ತು ಮೂಲಾದ ಎರಡು ಗಳಿಗೆ ಸೇರಿ ಅಭುಕ್ತ ಮೂಲವಾಗುತ್ತದೆ, ಇದು ವಿಶಿಷ್ಟರ ವಚನವಾಗಿದೆ ಮತ್ತು ಜೇಷ್ಠಾದ ಅತ್ಯಂತ ಅರ್ಥ ಹಾಗೂ ಮೂಲಾದ ಆದಿಯ ಅರ್ಧ ಸೇರಿ ಒಂದು ಗಳಿಗೆಅಭುಕ್ತಮೂಲ ಎಂದು ಪುರಸ್ಪತಿಗಳು ಹೇಳಿರುವರು.

 ಅಭುಕ್ತಮೂಲದಲ್ಲಿ ವಿಶೇಷ:

 *ಅಥೋಚ್ಯುರನ್ಯೇ ಪ್ರಥಮಾಷ್ಟಗಂಟ್ಯೇ ಮೂಲಸ್ಯ ಶಾಕ್ರಾಂತಿಮ ಪಂಚನಾಯಃ|

 *ಜಾತಂ ಶಿಶುಂ ತತ್ರ ಪರಿತ್ಯಜೇದ್ವಾಮುಖಂ ಪಿತಾಸ್ಯಾಷ್ಟಸಮಾನ ಪಶ್ಯೇತ||

   | ಅನ್ಯ ಆಚಾರ್ಯರು ಹೀಗೆ ಹೇಳಿದ್ದಾರೆ ಮೂಲಾದಿಯ ಎಂಟುಗಳಿಗೆ ಮತ್ತು ಜೇಷ್ಠಾದ ಅಭುಕ್ತ ಮೂಲದಲ್ಲಿ ಯಾವ ಸಂತಾನ ಜನಿಸುತ್ತದೋ ಅದನ್ನು ತೆಜಿಸಿಬಿಡಬೇಕು ಅಥವಾ ತಂದೆಯು ಅವರ ಮುಖವನ್ನು ಎಂಟು ವರ್ಷಗಳವರೆಗೆ ನೋಡಬಾರದು.

 ಮೂಲ ಆಶ್ಲೇಷ ಫಲ :

ಆದ್ಯೇಪಿತಾ ನಾಶಮುಪೈತಿ ಮೂಲಪಾದೇ ಜನನೀತೃತೀಯೇ|

     | ಮೂಲಾದ ಪ್ರಥಮ ಚರಣದಲ್ಲಿ ಜನ್ಮವಾದರೆ ತಂದೆಯ ನಾಶ,ದ್ವಿತೀಯ ಚರಣದಲ್ಲಿ ಜನ್ಮವಾದರೆ ತಾಯಿಯ ನಾಶ, ತೃತೀಯ ಚರಣದಲ್ಲಾದರೆ ಧನನಾಶ ಮತ್ತು ನಾಲ್ಕನೇಯ ಚರಣದಲ್ಲಾದರೆ ಶುಭವಾಗುತ್ತದೆ. ಆಶ್ಲೇಷಾದ ಪ್ರಥಮ ಚರಣ ಶುಭ, ದ್ವಿತೀಯದಲ್ಲಿ ಧನನಾಶ, ತೃತೀಯದಲ್ಲಿ ತಾಯಿಯ ನಾಶ, ಚತುರ್ಥದಲ್ಲಿ ತಂದೆಯ ನಾಶವಾಗುತ್ತದೆ.ನಕ್ಷತ್ರಗಳ ದೋಷದ ನಿವೃತ್ತಿಗಾಗಿ ಶಾಂತಿ ಮಾಡಿದರೆ ಶುಭವಾಗುತ್ತದೆ.